Home Jobs KPSC : 2020ನೇ ಸಾಲಿನ ಕೆಪಿಎಸ್ ಸಿ ನೇಮಕಾತಿ ಫಲಿತಾಂಶ ಪ್ರಕಟ

KPSC : 2020ನೇ ಸಾಲಿನ ಕೆಪಿಎಸ್ ಸಿ ನೇಮಕಾತಿ ಫಲಿತಾಂಶ ಪ್ರಕಟ

Hindu neighbor gifts plot of land

Hindu neighbour gifts land to Muslim journalist

2020ನೇ ಸಾಲಿನಲ್ಲಿ ಅಧಿಸೂಚಿಸಿದ್ದ ಆಯುಷ್
ಇಲಾಖೆಯಲ್ಲಿನ ಗ್ರೂಪ್ ಸಿ ವೃಂದದ ಶುಶ್ರೂಷಕರು (Staff Nurse) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. 01 ಬ್ಯಾಕ್‌ಲಾಗ್ ಮತ್ತು 22 ಹೈದರಾಬಾದ್ ಕರ್ನಾಟಕ ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು.

ಕೆಪಿಎಸ್‌ಸಿ ( KPSC) ಪ್ರಸ್ತುತ ಪ್ರಕಟ ಮಾಡಿರುವ ಗ್ರೂಪ್ ಸಿ ವೃಂದದ ಶುಶೂಷಕರು ಹುದ್ದೆಗಳ ಭರ್ತಿಗೆ ಏನಾದರೂ ಆಕ್ಷೇಪಣೆಗಳು ಇದ್ದಲ್ಲಿ, ಸೆಪ್ಟೆಂಬರ್ 14 ರಿಂದ 7 ದಿನಗಳೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ. ಈ ವಿಳಾಸಕ್ಕೆ ಆಕ್ಷೇಪಣೆ ಸಲ್ಲಿಸಲು ಹೇಳಲಾಗಿದೆ. ವಿಳಾಸ – ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001 ಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಲಾಗಿದೆ.

ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು, ಸಂಪೂರ್ಣ ವಿಳಾಸ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ಹಾಗೂ ಇತರೆ ಮಾಹಿತಿಗಳನ್ನು ನೀಡಲಾಗಿದೆ.

ಇಷ್ಟು ಮಾತ್ರವಲ್ಲದೇ ಕೆಪಿಎಸ್‌ಸಿ ಇಂದ ಹೊಸದು ಬಿಡುಗಡೆಯಾಗಿರುವ ನೋಟಿಫಿಕೇಶನ್ ಈ ರೀತಿ ಇದೆ!

• 2019ನೇ ಸಾಲಿನ ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರು (ಉಳಿಕೆ ಮೂಲ ವೃಂದ ಮತ್ತು
ಹೈದರಾಬಾದ್ ಕರ್ನಾಟಕ) ಹುದ್ದೆಗಳಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಪಟ್ಟಿ ಹಾಗೂ ದಾಖಲೆ ಪರಿಶೀಲನೆಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

• 2019ನೇ ಸಾಲಿನ ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರು (ಉಳಿಕೆ ಮೂಲ ವೃಂದ ಮತ್ತು ಹೈದೆರಾಬಾದ್ ಕರ್ನಾಟಕ) ಹುದ್ದೆಗಳಿಗೆ ವೈದ್ಯಕೀಯ ತಪಾಸಣೆಗೆ ಅರ್ಹರಾದ ಅಭ್ಯರ್ಥಿಗಳ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

21-09-2010ರಲ್ಲಿ ಅಧಿಸೂಚಿಸಲಾದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳಲ್ಲಿನ ಎಂ ಆರ್ ಎ ಸಿ (Mechanic Refrigeration & Alt-Conditioning ವೃತ್ತಿಯ-73 (ಆರ್.ಪಿ.ಸಿ ವೃಂದ) + 21 (ಹೈ.ಕ ವೃಂದ) -94 ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆಕಟ್ಟೆಯನ್ನು ಕಾಲಕಾಲಕ್ಕೆ ತಿದ್ದುಪಡಿಯಾದ ಕರ್ನಾಟಕ ನಾಗರೀಕ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಹಾಗೂ ಆಯ್ಕೆ (ಸಾಮಾನ್ಯ) ನಿಯಮಗಳು 2006 ಹಾಗೂ 2015ರ ತಿದ್ದುಪಡಿ ನಿಯಮಗಳನ್ನು ದಿನಾಂಕ: 31-05-2002 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಿ, ಈ ಸಂಬಂಧ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಆಯ್ಕೆಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಲಿಂಕ್ ಕ್ಲಿಕ್ ಮಾಡಿ