Home latest GST ಕಡಿತ – ಕೊನೆಗೂ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿ, ಹೊಸ ದರ ಘೋಷಿಸಿದ ‘ಮಾರುತಿ...

GST ಕಡಿತ – ಕೊನೆಗೂ ಕಾರುಗಳ ಬೆಲೆಯಲ್ಲಿ ಇಳಿಕೆ ಮಾಡಿ, ಹೊಸ ದರ ಘೋಷಿಸಿದ ‘ಮಾರುತಿ ಸುಜುಕಿ’ !!

Hindu neighbor gifts plot of land

Hindu neighbour gifts land to Muslim journalist

GST: ಕೇಂದ್ರ ಸರ್ಕಾರವು ಜಿಎಸ್‌ಟಿ ಪರಿಷ್ಕರಣಿಯನ್ನು ನಡೆಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆಯಲ್ಲಿ ವ್ಯತ್ಯಾಸ ಉಂಟಾಗಿದೆ. ಈಗಾಗಲೇ ಕಾರು ಮತ್ತು ಮೊಬೈಲ್ ಕಂಪನಿಗಳು ತಮ್ಮ ಬೆಲೆ ವ್ಯತ್ಯಾಸವನ್ನು ಘೋಷಿಸಿಕೊಂಡಿವೆ. ಆದರೆ ಇದುವರೆಗೂ ಮಾರುತಿ ಸುಜುಕಿ ತನ್ನ ಬೆಲೆ ಇಳಿಕೆ ದರವನ್ನು ಘೋಷಿಸಿಕೊಂಡಿರಲಿಲ್ಲ. ಇದೀಗ ತನ್ನ ಹೊಸ ಬೆಲೆಯನ್ನು ಸಂಸ್ಥೆಯು ಘೋಷಿಸಿಕೊಂಡಿದ್ದು ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ.

 

ಹೌದು, ಕೇಂದ್ರ ಸರ್ಕಾರ ಜಿಎಸ್‌ಟಿ ಕಡಿತ ಮಾಡಿದೆ. ಇದರಿಂದ ಅಗತ್ಯ ವಸ್ತುಗಳು ಬೆಲೆಯೂ ಕಡಿಮೆಯಾಗುತ್ತಿದೆ. ಶೇಕಡಾ 28ರಷ್ಟಿದ್ದ ಜಿಎಸ್‌ಟಿ ತೆರಿಗೆಯನ್ನು ಶೇಕಡಾ 18 ಹಾಗೂ ಶೇಕಡಾ 5ಕ್ಕೆ ಇಳಿಸಲಾಗಿದೆ. ಸೆಪ್ಟೆಂಬರ್ 22 ರಿಂದು ಹೊಸ ಜಿಎಸ್‌ಟಿ ದರ ಜಾರಿಯಾಗುತ್ತಿದೆ. ಇದರ ಪರಿಣಾಮ ಕಾರುಗಳ ಬೆಲೆಯೂ ಭಾರಿ ಇಳಿಕೆಯಾಗಿದೆ. ಹಾಗಿದ್ರೆ ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ತಿಳಿಯೋಣ ಬನ್ನಿ.

 

ಜಿಎಸ್‌ಟಿ ಕಡಿತದ ಬಳಿಕ ಮಾರುತಿ ಸುಜುಕಿ ಕಾರುಗಳ ಆರಂಭಿಕ ಬೆಲೆ (ಎಕ್ಸ್ ಶೋ ರೂಂ)

ಮಾರುತಿ ಸುಜುಕಿ ಅಲ್ಟೋ : 3,69,900 ರೂ ( 1,07,600 ರೂ ಕಡಿತ

ಮಾರುತಿ ಸುಜುಕಿ ವ್ಯಾಗನ್‌ಆರ್ : 4,98,900 ರೂ ( 79,600 ರೂ ಕಡಿತ)

ಮಾರುತಿ ಸುಜುಕಿ ಇಗ್ನಿಸ್ : 5,35,100 ರೂ ( 71,300 ರೂ ಕಡಿತ)

ಮಾರುತಿ ಸುಜುಕಿ ಸ್ವಿಫ್ಟ್ : 5,78,900 ರೂ ( 84,600 ರೂ ಕಡಿತ)

ಮಾರುತಿ ಸುಜುಕಿ ಬಲೆನೋ: 5,98, 900 ರೂ ( 86,100 ರೂ ಕಡಿತ)

ಮಾರುತಿ ಸುಜುಕಿ ಡಿಸೈರ್: 6,25,600 ರೂ (87,700 ರೂ ಕಡಿತ)

ಮಾರುತಿ ಸುಜುಕಿ ಫ್ರಾಂಕ್ಸ್ : 6,84,900 ರೂ (1,12,600 ರೂ ಕಡಿತ)

ಮಾರುತಿ ಸುಜುಕಿ ಬ್ರೆಜಾ : 8,25,900 ರೂ ( 1,12,700 ರೂ ಕಡಿತ)

 

 “ಐಷಾರಾಮಿ ಕಾರುಗಳ” ಮಾದರಿವಾರು ಪಟ್ಟಿ ಇಲ್ಲಿದೆ:

1) ಗ್ರ್ಯಾಂಡ್ ವಿಟಾರಾ: ₹10,76,500 (₹1,07,000 ವರೆಗೆ ಅಗ್ಗ)

2)ಜಿಮ್ನಿ: ₹12,31,500 (₹51,900 ವರೆಗೆ ಅಗ್ಗ)

3)ಎರ್ಟಿಗಾ: ₹8,80,000 (₹46,400 ವರೆಗೆ ಅಗ್ಗ)

4)XL6: ₹11,52,300 (₹52,000 ವರೆಗೆ ಅಗ್ಗ)

5)ಇನ್ವಿಕ್ಟೋ: ₹24,97,400 (₹61,700 ವರೆಗೆ ಅಗ್ಗ)