Home Education Indian Bank Recruitment : 203 ಸ್ಪೆಷಲಿಸ್ಟ್‌ ಆಫೀಸರ್‌ಗಳಿಗೆ ಅರ್ಜಿ ಆಹ್ವಾನ!

Indian Bank Recruitment : 203 ಸ್ಪೆಷಲಿಸ್ಟ್‌ ಆಫೀಸರ್‌ಗಳಿಗೆ ಅರ್ಜಿ ಆಹ್ವಾನ!

Hindu neighbor gifts plot of land

Hindu neighbour gifts land to Muslim journalist

ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ ಪಡೆಯುವುದು ಸುಲಭದ ಮಾತಲ್ಲ.  ಪೈಪೋಟಿಯ ನಡುವೆ ನೆಚ್ಚಿನ ಕೆಲ್ಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.  ಬ್ಯಾಂಕ್ ನೌಕರಿ ಇಲ್ಲವೇ ಸರ್ಕಾರಿ ಕೆಲಸ ಪಡೆಯೋದು ಹೆಚ್ಚಿನವರ ಹೆಬ್ಬಯಕೆ.  ಇದೀಗ ಬ್ಯಾಂಕ್ ನೌಕರಿಯ ಹುಡುಕಾಟ ನಡೆಸುತ್ತಿರುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ಇಂಡಿಯನ್ ಬ್ಯಾಂಕ್ 203 ಸ್ಪೆಷಲಿಸ್ಟ್‌ ಆಫೀಸರ್ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ. ಸ್ಕೇಲ್ 1, 2, 3, 4 ಹುದ್ದೆಗಳನ್ನು ಭರ್ತಿ ಮಾಡಲು ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮುನ್ನ ಒಟ್ಟು ಹುದ್ದೆಗಳ ಸಂಖ್ಯೆ, ವಯೋಮಿತಿ, ವೇತನ ಇನ್ನಿತರ ಮಾಹಿತಿ ಅರಿತಿರುವುದು ಅವಶ್ಯ.

ಹುದ್ದೆಗಳ ಸಂಖ್ಯೆ : 203
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಆಫೀಸರ್: 50
ಫೈನಾನ್ಸಿಯಲ್ ಅನಾಲಿಸ್ಟ್‌ (ಕ್ರೆಡಿಟ್ ಆಫೀಸರ್): 60
ರಿಸ್ಕ್‌ ಆಫೀಸರ್: 15
ಐಟಿ/ಕಂಪ್ಯೂಟರ್ ಆಫೀಸರ್: 23
ಇನ್ಫಾರ್ಮೇಶನ್ ಸೆಕ್ಯೂರಿಟಿ:7
ಮಾರ್ಕೆಟಿಂಗ್ ಆಫೀಸರ್: 13
ಟ್ರೆಸರಿ ಆಫೀಸರ್ (ಡೀಲರ್ ಫಾರ್ ಟ್ರೆಸರಿ) : 20
ಫಾರೆಕ್ಸ್‌ ಆಫೀಸರ್: 10
ಹೆಚ್‌ಆರ್‌ ಆಫೀಸರ್: 5

ಅರ್ಜಿ ಸಲ್ಲಿಸಲು ಪದವಿ ಹಾಗೂ ಸ್ನಾತಕೋತ್ತರ ಪದವಿ ಅರ್ಹತೆಯನ್ನು ಪಡೆದಿರಬೇಕು. ಇದಲ್ಲದೆ, ಹುದ್ದೆಗಳಿಗೆ ಸಂಬಂಧಿತ ವಿಷಯಗಳಲ್ಲಿ ಪಾಸ್ ಮಾಡಿರಬೇಕಾಗುತ್ತದೆ. ಮೇಲೆ ತಿಳಿಸಿದ ಹುದ್ದೆಗಳಿಗೆ  ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆ ಪ್ರಕ್ರಿಯೆ ಬಗ್ಗೆ ಗಮನ ಹರಿಸಿದರೆ, ಲಿಖಿತ ಪರೀಕ್ಷೆಯ ಜೊತೆಗೆ  ಸಂದರ್ಶನ ನಡೆಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ವಿವರಗಳು ಹೀಗಿವೆ.

ವೈಯಕ್ತಿಕ ಮಾಹಿತಿಗಳೊಂದಿಗೆ ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಯುಜಿ ಹಾಗೂ ಪಿಜಿ ಅಂಕಪಟ್ಟಿಗಳು, ಆಧಾರ್‌ ಕಾರ್ಡ್‌ ಬೇಕಾಗಿದ್ದು ಇದರ ಜೊತೆಗೆ ಕಾರ್ಯ ನಿರ್ವಹಿಸಿದ ಕಾರ್ಯಾನುಭವದ ಮಾಹಿತಿ ಕೂಡ  ನೀಡಬೇಕಾಗುತ್ತದೆ. ಕೇವಲ  ಆನ್‌ಲೈನ್‌ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಮೇಲಿನ ಹುದ್ದೆಗಳಿಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ಲಿಂಕ್ ಅನ್ನು ವೆಬ್‌ಸೈಟ್‌ www.indianbank.in ನಲ್ಲಿ ಶೀಘ್ರದಲ್ಲೇ ಅಪ್ಡೇಟ್  ಮಾಡಲಾಗುತ್ತದೆ. ಸದ್ಯ, ಇಂಡಿಯನ್ ಬ್ಯಾಂಕ್  ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಪರಿಷ್ಕೃತ ನೋಟಿಫಿಕೇಶನ್‌ ಅನ್ನು ಪ್ರಮುಖ ದಿನಾಂಕಗಳನ್ನು ಕೂಡ  ಸದ್ಯದಲ್ಲೇ ಅಪ್‌ಡೇಟ್‌ ಮಾಡಲಾಗುತ್ತದೆ.