Home Karnataka State Politics Updates Karnataka Assembly Election 2023: ನಾಮಪತ್ರ ಸಲ್ಲಿಸಿದ ಘಟಾನುಘಟಿಗಳಲ್ಲಿ ಕುಬೇರರು, ಅವರ ಆಸ್ತಿ ಎಷ್ಟು? ...

Karnataka Assembly Election 2023: ನಾಮಪತ್ರ ಸಲ್ಲಿಸಿದ ಘಟಾನುಘಟಿಗಳಲ್ಲಿ ಕುಬೇರರು, ಅವರ ಆಸ್ತಿ ಎಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

Karnataka Assembly Election 2023

Hindu neighbor gifts plot of land

Hindu neighbour gifts land to Muslim journalist

Karnataka Assembly Election 2023: ರಾಜ್ಯ ವಿಧಾನಸಭೆ ಚುನಾವಣೆಗೆ (Assembly Election) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಹಲವು ಪಕ್ಷೇತರ ಅಭ್ಯರ್ಥಿಗಳು (Candidates) ತಮ್ಮ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ನಾಮಪತ್ರ ಸಲ್ಲಿಸುವಾಗ ತಮ್ಮ ವೈಯಕ್ತಿಕ ವಿವರಗಳನ್ನು, ಆಸ್ತಿ ಎಷ್ಟಿದೆ ಎಂದು ಘೋಷಿಸುವುದು ಆಯೋಗದ ಸಂಪ್ರದಾಯ. ಅಂದಹಾಗೆ ಸೋಮವಾರ ನಾಮಪತ್ರ ಸಲ್ಲಿಸಿರುವ ಘಟನಾನುಘಟಿ ಅಭ್ಯರ್ಥಿಗಳ ಪ್ರಮುಖ ಆಸ್ತಿ (Property) ವಿವರಗಳು ಇದೀಗ ಬಹಿರಂಗವಾಗಿದ್ದು, ರಾಜಕೀಯ ಕುಬೇರರು ಹೊಂದಿರೋ ಆಸ್ತಿ ಎಷ್ಟು ಗೊತ್ತಾ?(Karnataka Assembly Election 2023)

ಮುನಿರತ್ನ, ಆರ್‌ಆರ್ ನಗರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 270 ಕೋಟಿ ರೂ.
* ಚರಾಸ್ತಿ ಮೌಲ್ಯ – 31.34 ಕೋಟಿ ರೂ.
* ಸ್ಥಿರಾಸ್ತಿ ಮೌಲ್ಯ – 239.29 ಕೋಟಿ ರೂ.
* ಸಾಲದ ಮೊತ್ತ – 93.48 ಕೋಟಿ ರೂ.
* ಪತ್ನಿ ಹೆಸರಲ್ಲಿ 22 ಕೋಟಿ ರೂ. ಮೌಲ್ಯದ ಆಸ್ತಿ

ಆರ್ ಅಶೋಕ್, ಪದ್ಮನಾಭನಗರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 5.28 ಕೋಟಿ ರೂ.
* ಒಟ್ಟು ಸಾಲ 97.78 ಲಕ್ಷ ರೂ.
* ಪತ್ನಿಯಿಂದಲೇ 42 ಲಕ್ಷ ರೂ. ಸಾಲ

ಎಂಬಿ ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ:
* 105 ಕೋಟಿ ರೂ. ಮೌಲ್ಯದ ಆಸ್ತಿ ಇದೆ
* 34 ಕೋಟಿ ರೂ. ಸಾಲ ಹೊಂದಿದ್ದಾರೆ
* 5 ಕ್ರಿಮಿನಲ್ ಕೇಸ್ ಇದೆ

ವಿಜಯೇಂದ್ರ, ಶಿಕಾರಿಪುರ ಅಭ್ಯರ್ಥಿ:
* 103 ಕೋಟಿ ರೂ. ಮೌಲ್ಯದ ಆಸ್ತಿ
* ಒಂದು ಟ್ರ್ಯಾಕ್ಟರ್, ಒಂದು ಟಿಲ್ಲರ್
* ಪತ್ನಿ ಹೆಸರಲ್ಲಿ 21 ಕೋಟಿ ರೂ. ಮೌಲ್ಯ ಆಸ್ತಿ

ಹೆಚ್‌ಡಿ ರೇವಣ್ಣ, ಹೊಳೆನರಸೀಪುರ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ – 43.37 ಕೋಟಿ ರೂ.
* 9 ಕೋಟಿ ರೂ. ಸಾಲ ಮಾಡಿರುವ ರೇವಣ್ಣ
* ಪತ್ನಿ ಹೆಸರಲ್ಲಿ 38 ಕೋಟಿ ಮೌಲ್ಯದ ಆಸ್ತಿ,5 ಕೋಟಿ ಸಾಲ
* 3 ಕೆಜಿ ಚಿನ್ನ, 45 ಕೆಜಿ ಬೆಳ್ಳಿ, 25 ಕ್ಯಾರೆಟ್ ವಜ್ರ

ಕುಮಾರಸ್ವಾಮಿ, ಚನ್ನಪಟ್ಟಣ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ – 46.57 ಕೋಟಿ ರೂ.
* 750 ಗ್ರಾಂ ಚಿನ್ನ, ಸಾಲ 17 ಕೋಟಿ
* ಪತ್ನಿ ಹೆಸರಲ್ಲಿ 124 ಕೋಟಿ ಮೌಲ್ಯದ ಆಸ್ತಿ, 3.8 ಕೆಜಿ ಚಿನ್ನ
* ಕುಮಾರಸ್ವಾಮಿ ವಿರುದ್ಧ 5 ಕ್ರಿಮಿನಲ್ ಕೇಸ್

ಎಂಟಿಬಿ ನಾಗರಾಜ್, ಹೊಸಕೋಟೆ ಅಭ್ಯರ್ಥಿ:
* ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ರೂ.
* ಚರಾಸ್ತಿ ಮೌಲ್ಯ 372 ಕೋಟಿ ರೂ.
* ಸ್ಥಿರಾಸ್ತಿ ಮೌಲ್ಯ 792 ಕೋಟಿ ರೂ.
* ಪತ್ನಿ ಹೆಸರಲ್ಲಿ 437 ಕೋಟಿ ಮೌಲ್ಯದ ಆಸ್ತಿ
* ಸಾಲ 71 ಕೋಟಿ ರೂ.
* ಕಾರುಗಳ ಮೌಲ್ಯ 1.72 ಕೋಟಿ ರೂ.

ಇದನ್ನೂ ಓದಿ : ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್​​ ಆಗ್ತಿದೆ ಅತ್ಯಂತ ಚಿಕ್ಕ ರಾಜಿನಾಮೆ ಪತ್ರ!