Home latest Shobha Karandlaje on loka Sabha Election: ಗೋಬ್ಯಾಕ್‌ ಶೋಭಕ್ಕ ಅಭಿಯಾನದಿಂದ ನನಗೇ ಲಾಭ ಎಂದ...

Shobha Karandlaje on loka Sabha Election: ಗೋಬ್ಯಾಕ್‌ ಶೋಭಕ್ಕ ಅಭಿಯಾನದಿಂದ ನನಗೇ ಲಾಭ ಎಂದ ಕರಂದ್ಲಾಜೆ

Shobha karandlaje
Image source- The Hindu

Hindu neighbor gifts plot of land

Hindu neighbour gifts land to Muslim journalist

Shobha Karandlaje and Parliament Election: ಉಡುಪಿ-ಚಿಕ್ಕಮಗಳೂರು ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಬೆಳಗಾವಿಯಲ್ಲಿ ಶನಿವಾರ, ಲೋಕಸಭೆ ಚುನಾವಣೆಯಲ್ಲಿ ನನ್ನ ಟಿಕೆಟ್‌ ತಪ್ಪಿಸಲು ಪಕ್ಷದಲ್ಲೇ ಪಿತೂರಿ ನಡೆಯುತ್ತಿದೆ. ಇದು ಸಕ್ಸಸ್‌ ಆಗಲ್ಲ. ಕೆಲವು ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಆಗಲಿದೆ ಎಂಬುವುದು ಕೂಡಾ ಊಹಾಪೋಹ ಎಂದು ಅವರು ಹೇಳಿದರು.

ಗೆಲ್ಲುವ ಪಕ್ಷಕ್ಕೆ ಬಹಳಷ್ಟು ಜನರು ಟಿಕೆಟ್‌ ಕೇಳುವುದು ಸಹಜ. ಟಿಕೆಟ್‌ ಕೇಳುವುದು ತಪ್ಪಲ್ಲ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಟಿಕೆಟ್‌ ಕೇಳುವ ಹಕ್ಕಿದೆ. ಯಾರಿಗೆ ಎಲ್ಲಿಂದ ಟಿಕೆಟ್‌ ಕೊಡಬೇಕು, ಏಕೆ ಕೊಡಬೇಕು, ಅದರಿಂದಾಗುವ ಲಾಭ ಏನು ಎನ್ನುವುದನ್ನು ತೀರ್ಮಾನಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಚುನಾವಣೆ ಮಂಡಳಿಯಿದೆ. ನಮ್ಮ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

ನಮಗೆ ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆವಾಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನನ್ನ ಟಿಕೆಟ್‌ ತಪ್ಪಿಸಲು ಪಿತೂರಿ ನಡೆಯುತ್ತಿದೆ. ಅದರಿಂದ ತಮಗೇ ಲಾಭವಾಗುತ್ತದೆ ಎಂದು ಅವರು ಬೆಳಗಾವಿಯಲ್ಲಿ ಹೇಳಿದ್ದಾರೆ.

ಮಾಹಿತಿ ಸಂಗ್ರಹದಿಂದ ನನಗೆ ಅನುಕೂಲ ಆಗುತ್ತದೆಯೇ ಹೊರತು ಕೆಟ್ಟದಾಗಲ್ಲ. ನಮ್ಮ ಹೈಕಮಾಂಡ್‌ ಮೇಲೆ ನನಗೆ ನಂಬಿಕೆಯಿದೆ. ಕೆಲಸದ ಆಧಾರದ ಮೇಲೆ ಟಿಕೆಟ್‌ ಸಿಗುತ್ತದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.