Home latest ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತಮಿಳುನಾಡಿನ ರಾಜ್ಯಪಾಲರು ಆಗಿದ್ದ ‘ಕೊನಿಜೆಟಿ ರೋಸಯ್ಯ’ ನಿಧನ

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತಮಿಳುನಾಡಿನ ರಾಜ್ಯಪಾಲರು ಆಗಿದ್ದ ‘ಕೊನಿಜೆಟಿ ರೋಸಯ್ಯ’ ನಿಧನ

Hindu neighbor gifts plot of land

Hindu neighbour gifts land to Muslim journalist

ಹೈದರಾಬಾದ್ :ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೆಟಿ ರೋಸಯ್ಯ ಇಂದು ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ರೋಸಯ್ಯ ಅವರನ್ನು ಹೈದರಾಬಾದ್ ನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು.ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕಾಂಗ್ರೆಸ್ ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ರೋಸಯ್ಯ ಅವರು, ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದಾರೆ.ಜುಲೈ 4, 1933ರಂದು ಗುಂಟೂರು ಜಿಲ್ಲೆ ವೇಮೂರ್ ಗ್ರಾಮದಲ್ಲಿ ಜನಿಸಿದ ರೋಸಯ್ಯ. ಗುಂಟೂರು ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದರು. ಅವರು ಕಾಂಗ್ರೆಸ್ ನಿಂದ 1968, 1974 ಮತ್ತು 1980ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು.

ರೋಸಯ್ಯ ಅವರು ಸೆಪ್ಟೆಂಬರ್ 3, 2009 ರಿಂದ ನವೆಂಬರ್ 24, 2010 ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಆಗಸ್ಟ್ 31, 2011 ರಂದು ರೋಸಯ್ಯ ಅವರು ತಮಿಳುನಾಡಿನ ರಾಜ್ಯ ರಾಜ್ಯಪಾಲರಾಗಿದ್ದು,ಆಗಸ್ಟ್ 30, 2016 ರವರೆಗೆ ಸೇವೆ ಸಲ್ಲಿಸಿದ್ದಾರೆ.