Home latest ನಮೋ ನಮಃ ಗೋಮಾತೆಗೆ | ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಚೊಚ್ಚಲ ಸ್ಥಾನ

ನಮೋ ನಮಃ ಗೋಮಾತೆಗೆ | ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಚೊಚ್ಚಲ ಸ್ಥಾನ

Hindu neighbor gifts plot of land

Hindu neighbour gifts land to Muslim journalist

ಗೋಮಾತೆ ಎಂದರೆ ಭಾರತದಲ್ಲಿ ಪೂಜ್ಯನೀಯ ಸ್ಥಾನ ಇದೆ. ನಮ್ಮ ತಾಯಿ ಹೇಗೋ ಹಾಗೇ ಗೋಮಾತೆ. ಹಾಗಾಗಿ ಎಲ್ಲಾ ಕಡೆ ಇದನ್ನು ಅಮ್ಮನ ರೀತಿಯಲ್ಲೇ ಇದನ್ನು ಕಾಣುತ್ತಾರೆ. ಭಾರತದಲ್ಲಿ ಗೋಮಾತೆಗೆ ಅಗ್ರಸ್ಥಾನ. ಇನ್ನು ಹಾಲು ಉತ್ಪಾದನೆಯಲ್ಲಿಯೂ ವಿಶ್ವದಲ್ಲಿ ಭಾರತದ ಅಗ್ರಸ್ಥಾನ ಮುಂದುವರಿದಿದೆ.

ಹಾಲು ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನ ಪಡೆದುಕೊಂಡಿರುವುದು ನಿಜಕ್ಕೂ ಗಮನಾರ್ಹ. ಪ್ರಧಾನಿ ನರೇಂದ್ರ ಮೋದಿ 305 ಕೋಟಿ ರೂ. ವೆಚ್ಚದಲ್ಲಿ ಗುಜರಾತ್‌ನ ಹಿಮ್ಮತ್‌ನಗರ ಪಟ್ಟಣದ ಬಳಿ ಸಬರಕಾಂತ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸೇರಿದ ಹಾಲು ಉತ್ಪಾದನಾ ಘಟಕ ಡೈರಿಯನ್ನು ಇತ್ತೀಚೆಗೆ ಉದ್ಘಾಟಿಸಿದರು. ಇದು ಅಮುಲ್ ಬ್ರಾಂಡ್ ಅಡಿಯಲ್ಲಿ ಡೈರಿ ಉತ್ಪನ್ನಗಳನ್ನು ತಯಾರಿಸುತ್ತದೆ.

ಹಾಲು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಅಗ್ರಸ್ಥಾನ ಪಡೆದುಕೊಂಡಿದೆ. 2021 ರಲ್ಲಿ 209.96 ಮಿಲಿಯನ್ ಟನ್‌ಗಳನ್ನು ಉತ್ಪಾದನೆಯಾಗಿದೆ. ವಿಶ್ವದಲ್ಲಿ ಭಾರತದ ಡೈರಿ ಉತ್ಪನ್ನಗಳ ಪಾಲು ಶೇಕಡಾ 21 ರಷ್ಟಿದೆ. 2020 21ರಲ್ಲಿ ತಲಾ ಬಳಕೆ ದಿನಕ್ಕೆ 427 ಗ್ರಾಂ. ನಷ್ಟಿದೆ.