Home latest Honor killing: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಗುಂಡಿಕ್ಕಿ ಕೊಂದು, ಮೊಸಳೆ ಬಾಯಿಗೆ ಎಸೆದ ಹೆತ್ತವರು- ಇದೊಂದು ಮರ್ಯಾದಾ...

Honor killing: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಗುಂಡಿಕ್ಕಿ ಕೊಂದು, ಮೊಸಳೆ ಬಾಯಿಗೆ ಎಸೆದ ಹೆತ್ತವರು- ಇದೊಂದು ಮರ್ಯಾದಾ ಹತ್ಯೆ

Honor killing
Image source: Tv 9 kannada

Hindu neighbor gifts plot of land

Hindu neighbour gifts land to Muslim journalist

Honor killing: ಪ್ರೀತಿ ಜಗತ್ತಿನ ಅತ್ಯಮೂಲ್ಯ ಅನುಭವ. ನಾವು ಯಾರನ್ನು ಮನಸಾರೆ ಪ್ರೀತಿಸುತ್ತೇವೋ ಅವರು ನಮ್ಮ ಬಾಳಿನಲ್ಲಿ ಕೊನೆಯವರೆಗೆ ಇದ್ದರೆ ಜೀವನ ಸಂಪೂರ್ಣ ಎನ್ನುವವರೇ ಜಾಸ್ತಿ. ಆದರೆ ಇಲ್ಲೊಂದು ಘಟನೆಯಲ್ಲಿ ಪ್ರೀತಿ ವಿಷಯದಲ್ಲಿ ಹೆತ್ತವರೇ ವಿಲನ್‌ ಆದ ಘಟನೆಯೊಂದು ನಡೆದಿದೆ. ಪ್ರೀತಿಸುತ್ತಿದ್ದ ಜೋಡಿಯೊಂದನ್ನು ಯುವತಿಯ ಹೆತ್ತವರು ಕೊಂದು ಮೊಸಳೆಗಳಿಗೆ ಆಹಾರವಾಗಿ ಬಿಸಾಡಿ ಬಿಟ್ಟ ಆಘಾತಕಾರಿ ಘಟನೆಯೊಂದು (Honor killing) ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

ಯುವಕ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಇವರಿಬ್ಬರು ಒಟ್ಟಿಗೆ ಇದ್ದಾಗ ಅವರನ್ನು ಹಿಡಿದ ಯುವತಿ ಮನೆಯವರು, ಇಬ್ಬರ ಮೇಲೂ ಗುಂಡು ಹಾರಿಸಿ ಕೊಂದಿದ್ದಾರೆ. ನಂತರ ಇಬ್ಬರ ಶವಕ್ಕೆ ಭಾರವಾದ ಕಲ್ಲುಗಳನ್ನು ಕಟ್ಟಿ, ಮೊಸಳೆಗಳ ಸಂಚಾರ ಇರುವ ಚಂಬಲ್‌ ನದಿಯ ನಿರ್ಜನ ಪ್ರದೇಶಕ್ಕೆ ಹೋಗಿ ನದಿಯೊಳಗೆ ಶವಗಳನ್ನು ಎಸೆದಿದ್ದು, ಇದನ್ನು ಪೊಲೀಸರ ಮುಂದೆ ಆರೋಪಿಗಳು ಹೇಳಿದ್ದಾರೆ. ಶವಗಳನ್ನು ಮೊಸಳೆಗಳು ತಿನ್ನಲಿ ಎನ್ನುವುದು ಇವರ ಉದ್ದೇಶವಾಗಿತ್ತು ಎಂದು ಆರೋಪಿಗಳು ಹೇಳಿದ್ದಾರೆ.

ಅಂದ ಹಾಗೆ ಈ ಕೊಲೆ ಕೃತ್ಯ ಎರಡು ವಾರಗಳ ನಂತರ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಪೊಲೀಸರು ಡೈವರ್‌ಗಳನ್ನು ಸಂಪರ್ಕ ಮಾಡಿದ ಹೇಗಾದರೂ ಮಾಡಿ ಇಬ್ಬರು ಪ್ರೇಮಿಗಳ ಶವಗಳನ್ನು ಪತ್ತೆ ಮಾಡಲೇಬೇಕೆಂಬ ಹಠದಿಂದ ಕಾರ್ಯಾಚಾರಣೆ ನಡೆಸುತ್ತಿದ್ದಾರೆ. ಜೂನ್‌ 3 ರಂದು ಈ ಜೋಡಿ ನಾಪತ್ತೆಯಾಗಿತ್ತು. ನಾಪತ್ತೆಯಾದ ಯುವಕನ ಹೆಸರು ರಾಧೆ ಶ್ಯಾಂ ತೋಮರ್‌(21ವರ್ಷ). ಯುವತಿಯ ಹೆಸರು ಶಿವಾನಿ ತೋಮರ್‌ (18ವರ್ಷ). ಯುವಕನ ಹೆತ್ತವರು ಶಿವಾನಿ ತೋಮರ್‌ನ ಮನೆಯವರ ವಿರುದ್ಧ ಆರೋಪ ಮಾಡಿದ್ದರು. ಈ ಸಂದರ್ಭದಲ್ಲಿ ಶಿವಾನಿ ತೋಮರ್‌ನ ಕುಟುಂಬಸ್ಥರನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸಿದಾಗ ಈ ಕೃತ್ಯ ಬಯಲಾಗಿತ್ತು.

ಈ ಜೋಡಿಹಕ್ಕಿಗಳು ಒಂದೇ ಜಾತಿಯವರಾಗಿದ್ದರೂ, ಇವರಿಬ್ಬರ ಪ್ರೀತಿಗೆ ಕುಟುಂಬಸ್ಥರ ಮನ್ನಣೆ ಸಿಗಲಿಲ್ಲ. ಆದರೂ ಇಬ್ಬರು ಪೋಷಕರ ಮಾತನ್ನು ಕೇಳದೆ ತಿರುಗಾಡುತ್ತಿದ್ದರು. ಈ ಕೊಲೆ ಕೃತ್ಯದಲ್ಲಿ ಹಲವು ಮಹಿಳೆಯರು ಸೇರಿದಂತೆ ಶಿವಾನಿಯ ತಂದೆ ಕೂಡಾ ಇದ್ದಾರೆಂದು ವರದಿಯಲ್ಲಿ ಹೇಳಲಾಗಿದೆ.

ಇದನ್ನೂ ಓದಿ: Monsoon 2023: ಇಳೆಗೆ ಮಳೆಯ ಸ್ಪರ್ಶ; ಮುಂದಿನ 48ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