Home latest Heart Beat: 1 ಗಂಟೆಗಳ ಕಾಲ ನಿಂತ ಹೃದಯ ಬಡಿತ!!! ಆದರೂ ಬದುಕಿದ ಟೆಕ್ಕಿ…ಹೇಗಂತೀರಾ? ಇದೊಂದು...

Heart Beat: 1 ಗಂಟೆಗಳ ಕಾಲ ನಿಂತ ಹೃದಯ ಬಡಿತ!!! ಆದರೂ ಬದುಕಿದ ಟೆಕ್ಕಿ…ಹೇಗಂತೀರಾ? ಇದೊಂದು ಪವಾಡ…

Hindu neighbor gifts plot of land

Hindu neighbour gifts land to Muslim journalist

Man Survives After Stopped Heartbeat Over An Hour: ಓರ್ವ ವ್ಯಕ್ತಿಯ ಹೃದಯ ಬಡಿತ ನಿಂತರೆ ಆತ ಸಾವಿಗೀಡಾದ ಎಂದರ್ಥ. ಆದರೆ ಇಲ್ಲೊಂದು ಕಡೆ ಓರ್ವ ವ್ಯಕ್ತಿಯ ಜೀವನದಲ್ಲಿ ಪವಾಡವೇ ನಡೆದಿದೆ ಎಂದು ಹೇಳಬಹುದು.

ನಾಗಪುರದ 38ವರ್ಷ ವಯಸ್ಸಿನ ವ್ಯಕ್ತಿಯೊಬ್ಬರಿಗೆ ಇವರು ಟೆಕ್ಕಿಯಾಗಿದ್ದು, ಆ.25 ರಂದು ಹೃದಯಾಘಾತ ಸಂಭವಿಸಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಇವರ ಹೃದಯ ಬಡಿದುಕೊಳ್ಳುತ್ತಿರಲಿಲ್ಲ. ಕೂಡಲೇ ರೋಗಿಯನ್ನು ಐಸಿಯುಗೆ ದಾಖಲು ಮಾಡಲಾಗಿತ್ತು. ವೈದ್ಯರು ಕೂಡಲೇ ತುರ್ತು ಚಿಕಿತ್ಸೆ ನೀಡಿದರೂ ಒಂದು ಗಂಟೆಗಳ ಕಾಲ ಹೃದಯ ಸ್ತಬ್ಧವಾಗಿತ್ತು. ಆದರೆ ಅನಂತರ ಬಡಿದುಕೊಂಡಿತ್ತು. ಇಂತಹ ಪವಾಡ ನಡೆದ ವ್ಯಕ್ತಿ ಸೆ.13 ರಂದು ಆಸ್ಪತ್ರೆಯಿಂದ ಡಿಸ್ಟಾರ್ಜ್‌ ಮಾಡಲಾಗಿದೆ. ಆರೋಗ್ಯವಂತರಾಗಿದ್ದಾರೆ.

ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ರೋಗಿಯ ಹೃದಯ ಬಡಿತವು 40 ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತಿತ್ತು. ಹೃದ್ರೋಗ ತಜ್ಞ ಡಾ. ರಿಷಿ ಲೋಹಿಯಾ ಅವರಿಗೆ 40 ನಿಮಿಷಗಳ ಕಾಲ ಸಿಪಿಆರ್ ನೀಡಲು ನಿರ್ಧರಿಸಿದ್ದರು, ಆ ಸಮಯದಲ್ಲಿ ಮಾನಿಟರ್‌ನಲ್ಲಿ ಕಂಪನವು ಗೋಚರಿಸುತ್ತದೆ. ರೋಗಿಗೆ ಸಿಪಿಆರ್ ಜೊತೆಗೆ ಡಿಫಿಬ್ರಿಲೇಷನ್ ಶಾಕ್ ನೀಡಲಾಗುತ್ತಿದೆ. ಮತ್ತೆ ಹೃದಯ ಬಡಿತ ಶುರುವಾಗುವವರೆಗೂ ಇದು ಮುಂದುವರೆಯಿತು.

ಯಾವುದೇ ರೋಗಿಗೆ 40 ನಿಮಿಷದವರೆಗೆ ಸಿಪಿಆರ್‌ ನೀಡಬಹುದು. ಒಂದು ವೇಳೆ ಅಷ್ಟರೊಳಗೆ ಹೃದಯ ಬಡಿತ ಸಾಮಾನ್ಯ ಸ್ಥಿತಿಗೆ ಬಾರದಿದ್ದರೆ ಇದನ್ನು ನಿಲ್ಲಿಸಲಾಗುತ್ತದೆ. ಆದರೆ ಇಲ್ಲಿ ವೈದ್ಯರು ಅದನ್ನು ಮುಂದುವರಿಸಿದ್ದರು. ಏಕೆಂದರೆ ರೋಗಿಯ ವಯಸ್ಸು ಇನ್ನೂ ಚಿಕ್ಕದು. ಜೊತೆಗೆ ಹೃದಯದಲ್ಲಿ ಕಂಪನ ಕಾಣಿಸುತ್ತಿತ್ತು. ಹೀಗಾಗಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಅಂತಮವಾಗಿ ಒಂದು ಗಂಟೆಗಳ ಚಿಕಿತ್ಸೆ ಬಳಿಕ ರೋಗಿಯ ಹೃದಯ ಬಡಿದುಕೊಂಡಿತು.

ಆಸ್ಪತ್ರೆಯ ದಾಖಲೆಗಳ ಪ್ರಕಾರ, ಅವರಿಗೆ 45 ನಿಮಿಷಗಳ ಕಾಲ ಸಿಪಿಆರ್ ನೀಡಲಾಗಿದೆ. ಮೊದಲ ಸಿಪಿಆರ್ 20 ನಿಮಿಷಗಳ ಕಾಲ ನಡೆಯಿತು ಎಂದು ಡಾ.ಲೋಹಿಯಾ ಹೇಳಿದರು. ಏತನ್ಮಧ್ಯೆ, ಹೃದಯ ಬಡಿತಗಳು 30 ಸೆಕೆಂಡುಗಳ ಕಾಲ ಮುಂದುವರೆಯಿತು. ಕಾರ್ಡಿಯಾಕ್ ಮಸಾಜ್ ಜೊತೆಗೆ ಶಾಕ್ ಕೂಡ ನೀಡಲಾಗುತ್ತಿದೆ ಎಂದರು. ಇದು ಹೃದಯ ಬಡಿತವನ್ನು ಪುನಃಸ್ಥಾಪಿಸಲು ಸಹಾಯ ಮಾಡಿತು. ಇಷ್ಟು ದಿನ ಮಸಾಜ್ ಮಾಡಿದರೂ ರೋಗಿಯ ಪಕ್ಕೆಲುಬುಗಳು ಮುರಿಯಲಿಲ್ಲ ಮತ್ತು ಆಘಾತದಿಂದ ಚರ್ಮವು ಸುಟ್ಟುಹೋಗಲಿಲ್ಲ. ಸೂಕ್ತ ಚಿಕಿತ್ಸೆಯಿಂದ ಇದು ಸಾಧ್ಯವಾಯಿತು.