Home latest Free bus travel: ಶಕ್ತಿ ಯೋಜನೆ ಎಫೆಕ್ಟ್ : ಬುರ್ಖಾ ಧರಿಸಿ ಬಸ್ಸಲ್ಲಿ ಫ್ರೀಯಾಗಿ ಪ್ರಯಾಣಿಸಿದ...

Free bus travel: ಶಕ್ತಿ ಯೋಜನೆ ಎಫೆಕ್ಟ್ : ಬುರ್ಖಾ ಧರಿಸಿ ಬಸ್ಸಲ್ಲಿ ಫ್ರೀಯಾಗಿ ಪ್ರಯಾಣಿಸಿದ ವ್ಯಕ್ತಿ – ಸಿಕ್ಕಿಬಿದ್ದದ್ದೇ ವಿಚಿತ್ರ !!

Free bus travel

Hindu neighbor gifts plot of land

Hindu neighbour gifts land to Muslim journalist

Free bus travel : ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು(Free bus travel)ಕಲ್ಪಿಸಿರುವುದರಿಂದ ದಿನಂಪ್ರತಿ ಒಂದೊಂದು ವಿಚಿತ್ರ ಘಟನೆಗಳು ನಡೆಯುತ್ತಿವೆ. ಅಂತೆಯೇ ಇದೀಗ ವ್ಯಕ್ತಿಯೊಬ್ಬ ಬುರ್ಕಾ ಧರಿಸಿ ಬಸ್ನಲ್ಲಿ ಫ್ರೀಯಾಗಿ ಪ್ರಯಾಣಿಸಿದ ಘಟನೆ ಧಾರವಾಡ(Dharwadda) ಜಿಲ್ಲೆಯ ಕುಂದಗೋಳ(kundagola) ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಹೌದು, ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್ ನಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಭಯ ಬೇರೆ. ಜೊತೆಗೆ ನಮಗೂ ಫ್ರೀ ಇದ್ದಿದ್ದರೆ ಚೆನ್ನಾಗಿರ್ತಿತ್ತಲ್ವಾ? ಎಂಬ ಕೊರಗು ಒಂದೆಡೆ. ಈ ನಡುವೆಯೂ ಪುರುಷರು ಬಸ್ ನಲ್ಲಿ ಪ್ರಯಾಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಅಂತೆಯೇ ಇದೀಗ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ(Samshi) ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ, ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಲಾದ ಶಕ್ತಿ ಯೋಜನೆಯ ಲಾಭ ಪಡೆಯಲು ಬುರ್ಖಾ(Burkha) ಧರಿಸಿ ಬಂದು ಗ್ರಾಮಸ್ಥರ ಕೈಗೆ ತಗಲಾಕೊಂಡಿದ್ದಾನೆ.

ಹೌದು, ಶಕ್ತಿ ಯೋಜನೆ(Shakti yojane) ಲಾಭ ಪಡೆಯಲು ಪುರುಷನೊಬ್ಬ ಬುರ್ಖಾ ಧರಿಸಿ ಪ್ರಯಾಣ ಮಾಡಿದ್ದಾನೆ. ಬುರ್ಖಾ ಧರಿಸಿದ ವ್ಯಕ್ತಿಯನ್ನು ವೀರಭದ್ರಯ್ಯ(Veerabhadrayya) ಎಂದು ಗುರುತಿಸಲಾಗಿದ್ದು, ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಸ್ ನಿಲ್ದಾಣದಲ್ಲಿ ಈ ಬುರ್ಖಾ ಹಾಕಿದ ಆಸಾಮಿ ಪತ್ತೆಯಾಗಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆ ನಿವಾಸಿಯಾಗಿರೋ ವೀರಭದ್ರಯ್ಯ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬುರ್ಖಾ ಧರಿಸಿ ಉಚಿತ ಪ್ರಯಾಣ ಮಾಡಿಕೊಂಡು ಬಂದಿದ್ದಾನೆ. ವಿಚಿತ್ರ ಅಂದರೆ ಬುರ್ಖಾ ಧರಿಸಿದ್ದ ವೀರಭದ್ರಯ್ಯನ ಬಳಿ ಮಹಿಳೆಯರ ಆಧಾರ್‌ ಕಾರ್ಡ್‌ ಕೂಡ ಪತ್ತೆಯಾಗಿದೆ.

ಸಿಕ್ಕಿಬಿದ್ದಿದ್ದೇ ವಿಚಿತ್ರ!!
ನಿಂಗಯ್ಯ ಮಠಪತಿ ಎಂಬ ವ್ಯಕ್ತಿ ಬುರ್ಖಾ ಧರಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿ ಬಸ್‌ ಹತ್ತಲು ಮುಂದಾಗಿದ್ದಾನೆ. ಈ ವೇಳೆ ಅನುಮಾನಗೊಂಡ ಸ್ಥಳೀಯ ಜನರು ಇವರನ್ನು ಹಿಡಿದು ಪ್ರಶ್ನೆ ಮಾಡಿದ ಸಮಯದಲ್ಲಿ ಎಲ್ಲವನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಇನ್ನೂ ಈತ ಉಚಿತ ಬಸ್ ಪ್ರಯಾಣಕ್ಕಾಗಿ ಹಲವು ಬಾರಿ ವಿವಿಧ ಊರುಗಳಿಗೆ ಮಹಿಳೆಯರಂತೆ ವೇಷ ಧರಿಸಿ ಪ್ರಯಾಣ ಮಾಡಿದ್ದಾನೆ ಎನ್ನಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸಲು ಮುಂಧಾಗಿದ್ದಾರೆ.

ಹಲವು ಪುರುಷರು ಬುರ್ಖಾ ಧರಿಸಿ ಪ್ರಯಾಣಿಸಿದ ಅನುಮಾನ: ಇನ್ನು ರಾಜ್ಯ ಸರ್ಕಾರದಿಂದ ಜಾರಿಗೊಳಿಸಲಾದ ಶಕ್ತಿ ಯೋಜನೆ ಲಾಭ ಪಡೆಯಲು ಹಲವು ಪುರುಷರು ಇದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: Rekha nair: “ಹುಡುಗ್ರು ಡೈರೆಕ್ಟ್ ಅಲ್ಲಿಗೇ ಕೈ ಹಾಕಿದ್ರೆ ಹುಡುಗಿಯರು ಎಂಜಾಯ್ ಮಾಡಿ, ಕಂಪ್ಲೇಂಟ್ ಕೊಡ್ಬೇಡಿ” – ನಟಿಯ ಹೇಳಿಕೆ ವೈರಲ್ !!