Home Interesting ಅಬ್ಬಾ ಏನಿದು ಹೊಸ ಜೀವಿ!!!ಅಪರೂಪದಲ್ಲಿ ಅಪರೂಪದ ‘ಗ್ಲಾಸ್ ಅಕ್ಟೋಪಸ್’ ನಿಮ್ಮ ಮುಂದೆ | ವೀಡಿಯೋ ವೈರಲ್

ಅಬ್ಬಾ ಏನಿದು ಹೊಸ ಜೀವಿ!!!ಅಪರೂಪದಲ್ಲಿ ಅಪರೂಪದ ‘ಗ್ಲಾಸ್ ಅಕ್ಟೋಪಸ್’ ನಿಮ್ಮ ಮುಂದೆ | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಜಗತ್ತು ಒಂದು ವಿಸ್ಮಯ ನಗರಿ. ದಿನದಿಂದ ದಿನಕ್ಕೆ ನವೀನ ವೈಶಿಷ್ಟ್ಯದ ಮೂಲಕ ಜನರಿಗೆ ಅಚ್ಚರಿಗಳು ಎದುರಾಗುತ್ತಲೇ ಇರುತ್ತವೆ.

ಕಾಲ ಎಷ್ಟೇ ಬದಲಾದರೂ ಕೂಡ ತಂತ್ರಜ್ಞಾನ ಬೆಳೆದಂತೆ ಎಲ್ಲದರಲ್ಲೂ ಮಾರ್ಪಾಡು ಹೊಂದಿದರೂ ಕೂಡ ಪ್ರಪಂಚದಲ್ಲಿ ನಡೆಯುವ ಕೆಲ ವಿಚಾರಗಳಿಗೆ ಯಾವುದೇ ನೆಲೆಗಟ್ಟಿನಲ್ಲಿ ತರ್ಕ ಮಾಡಲು ಸಾಧ್ಯವಿಲ್ಲ.

ವಿಜ್ಞಾನ ಕ್ಷೇತ್ರದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿ ವಿಜ್ಞಾನಿಗಳು ಅನ್ಯ ಗ್ರಹಗಳ ಬಗ್ಗೆ ಸಂಶೋಧನೆ ನಡೆಸುತ್ತಿರುವುದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರವೇ..ಈ ನಡುವೆ ಅನ್ಯಗ್ರಹ ಜೀವಿಗಳ ಬಗ್ಗೆ ಚರ್ಚೆಗಳು ಬಿರುಸಾಗಿ ನಡೆಯುತ್ತಿದೆ.

ಈ ಚಿತ್ರದ ಕಂಡ ತಕ್ಷಣ ಅನ್ಯಗ್ರಹದ ಜೀವಿಯೇ ಎಂದು ಅನುಮಾನ ಕಾಡದಿರದು.. ಆದರೆ ಅಸಲಿಗೆ ಇದು ಬೇರೆ ಗ್ರಹಗಳ ಜೀವಿಯಾಗಿರುವ ಬದಲಿಗೆ ನಮ್ಮದೇ ಭೂಮಿಯ ಮೇಲೆ ಇರುವ ಅಕ್ಟೋಪಸ್ ಎಂದರೆ ಅಚ್ಚರಿಯಾಗಹುದು.

ಇದು ಪಾರದರ್ಶಕವಾಗಿದ್ದು, ಗಾಜಿನಂತೆಯೇ ಕಾಣಿಸುವುದರಿಂದ ಕನ್ನಡದಲ್ಲಿ ಗಾಜಿನ ಅಕ್ಟೋಪಸ್ ಎಂದು ಕರೆಯಲ್ಪಡುವ ಇದರ ವೈಜ್ಞಾನಿಕ ಹೆಸರು ವಿಟ್ರೆಲೆಡೋನೆಲ್ಲಾ ರಿಕಾರ್ಡಿ.

ಪ್ರಪಂಚದಾದ್ಯಂತ ಉಷ್ಣವಲಯದ ಮತ್ತು ಉಪೋಷ್ಣವಲಯದ ನೀರಿನಲ್ಲಿ ಕಂಡುಬರುವ ಅತ್ಯಂತ ಅಪರೂಪವಾದ ಜೀವಿಯಾಗಿದೆ.

ಸುಂದರವಾದ ಜೀವಿಗಳು ಸಮುದ್ರದಾಳದಲ್ಲಿ ಇದ್ದು, ಸೂರ್ಯನ ಬೆಳಕು ಇವುಗಳಿಗೆ ತಲುಪುವುದಿಲ್ಲ. ಇದರ ವಿಡಿಯೋ ಎಲ್ಲೆಡೆ ಹರಿದಾಡಿ ಸಂಚಲನ ಮೂಡಿಸಿದೆ.

ಸಾಮಾನ್ಯರು ನೋಡಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ‘ದಿ ಆಕ್ಸಿಜನ್ ಪ್ರಾಜೆಕ್ಟ್’ ಈ ಅಪರೂಪದ ಜೀವಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಅಕ್ಟೋಪಸ್​ನ ಕಣ್ಣುಗಳು, ಆಪ್ಟಿಕ್ ನರ ಮತ್ತು ಜೀರ್ಣಾಂಗಗಳು ಮಾತ್ರ ಅಪಾರದರ್ಶಕವಾಗಿವೆ. ಉಳಿದವುಗಳು ಪಾರದರ್ಶಕವಾಗಿದ್ದು, ನೋಡುಗರಿಗೆ ವಿಸ್ಮಯ ಮೂಡಿಸುತ್ತದೆ

.ಈ ಟ್ರೆಂಡಿಂಗ್ ವೀಡಿಯೊ ಈಗಾಗಲೇ, 20 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 440 ಲೈಕ್‌ಗಳನ್ನು ಪಡೆದುಕೊಂಡಿದ್ದು, ಎಲ್ಲರಿಗೂ ಸುಲಭದಲ್ಲಿ ಕಾಣಸಿಗದ ಅಪರೂಪದ ಮತ್ತು ನಿಗೂಢ ಪ್ರಾಣಿಯ ಸೌಂದರ್ಯಕ್ಕೆ ನೆಟ್ಟಿಗರು ಮಂತ್ರಮುಗ್ಧರನ್ನಾಗಿಸಿದೆ