Home Breaking Entertainment News Kannada ಮತ್ತೊಂದು ವಿವಾದದಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ!! ಈಗಲೂ ಗೋ ಮಾಂಸ ತಿನ್ನುತ್ತೇನೆ ಎನ್ನುವ ವಿಡಿಯೋ...

ಮತ್ತೊಂದು ವಿವಾದದಲ್ಲಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಅಗ್ನಿಹೋತ್ರಿ!! ಈಗಲೂ ಗೋ ಮಾಂಸ ತಿನ್ನುತ್ತೇನೆ ಎನ್ನುವ ವಿಡಿಯೋ ವೈರಲ್!!

Hindu neighbor gifts plot of land

Hindu neighbour gifts land to Muslim journalist

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ನಿರ್ದೇಶಕ, ಜನ ಮೆಚ್ಚಿದ ‘ದ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆಯೊಂದಿಗೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಗೋಮಾಂಸ ಸೇವನೆಯ ಬಗ್ಗೆ ಅಗ್ನಿಹೋತ್ರಿ ನೀಡಿರುವ ಹೇಳಿಕೆಯೊಂದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಎಲ್ಲಿ ಉತ್ತಮ ಗೋ ಮಾಂಸ ಸಿಗುವುದು ಎಂದು ಹಿಂದೊಮ್ಮೆ ಬರೆದಿದ್ದೆ ಹಾಗೂ ನಾನು ಅದನ್ನು ತಿಂದಿದ್ದು, ಈಗಲೂ ತಿನ್ನುತ್ತೇನೆ. ನನ್ನ ಬದುಕಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿಕೆ ನೀಡಿರುವ ವಿಡಿಯೋ ಹರಿದಾಡಿದೆ.

ಇದರ ಬೆನ್ನಲ್ಲೇ ನೆಟ್ಟಿಗರು ಕಿಡಿಕಾರಿದ್ದು, ಈ ಮೊದಲು ರಣಬೀರ್ ಕಪೂರ್ ಗೋ ಮಾಂಸ ತಿನ್ನುವ ವಿಚಾರವೊಂದು ಪ್ರಸ್ತಾಪವಾದ ಬೆನ್ನಲ್ಲೇ ಹಿಂದೂಪರ ಸಂಘಟನೆಗಳು ಪ್ರತಿಭಟಿಸಿದಲ್ಲದೇ, ರಣಬೀರ್ ಸಿನಿಮಾವನ್ನು ಬಹಿಷ್ಕರಿಸಿದ್ದರು. ಸದ್ಯ ಅಗ್ನಿಹೋತ್ರಿಗೂ ಇದೇ ರೀತಿಯಲ್ಲಿ ಪಾಠ ಕಲಿಸಬೇಕು ಎಂದು ಭಾರೀ ಚರ್ಚೆಯಾಗಿದ್ದು, ರಣ್ಬೀರ್ ಮೇಲಾದ ಕ್ರಮ ಅಗ್ನಿಹೋತ್ರಿಗೂ ಆಗಬೇಕು ಎನ್ನುವ ವಿಚಾರ ಹೆಚ್ಚು ಚರ್ಚೆಯಾಗಿದೆ.

ಈ ಬಗ್ಗೆ ಅಗ್ನಿಹೋತ್ರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಕೆಲವರ ಪ್ರಕಾರ ಇದು ಹಳೆಯ ವಿಡಿಯೋವಾಗಿದ್ದು, ಯಾರೋ ಕಿಡಿಗೇಡಿಗಳು ಮತ್ತೊಮ್ಮೆ ಹರಿಯಬಿಟ್ಟು ನಿರ್ದೇಶಕನ ಬೆಳವಣಿಗೆಗೆ ಕುತ್ತು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಗೋ ಮಾಂಸ ತಿನ್ನುವ ವಿಚಾರದಲ್ಲಿ ಆಡಿದ ಮಾತಿನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.