Home latest ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರೇ ನಿಮಗೊಂದು ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಮಾಹಿತಿ!

ಆಂಡ್ರಾಯ್ಡ್ ಸ್ಮಾರ್ಟ್​​ಫೋನ್ ಬಳಕೆದಾರರೇ ನಿಮಗೊಂದು ಶಾಕಿಂಗ್ ಸುದ್ದಿ: ಸರ್ಕಾರದಿಂದ ಎಚ್ಚರಿಕೆ ಮಾಹಿತಿ!

Hindu neighbor gifts plot of land

Hindu neighbour gifts land to Muslim journalist

ಪ್ರಸಿದ್ಧ ವೆಬ್ ಬ್ರೌಸರ್‌ಗಳಾದ ಗೂಗಲ್ ಕ್ರೋಮ್
ಮತ್ತು ಮೊಜಿಲ್ಲಾದಲ್ಲಿ ಭದ್ರತಾ ಲೋಪವೊಂದು ಕಂಡುಬಂದ ಬಗ್ಗೆ ಎರಡು ದಿನಗಳ ಹಿಂದೆಯಷ್ಟೆ
ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (CERT-In) ಎಚ್ಚರಿಕೆಯೊಂದನ್ನು ನೀಡಿತ್ತು. ಇದೀಗ ಇದರ ಬೆನ್ನಲ್ಲೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ.

ಅದೇನೆಂದರೆ ಸ್ಮಾರ್ಟ್‌ಫೋನ್‌ನಲ್ಲಿ ಉಪಯೋಗಿಸುವ UNISOC ಚಿಪ್‌ಸೆಟ್‌ನಲ್ಲಿ ದುರ್ಬಲತೆ ಕಂಡು ಬಂದಿದೆ ಎಂದು ಹೇಳಿದೆ. UNISOC ಚಿಪ್‌ಸೆಟ್ ಆಧಾರಿತ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಜನರಿಗೆ ಸರ್ಕಾರ ಸೈಬರ್‌ಸೆಕ್ಯುರಿಟಿ ತಂಡ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

CERT-IN, UNISOC ಚಿಪ್ ಸೆಟ್ ನಿಂದ ಕಾರ್ಯನಿರ್ವಹಿಸುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಪ್ರಾಬ್ಲಂ ಕಂಡುಬಂದಿದೆ. ಹಾಗಾಗಿ ಕೆಲವು ಸ್ಮಾರ್ಟ್‌ಫೋನ್‌ಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಆಕ್ರಮಣ ಮಾಡಬಹುದು ಎಂಬ ಮಾಹಿತಿ ಹೊರಬಿದ್ದಿದೆ. ಇಷ್ಟು ಮಾತ್ರವಲ್ಲದೇ ಇದರ ಜೊತೆಗೆ ಈ ದುರ್ಬಲತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಅಲ್ಲ ಬದಲಾಗಿ ಮೋಡೆಮ್ ಫರ್ಮ್‌ವೇರ್‌ನಲ್ಲಿದೆ ಎಂದು ಸಂಸ್ಥೆ ಉಲ್ಲೇಖಿಸಿದೆ.

ನಿಮ್ಮ ಸ್ಮಾರ್ಟ್‌ಫೋನ್ DoS ದಾಳಿಗೆ ಒಳಗಾಗಿದ್ದ ನಿಮಗೆ ಕರೆ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, DoS ದಾಳಿಯಿಂದ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ವೈಯಕ್ತಿಕ ಮಾಹಿತಿ ಅಥವಾ ಯಾವುದೇ ನಷ್ಟ ಸಂಭವಿಸುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಇತ್ತೀಚೆಗೆ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಹ್ಯಾಕರ್ಸ್ ಉಪಟಳ ಎಲ್ಲೆಲ್ಲೂ ಇದೆ. ಸ್ಮಾರ್ಟ್ ಫೋನ್‌ಗಳಲ್ಲಿ ಕೆಲವು ಭದ್ರತೆ ಇಲ್ಲದಿರುವ ಆ್ಯಪ್‌ಗಳ ಮೂಲಕ ಹ್ಯಾಕರ್ಸ್
ಕೈಯಾಡಿಸುತ್ತಾರೆ. ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಾರೆ. ಈ ರೀತಿಯಾದಾಗ ಜನರು ಸ್ಮಾರ್ಟ್‌ಫೋನ್‌ಗಳಿಗೆ ವೈರಸ್‌ ದಾಳಿಯಾದರೆ ಅಥವಾ ಹ್ಯಾಕ್ ಆದರೆ ಅದನ್ನು ಪತ್ತೆ ಹಚ್ಚುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳಿಗೆ ಆ್ಯಪ್ ಇನ್‌ಸ್ಟಾಲ್ ಮಾಡುವ ಮೊದಲು ಅವುಗಳು ಅಧಿಕೃತ ಆ್ಯಪ್‌ಗಳೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಕೆಲವು ಆ್ಯಪ್‌ಗಳು ಮಾಲ್ವೇರ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ಡೌನ್ಲೋಡ್ ಮಾಡುವ ಮುನ್ನ ಎಚ್ಚರದಿಂದಿರಿ.
ಅಂತೆಯೆ ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿ ಇದ್ದಕ್ಕಿಂದಂತೆಯೇ ಜಾಹೀರಾತು ಕಾಣಿಸಿಕೊಳ್ಳುತ್ತದೆ. ಯಾವುದೇ ಭಾಷೆಯ, ನಿಮಗೆ ಸಂಬಂಧವಿಲ್ಲದ ಜಾಹೀರಾತುಗಳ ಕಾಣಿಸಿಕೊಳ್ಳುತ್ತದೆ. ಇದುಕೂಡ ಹ್ಯಾಕರ್‌ಗಳ ಕೆಲಸ. ಇನ್‌ಸ್ಟಾಲ್ ಮಾಡಿರುವ ಆ್ಯಪ್ ಐಕಾನ್‌ಗಳು ಮರೆಯಾಗಬಹುದು. ಅಥವಾ ಡೌನ್ಲೋಡ್ ಮಾಡಿದ ಆ್ಯಪ್ ಹೋಮ್ ಸ್ಕ್ರೀನ್ ನಲ್ಲಿ ಕಾಣಿಸದೇ ಇರಬಹುದು. ಇಂಟರ್‌ನೆಟ್ ರೀಜಾರ್ಜ್ ಮಾಡಿಸಿಕೊಂಡಿದ್ದರೆ ಅಗತ್ಯಕ್ಕಿಂತ ಹೆಚ್ಚಿನ ಡೇಟಾ ಬಳಕೆಯಾಗುತ್ತಿದೆಯಾ ಎಂದು ಗಮನವಹಿಸುವುದು ಮುಖ್ಯ. ಬಳಕೆದಾರನಿಗೆ ಅರಿವಿಲ್ಲ ಕೆಲವು ಆ್ಯಪ್‌ಗಳು ಹೆಚ್ಚಿನ ಡೇಟಾವನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಹ್ಯಾಕರ್‌ಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಿ.