Home Entertainment ‘ಕಚ್ಚಾ ಬದಾಮ್’ ಹಾಡಿಗೆ ಬೀದಿಯಲ್ಲಿ ಪೂರ್ವಸಿದ್ಧತೆ ಇಲ್ಲದೇ ಕುಣಿದ ಶಾಲಾ ವಿದ್ಯಾರ್ಥಿಗಳು.! ಹುಡುಗಿಯರಿಗಿಂತಲೂ ಚೆನ್ನಾಗಿ ಮಾಡಿದ್ದೀರಿ...

‘ಕಚ್ಚಾ ಬದಾಮ್’ ಹಾಡಿಗೆ ಬೀದಿಯಲ್ಲಿ ಪೂರ್ವಸಿದ್ಧತೆ ಇಲ್ಲದೇ ಕುಣಿದ ಶಾಲಾ ವಿದ್ಯಾರ್ಥಿಗಳು.! ಹುಡುಗಿಯರಿಗಿಂತಲೂ ಚೆನ್ನಾಗಿ ಮಾಡಿದ್ದೀರಿ ಎಂಬ ಹೊಗಳಿಕೆಯ ಪಟ್ಟ ಗಿಟ್ಟಿಸಿಕೊಂಡ ಹುಡುಗರು!

Hindu neighbor gifts plot of land

Hindu neighbour gifts land to Muslim journalist

ಬಂಗಾಲಿ ಹಾಡು ಕಚ್ಚಾ ಬದಾಮ್ ತುಂಬ ದೊಡ್ಡ ಟ್ರೆಂಡ್ ಸೃಷ್ಟಿಸಿದ ಹಾಡು. ಈ ಹಾಡಿನ ಕುರಿತು ಮಾಡಿದ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರೂ ಕೂಡಾ ಈ ಹಾಡಿಗೆ ಮನಸೋತು ಸ್ಟೆಪ್ ಹಾಕಿದ್ದಾರೆ. ಒಂದು ಲೆಕ್ಕದಲ್ಲಿ ಈ ಹಾಡು ಸಾಮಾಜಿಕ ಜಾಲತಾಣವನ್ನು ಆಳುತ್ತಿದೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ಈ ಪೂರ್ವಸಿದ್ಧತೆ ಇಲ್ಲದೆ ಕಚ್ಚಾ ಬದಾಮ್ ಹಾಡಿಗೆ ಬೀದಿಯಲ್ಲಿ ನರ್ತಿಸುವ ಸವಾಲಿನ ಟ್ರೆಂಡ್ ಒಂದು ಆರಂಭವಾಗಿದೆ. ಈ ಸವಾಲನ್ನು ವಿದ್ಯಾರ್ಥಿಗಳ ಗುಂಪೊಂದು ಸ್ವೀಕರಿಸಿ ಮಾಡಿದ ಡ್ಯಾನ್ಸ್ ಸಖತ್ ಮುದ ಕೊಟ್ಟಿದೆ.

ಶಾಲೆಗೆ ಹೋಗುವ ದಾರಿಯಲ್ಲಿ ವಿದ್ಯಾರ್ಥಿಗಳು ಯಾವುದೇ ಸಿದ್ಧತೆ ಇಲ್ಲದೆ ಈ ಹಾಡಿಗೆ ಮಾಡಿದ ನೃತ್ಯವು ಈಗ ಭಾರೀ ಆಕರ್ಷಣೆ ಸೃಷ್ಟಿಸಿದೆ. ಮುಂದೆ ಸಾಗುತ್ತಿದ್ದ ಒಬ್ಬ ಹುಡುಗ ನರ್ತಿಸಲು ಆರಂಭಿಸುತ್ತಿದ್ದಂತೆಯೇ ಆತನ ಸಂಗಡಿಗರೂ ಜತೆಯಾಗಿ ಹೆಜ್ಜೆಹಾಕಿದ್ದಾರೆ.

ಮೋಜಿನ ಈ ನೃತ್ಯವನ್ನು ಜನರು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಹುಡುಗಿಯರಿಗಿಂತಲೂ ಹೆಚ್ಚು ಚೆನ್ನಾಗಿ ಮಾಡಿದ್ದೀರಿ ಎಂಬ ಪ್ರಶಂಸೆಯ ಮಾತುಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿದ್ದಾರೆ. ಪರೀಕ್ಷೆಯಲ್ಲಿ ಪಾಸಾದ ಖುಷಿಗೆ ಈ ಡ್ಯಾನ್ಸ್ ಮಾಡಿದ್ದಾ ಎಂದು ಕೆಲವರು ಕಾಲೆಳೆದಿದ್ದಾರೆ. ಒಟ್ಟಾರೆಯಾಗಿ ಮಕ್ಕಳ ಈ ಕುಣಿತ ನಿಮ್ಮ ಮನಸ್ಸಿನಲ್ಲಿ ನಗು ಮೂಡಿಸುವುದರಲ್ಲಿ ಎರಡು ಮಾತಿಲ್ಲ.