Home latest Gokarna Mahabaleshwar temple: ಗೋಕರ್ಣ ದೇವಸ್ಥಾನದ IT ನೋಟಿಸ್ :ಕೋಟಿಗಟ್ಟಲೆ ಇನ್ ಕಮ್ ಟ್ಯಾಕ್ಸ್...

Gokarna Mahabaleshwar temple: ಗೋಕರ್ಣ ದೇವಸ್ಥಾನದ IT ನೋಟಿಸ್ :ಕೋಟಿಗಟ್ಟಲೆ ಇನ್ ಕಮ್ ಟ್ಯಾಕ್ಸ್ ಕಟ್ಟಲು ತಾಕೀತು !

Gokarna Mahabaleshwar temple
Image source: prajavani

Hindu neighbor gifts plot of land

Hindu neighbour gifts land to Muslim journalist

Gokarna Mahabaleshwar temple: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪುರಾಣ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದಕ್ಕೆ (Gokarna Mahabaleshwar temple )1.38 ಕೋಟಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ (Income Tax) ಇಲಾಖೆ ದೇವಸ್ಥಾನದ ಆಡಳಿತ ಮಂಡಳಿಗೆ ನೋಟಿಸ್ ( Notice served to Gokarna Temple) ಜಾರಿ ಮಾಡಿದೆ. ಗೋಕರ್ಣದ ದೇವಳದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಪಟ್ಟಂತೆ ಈ ನೋಟಿಸ್ ಸರ್ವೇ ಮಾಡಲಾಗಿದೆ.

ಹಣಕಾಸು ವ್ಯವಹಾರದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ರಾಮಚಂದ್ರಾಪುರ ಮಠದಿಂದ (Ramachandrapur Mutt) ದೇವಸ್ಥಾನ ಇಲ್ಲಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಹಣಕಾಸಿನ ವ್ಯವಹಾರದಲ್ಲಿ ವ್ಯತ್ಯಯ ಕಂಡು ಬಂದ ಹಿನ್ನೆಲೆ ಆಡಳಿತ ಮಂಡಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ ಎನ್ನಲಾಗಿದೆ. 2015-16 ನೇ ಇಸವಿಯ ಸಾಲಿನಲ್ಲಿ ಈ ವ್ಯತ್ಯಯ ಕಂಡುಬಂದಿತ್ತು ಎನ್ನಲಾಗಿದೆ. ಇಂಕಮ್ ಟ್ಯಾಕ್ಸ್ ನೋಟೀಸು ಬರುತ್ತಿದ್ದಂತೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ (Justice B N Sri Krishna) ಅವರ ನೇತೃತ್ವದಲ್ಲಿ ಇರುವ ದೇವಸ್ಥಾನ ಆಡಳಿತ ಮಂಡಳಿಯು ತುರ್ತಾಗಿ ದೇವಸ್ಥಾನ ಉಸ್ತುವಾರಿ ಸಮಿತಿ ಸಭೆ ನಡೆಸಿದೆ. ಆನ್ ಲೈನ್ ನಲ್ಲಿ ನಡೆದ ಸಭೆಯಲ್ಲಿ ತಕ್ಷಣದಲ್ಲಿ ದಂಡ ಪಾವತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಕಮಿಟಿ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿ, ಹಿಂದೆ ಹಲವು ದೋಷಗಳು ಆಗಿದ್ದವು. ಇವುಗಳನ್ನು ಸರಿಪಡಿಸಿ ದೇವಸ್ಥಾನ ಕಾರ್ಯಗಳು ಸುಗಮವಾಗಿ ನಡೆದುಕೊಂಡು ಹೋಗಲು ಬೇಕಾದ ಎಲ್ಲಾ ಕೆಲಸ ಕಾರ್ಯವನ್ನು ಮಾಡಲಾಗಿದೆ, ಮುಂದೆಯೂ ಮತ್ತಷ್ಟು ಅಗತ್ಯ ಕೆಲಸ ಮಾಡಲಾಗುತ್ತದೆ. ಜೊತೆಗೆ ಆಡಳಿತದ ಲೆಕ್ಕಪತ್ರ ನಿರ್ವಹಣೆಗೆ ಲೆಕ್ಕಾಧಿಕಾರಿಯನ್ನು ನೇಮಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: MS Dhoni: ಅರೆ, ಇವರ ಜತೆ ನಟಿಸ್ತಾರಾ ಕ್ಯಾಪ್ಟನ್ ಕೂಲ್ ಧೋನಿ ? ಸುದ್ದಿ ಕೇಳಿ ಅಚ್ಚರಿಪಟ್ಟ ಸಿನಿ ಪ್ರಿಯರು !!