Home latest ಇಸ್ಲಾಂ ಧರ್ಮದಂತೆ ಬುರ್ಖಾ ಧರಿಸಲು ಒಪ್ಪದ ಹಿನ್ನೆಲೆ!! ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯ ಬರ್ಬರ...

ಇಸ್ಲಾಂ ಧರ್ಮದಂತೆ ಬುರ್ಖಾ ಧರಿಸಲು ಒಪ್ಪದ ಹಿನ್ನೆಲೆ!! ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾದ ಯುವತಿಯ ಬರ್ಬರ ಹತ್ಯೆ!!

Hindu neighbor gifts plot of land

Hindu neighbour gifts land to Muslim journalist

ಮುಂಬೈ:ಹಿಂದೂ ಯುವತಿಯೋರ್ವಳು ಮುಸ್ಲಿಂ ಯುವಕನೊಂದಿಗೆ ಪ್ರೀತಿಗೆ ಬಿದ್ದು,ಆತನೇ ಬೇಕೆಂದು ಮದುವೆಯಾದಾಕೆಯ ದುರಂತ ಅಂತ್ಯವಾಗಿದ್ದು, ಬುರ್ಖಾ ಧರಿಸಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ ಆಕೆಯ ಪ್ರೀತಿಯ ಪತಿಯೇ ಕೊಲೆಗೈದ ಘಟನೆ ಮುಂಬೈನ ತಿಲಕ್ ನಗರದಲ್ಲಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಆರೋಪಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಮೃತ ಯುವತಿಯನ್ನು ರೂಪಾಲಿ ಎಂದು ಗುರುತಿಸಲಾಗಿದ್ದು, ಆಕೆಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಕೃತ್ಯ ಎಸಗಿದ ಆರೋಪಿ ರೂಪಾಲಿಯ ಪತಿ ಇಕ್ಬಾಲ್ ಮೊಹಮ್ಮದ್ ನನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಘಟನೆ ವಿವರ:ಮೃತ ರೂಪಾಲಿ ಹಾಗೂ ಆರೋಪಿ ಇಕ್ಬಾಲ್ ಕಳೆದ ಕೆಲ ವರ್ಷಗಳಿಂದ ಪ್ರೀತಿಸಿದ್ದು, ಆ ಬಳಿಕ ಇಸ್ಲಾಂ ಧರ್ಮದ ನಿಯಮದಂತೆಯೇ ವಿವಾಹವಾಗಿದ್ದರು. ವಿವಾಹದ ಬಳಿಕ ಗಂಡನ ಮನೆಯಲ್ಲಿ ಯುವತಿಗೆ ಕಿರುಕುಳ ನೀಡಲಾಗಿದ್ದು, ಮನೆಯೊಳಗೂ ಬುರ್ಖಾ ಧರಿಸುವಂತೆ ಒತ್ತಡ ಹೇರಲಾಗಿತ್ತು. ಇದಕ್ಕೆ ಯುವತಿ ರೂಪಾಲಿ ಒಪ್ಪದೇ, ಗಂಡನನ್ನು ಬಿಟ್ಟು ಬೇರೆಯೇ ವಾಸಿಸಲು ಪ್ರಾರಂಭಿಸಿದ್ದಳು ಎನ್ನಲಾಗಿದೆ.

ಇಬ್ಬರ ಪ್ರೀತಿಯ ಫಲವಾಗಿ ಅವರಿಬ್ಬರ ದಾಂಪತ್ಯದಲ್ಲಿ ಮಗುವೊಂದು ಜನಿಸಿದ್ದು, ಪತಿ ಪತ್ನಿಯರ ಜಗಳದ ಮಧ್ಯೆ ವಿಚ್ಛೇದನದ ಮಾತು ಬಂದಾಗ ಮಗುವನ್ನು ನೀಡುವಂತೆ ಆರೋಪಿ ಕೇಳಿದ್ದ. ಇದಕ್ಕೆ ಯುವತಿ ಒಪ್ಪದೇ ಮಗುವಿನೊಂದಿಗೆ ಬೇರೆ ವಾಸ ಮಾಡಿದ್ದಳು. ಪತಿ ಮನೆಯವರಿಂದ ಹಾಗೂ ಪತಿಯಿಂದ ತನಗೆ ಕಿರುಕುಳ ಆಗುತ್ತಿದೆ ಎಂದು ಹಲವರಲ್ಲಿ ಹೇಳಿಕೊಂಡಿದ್ದ ರೂಪಾಲಿ ಹೇಗಾದರೂ ಮಾಡಿ ಆತನಿಂದ ವಿಚ್ಛೇದನ ಪಡೆಯಬೇಕು ಎಂದು ನಿರ್ಧರಿಸಿದ್ದಳು.ಇದೇ ವಿಚಾರವಾಗಿ ತಾರಕಕ್ಕೇರಿದ ಜಗಳ ಆಕೆಯ ಕೊಲೆಯಲ್ಲಿ ಅಂತ್ಯವಾಗಿದೆ. ಸದ್ಯ ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.