Home latest IRCTC Tour Package: ಶಿರಿಡಿ ಟ್ರಿಪ್‌ ಇನ್ನು ಕಡಿಮೆ ಬೆಲೆಯಲ್ಲಿ! ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್

IRCTC Tour Package: ಶಿರಿಡಿ ಟ್ರಿಪ್‌ ಇನ್ನು ಕಡಿಮೆ ಬೆಲೆಯಲ್ಲಿ! ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್

Hindu neighbor gifts plot of land

Hindu neighbour gifts land to Muslim journalist

ಶಿರಿಡಿ ಸಾಯಿ ಬಾಬಾ ದೇವಾಲಯವು ಭಾರತದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದು. ಇಲ್ಲಿ ನಾವು ನೀಡುವ ಸುದ್ದಿ ಮಾತ್ರ‌ ನಿಮಗೆ ಖಂಡಿತ ಖುಷಿ ಕೊಡುತ್ತೆ. ಏಕೆಂದರೆ ಇಂತಹ ಶ್ರೀಮಂತ ದೇವಾಲಯಕ್ಕೆ ಈ ಪುಣ್ಯಕ್ಷೇತ್ರಕ್ಕೆ ನೀವು ಈಗ ಅತ್ಯಂತ ಕಡಿಮೆ ದರದಲ್ಲಿ ಈ ಕ್ಷೇತ್ರದ ಪ್ರವಾಸ ಮಾಡಬಹುದು. ಹೌದು, IRCTC ಯು ಹೊಸದಾದ ಪ್ಯಾಕೇಜ್‌ ಅನ್ನು ಪರಿಚಯಿಸಿದೆ. ಶಿರಿಡಿ ಮತ್ತು ನಾಸಿಕ್‌ನಂತಹ ಪುಣ್ಯಕ್ಷೇತ್ರಗಳಿಗೆ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರವಾಸ ಯೋಜಿಸಬಹುದು.

4 ದಿನಗಳ ಈ ಪ್ಯಾಕೇಜ್ ನ್ನು ಇದು ಹೊಂದಿದೆ. ಡಿಸೆಂಬರ್‌ 23 ರಂದು ಪ್ರಾರಂಭವಾಗುವ ಈ ಪ್ಯಾಕೇಜ್‌ ಕಂರ್ಫಟ್ ಕ್ಲಾಸ್‌ ಮತ್ತು ಸೂಪಿರಿಯರ್ ಕ್ಲಾಸ್‌ಗಳಂತಹ ಆಯ್ಕೆಗಳನ್ನು ಹೊಂದಿದೆ. ಇವುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕಂಫರ್ಟ್‌ ಕ್ಲಾಸ್‌ನಲ್ಲಿ ಪ್ರಯಾಣಿಸಲು ಬಯಸುವವರು 13,420 ರೂಪಾಯಿಗಳನ್ನು ಪಾವತಿಸುವ ಮೂಲಕ ಪ್ಯಾಕೇಜ್‌ನ ಟಿಕೆಟ್ ಪಡೆಯಬಹುದು. ಒಂದು ವೇಳೆ ಇಬ್ಬರು ಪ್ರಯಾಣಿಸಲು ಯೋಜಿಸಿದರೆ ಒಬ್ಬರಿಗೆ 8,230 ರೂಪಾಯಿಗಳು ಮತ್ತು ಮೂವರು ಒಟ್ಟಿಗೆ ಪ್ರಯಾಣಿಸಿದರೆ 6,590 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಗೆಯೇ, 4 ರಿಂದ 6 ಮಂದಿ ಒಟ್ಟಿಗೆ ಟಿಕೆಟ್ ಬುಕ್‌ ಮಾಡಿದರೆ 5,890 ರೂಪಾಯಿಗಳನ್ನು ಪಾವತಿಸಬೇಕು. ಇನ್ನು, 11 ವರ್ಷ ದಾಟಿದ ಮಕ್ಕಳಿಗೆ 5,440 ರೂಪಾಯಿಗಳನ್ನು ನಿರ್ಧರಿಸಲಾಗಿದೆ.

ಸೂಪಿರಿಯರ್‌ ಕ್ಲಾಸ್‌ ಅನ್ನು ಆಯ್ಕೆ ಮಾಡಿಕೊಳ್ಳುವ ಮಂದಿ ಒಬ್ಬರಿಗೆ 11,730 ರೂಪಾಯಿಗಳನ್ನು ನಿರ್ಧರಿಸಲಾಗಿದೆ. ಇಬ್ಬರು ಒಟ್ಟಿಗೆ ಪ್ರಯಾಣಿಸಿದರೆ 6,550 ರೂಪಾಯಿಗಳು, ಮೂವರಿಗೆ 4,910 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಹಾಗೆಯೇ, 4 ರಿಂದ 6 ಮಂದಿ ಒಟ್ಟಿಗೆ ಟಿಕೆಟ್ ಬುಕ್‌ ಮಾಡಿದರೆ 4,200 ರೂಪಾಯಿಗಳನ್ನು ಪಾವತಿಸಬೇಕು. ಇನ್ನು, 11 ವರ್ಷ ದಾಟಿದ ಮಕ್ಕಳಿಗೆ 3,760 ರೂಪಾಯಿಗಳನ್ನು ನಿರ್ಧರಿಸಲಾಗಿದೆ.

