Home latest ಲವ್ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ಹುಡುಗನ ಹೇಳಲು ಕಾರಣ ಏನು ಗೊತ್ತಾ ?

ಲವ್ ಮಾಡಲು ಯಾರೂ ಮುಂದೆ ಬರುವುದಿಲ್ಲವೆಂದು ಹುಡುಗನ ಹೇಳಲು ಕಾರಣ ಏನು ಗೊತ್ತಾ ?

Hindu neighbor gifts plot of land

Hindu neighbour gifts land to Muslim journalist

ಓರ್ವ ವ್ಯಕ್ತಿ 30 ವರ್ಷದೊಳಗೆ ಎಷ್ಟು ಮಕ್ಕಳಿಗೆ ತಂದೆಯಾಗಬಹುದು ? ಅಬ್ಬಬ್ಬಾ ಎಂದರೆ 8 ಅಂತಾ ಅಂದಾಜು ಮಾಡುವ ಸರಿ. ಆದರೆ ಇಲ್ಲೊಬ್ಬ
30 ವರ್ಷದ ಯುವಕನೊಬ್ಬನಿಗೆ ಜಗತ್ತಿನಾದ್ಯಂತ 47 ಮಕ್ಕಳಿದ್ದಾರೆ. ಶೀಘ್ರದಲ್ಲೇ ಇನ್ನೂ 10 ಮಕ್ಕಳ ತಂದೆಯಾಗಲಿದ್ದಾನೆ! ಏನು ಆಶ್ಚರ್ಯ ಆಯಿತಾ ? ಹೌದು…ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಕಳೆದ 8 ವರ್ಷಗಳಲ್ಲಿ ಈ ಯುವಕ ಸುಮಾರು 50 ಮಕ್ಕಳಿಗೆ ತಂದೆಯಾಗಿದ್ದಾನೆ. ಆದರೆ ನಾವು ಇಲ್ಲಿ ಹೇಳ ಹೊರಟಿರುವುದು ಈತನ ಮಕ್ಕಳ ಸಂಖ್ಯೆಗಳನ್ನಲ್ಲ.

ಈತನನ್ನು ಮದುವೆಯಾಗೋಕೆ ಅಥವಾ ಲವ್ ಮಾಡಲು ಯಾರೂ ಮುಂದೆ ಬರುತ್ತಿಲ್ಲವಂತೆ. ಅಮೆರಿಕದ ಈ ಯುವಕನಿಗೆ ಇಷ್ಟು ಮಕ್ಕಳ ಅಪ್ಪನಾಗಿರುವುದೇ ಮುಳುವಾಗಿದೆ.

ಹೌದು, ಕ್ಯಾಲಿಫೋರ್ನಿಯಾದ ಕೈಲಿ ಕೋಡ್ರೆ ವೀರ್ಯ ದಾನ ಮಾಡುವ ನಿರ್ಧಾರದಿಂದ ಇಷ್ಟು ಮಕ್ಕಳ ತಂದೆಯಾಗಿದ್ದಾರೆ. ಇದರಿಂದ ಆತನ ನಿಜವಾದ ಪ್ರೀತಿಗೆ ಧಕ್ಕೆ ಆಗಿದೆ.

ಕೈಲಿ ಹೇಳುವ ಪ್ರಕಾರ ಆರಂಭದಲ್ಲಿ ಈತನ ಜೀವನ ಸುಮಾರಾಗಿ ನಡೆಯುತ್ತಿತ್ತು. ಆದರೆ ಯಾವುದೇ ಸಂಬಂಧಗಳು ದೀರ್ಘಕಾಲ ಬಾಳುತ್ತಿರಲಿಲ್ಲ. ಇದೀಗ ಆತನ ಜೊತೆ ಸಂಬಂಧ ಬೆಳೆಸಲು ಯುವತಿಯರು ತಾ ಮುಂದು ನಾ ಮುಂದು ಎಂದು ಬರುತ್ತಾರಂತೆ. ಆದರೆ ಮಕ್ಕಳನ್ನು ಪಡೆಯುವುದಷ್ಟೇ ಅವರ ಗುರಿ ಎಂದು ಅಳಲು ತೋಡಿಕೊಂಡಿದ್ದಾನೆ. ಇವನಿಗೆ ಆದಷ್ಟು ಬೇಗ ಸಂಗಾತಿ ದೊರೆಯಲಿ ಎಂದು ನಾವು ಹಾರೈಸೋಣ