ಈ ಪ್ಯಾಕೇಜ್‌ ಡಿಸೆಂಬರ್‌ 23 ರಂದು ಪ್ರಾರಂಭವಾಗುತ್ತದೆ ಮತ್ತು ಪ್ರತಿ ಶುಕ್ರವಾರ ಯೋಜಿಸಲಾಗುತ್ತದೆ. 4 ದಿನಗಳ ಈ ಪ್ರವಾಸದಲ್ಲಿ ನೀವು ಸಾಕಷ್ಟು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ಸಿಕಿಂದ್ರಾಬಾದ್‌ ರೈಲ್ವೆಸ್ಟೇಷನ್‌ನಿಂದ ಡಿಸೆಂಬರ್‌ 23 ರಂದು ಸಂಜೆ 6:30 ಗಂಟೆಗೆ ಸರಿಯಾಗಿ ಅಜಂತಾ ಎಕ್ಸ್‌ಪ್ರೆಸ್‌ನಿಂದ ಶಿರಿಡಿಗೆ ಪ್ರಯಾಣ, ನಂತರ ಅಲ್ಲಿಂದ ಹೋಟೆಲ್‌ನಲ್ಲಿ ಸ್ನಾನ ಮಾಡಿ ಬಾಬಾರ ದರ್ಶನ.

ಮರುದಿನ ಸಿಕ್‌ ಮತ್ತು ತ್ರಯಂಬಕೇಶ್ವರಕ್ಕೆ ಹೋಗುತ್ತೀರಿ. ಅಲ್ಲಿನ ಪ್ರಖ್ಯಾತ ತ್ರಯಂಬಕೇಶ್ವರ ದೇವಾಲಯ, ಪಂಚವಟಿ ಆಲಯಗಳನ್ನು ಸಂದರ್ಶನ, ನಂತರ 9:30 ಕ್ಕೆ ಸರಿಯಾಗಿ ನಿಮ್ಮ ರೈಲಿನ ಪ್ರಯಾಣ ಆರಂಭವಾಗುತ್ತದೆ. ಕೊನೆಗೆ ಹೈದರಾಬಾದ್‌ಗೆ ಆಗಮನ.

ಈ ಶಿರಿಡಿ ಪ್ರವಾಸ ಪ್ಯಾಕೇಜ್‌ ಅನ್ನು ಆಯ್ಕೆ ಮಾಡಿಕೊಂಡರೆ ಅನೇಕ ಸೌಲಭ್ಯಗಳನ್ನು ದೊರೆಯುತ್ತೆ. ನೀವು ರೈಲಿನಲ್ಲಿ ಕಂಫರ್ಟ್‌ ಕ್ಲಾಸ್‌ನಲ್ಲಿ ಪ್ರಯಾಣಿಸಲು ಆಯ್ಕೆ ಮಾಡಿಕೊಂಡರೆ 3ಎಸಿ ಯಲ್ಲಿ ಪ್ರಯಾಣಿಸುತ್ತೀರಿ. ಹಾಗೆಯೇ ಸೂಪಿರಿಯರ್ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ ಸ್ಲೀಪರ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡಬಹುದು.

ಇನ್ನು ರೈಲಿನ ಪ್ರಯಾಣದ ನಂತರ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ಅನ್ವೇಷಿಸಲು ಪ್ರತ್ಯೇಕವಾದ ಬಸ್ಸಿನ ವ್ಯವಸ್ಥೆ ಇದೆ. ಹಾಗೆನೇ ಟ್ರಾವೆಲ್‌ ಇನ್ಸೂರೆನ್ಸ್‌ ಜೊತೆಗೆ ಬೆಳಗಿನ ತಿಂಡಿಗಳನ್ನು ನೀಡುತ್ತಾರೆ. ಮಧ್ಯಾಹ್ನ ಮತ್ತು ರಾತ್ರಿಯ ಊಟ ಪಟ್ಟಿಯಲ್ಲಿ ಇರುವುದಿಲ್ಲ.

ನೀವು ಟಿಕೆಟ್‌ ಬುಕ್‌ ಮಾಡಿ ಕಾರಣಾಂತರಗಳಿಂದ ಪ್ರಯಾಣಿಸಲು ಸಾಧ್ಯವಾಗದಿದ್ದರೆ, IRCTC ಯು ಟಿಕೆಟ್‌ ಕ್ಯಾನ್ಸಲ್‌ ಮಾಡುವ ಅವಕಾಶವನ್ನು ನೀಡಿದೆ. ಅದೇನೆಂದರೆ 15 ದಿನಗಳ ಮುಂಚೆ ಟಿಕೆಟ್ ಕ್ಯಾನ್ಸಲ್‌ ಮಾಡಿದರೆ ವ್ಯಕ್ತಿಗೆ 250 ರೂಪಾಯಿಗಳನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸುತ್ತದೆ. ಅದೇ 8 ರಿಂದ 14 ದಿನಗಳ ಮುಂಚೆ ಟಿಕೆಟ್‌ ಕ್ಯಾನ್ಸಲ್‌ ಮಾಡಿದರೆ 25% ಕಡಿತಗೊಳಿಸಿ ಉಳಿದ ಹಣ ನೀಡುತ್ತಾರೆ. ಇನ್ನು 4 ದಿನಗಳಿಗಿಂತ ಕಡಿಮೆ ಸಮಯದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೆ ರಿಫಂಡ್‌ ದೊರೆಯುವುದಿಲ್ಲ. ಇದನ್ನು ಪ್ರಯಾಣಿಕರು ಗಮನದಲ್ಲಿಟ್ಟುಕೊಳ್ಳಬೇಕು.