Home Entertainment ಸಿನಿಮಾ ಸ್ಟೈಲ್ ನಲ್ಲಿ ನಡೆಯಿತೊಂದು ವಿವಾಹ | ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ “ನಿಲ್ಸಿ” ಎಂದು...

ಸಿನಿಮಾ ಸ್ಟೈಲ್ ನಲ್ಲಿ ನಡೆಯಿತೊಂದು ವಿವಾಹ | ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ “ನಿಲ್ಸಿ” ಎಂದು ಕೂಗುತ್ತಾ ಮಂಟಪಕ್ಕೆ ಓಡಿಬಂದ ಯುವಕ | ಹೀಗೆ ಹೇಳಿ ಆತ ಮುಂದೆ ಮಾಡಿದ್ದಾದರೂ ಏನು ಗೊತ್ತಾ??

Hindu neighbor gifts plot of land

Hindu neighbour gifts land to Muslim journalist

ಸಿನಿಮಾ-ಸೀರಿಯಲ್ ಅಂದ್ರೇನೆ ಕಟ್ ಆಂಡ್ ಆಕ್ಷನ್.ಮದುವೆ ಸೀನ್ ನಡೆಯುತ್ತದೆ ಅಂದ ಮೇಲೆ ಅಲ್ಲಿ ಏನಾದರೊಂದು ಡ್ರಾಮ ಇದ್ದೇ ಇದೆ. ಅದರಲ್ಲಿ ‘ನಿಲ್ಸಿ ‘ಎಂಬ ಮಾತು ಬಾರದಿದ್ದರೆ ಅದು ಮದುವೆನೇ ಅಲ್ಲ ಎಂದೇ ಹೇಳಬಹುದು. ಹೀಗೆ ಏನಾದರೊಂದು ಎಡವಟ್ಟು ಇದ್ದೇ ಇರುತ್ತದೆ. ಆದ್ರೆ ಇದೆಲ್ಲ ಆಫ್ ಸ್ಕ್ರೀನ್ ಕಥೆ.ಇಲ್ಲಿರೋದು ಆನ್ ಸ್ಕ್ರೀನ್..

ಹೌದು. ಸಿನಿಮಾದ ಸ್ಟೈಲ್ ನಲ್ಲಿ ಇಲ್ಲೊಂದು ಮದುವೆ ನಡೆದಿದೆ.ಮದುವೆಯ ಸಮಯದಲ್ಲಿ ವಧು-ವರರು ಹೂವಿನ ಹಾರಗಳನ್ನು ಹಿಡಿದುಕೊಂಡು ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮದುವೆ ಮಂಟಪದೊಳಗೆ ಓಡಿಬಂದ ಯುವಕ ವಧುವಿನ ಹಣೆಗೆ ಸಿಂಧೂರ ಇಟ್ಟಿದ್ದಾನೆ.

ಈ ವಿಚಿತ್ರವಾದ ಮದುವೆ ಉತ್ತರ ಪ್ರದೇಶದ ಗೋರಖ್‌ಪುರದ ಬುಧಾತ್‌ನ ಹರ್‌ಪುರದಲ್ಲಿ ನಡೆದಿದೆ.ಮದುವೆಯ ಸಮಯದಲ್ಲಿ ವಧು-ವರರು ಹೂವಿನ ಹಾರಗಳನ್ನು ಹಿಡಿದುಕೊಂಡು ಇನ್ನೇನು ಹಾರ ಬದಲಾಯಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮುಖವನ್ನು ಸ್ಕಾರ್ಫ್​ನಲ್ಲಿ ಮುಚ್ಚಿಕೊಂಡ ಯುವಕನೊಬ್ಬ ಮದುವೆ ಮಂಟಪದೊಳಗೆ ಓಡಿಬಂದು ಅಲ್ಲಿದ್ದ ವಧುವಿನ ಹಣೆಗೆ ಸಿಂಧೂರ ಇಟ್ಟಿದ್ದಾನೆ.ಅದನ್ನು ವಿರೋಧಿಸುವ ಆಕೆ ತನ್ನ ಮುಖವನ್ನು ಮುಚ್ಚಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಆತ ಆಕೆಗೆ ಸಿಂಧೂರ ಇಡುತ್ತಾನೆ.ಲೈವ್ ಆಗಿ ಇದನ್ನು ನೋಡಿದ ವರ ಆಘಾತಕ್ಕೊಳಗಾಗಿದ್ದಾನೆ.ಆ ಮದುವೆ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬರು ಅಲ್ಲಿ ನಡೆದ ಸಂಪೂರ್ಣ ಘಟನೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಆ ವ್ಯಕ್ತಿ ಯಾರು ಗೊತ್ತಾ?ಸಿಂಧೂರವನ್ನಿಟ್ಟ ಆ ವ್ಯಕ್ತಿ ಬೇರಾರು ಅಲ್ಲ ವಧುವಿನ ಮಾಜಿ ಪ್ರೇಮಿಯಾಗಿದ್ದು, ಆತನ ಜೊತೆ ಆಕೆ ಬ್ರೇಕಪ್ ಮಾಡಿಕೊಂಡಿದ್ದಳು. ಆತ ಕೆಲವು ತಿಂಗಳ ಹಿಂದೆ ಕೆಲಸದ ನಿಮಿತ್ತ ಊರಿನಿಂದ ಹೊರಗೆ ಹೋಗಿದ್ದ. ಈ ಮಧ್ಯೆ, ಆ ಹುಡುಗಿಯ ಮದುವೆಯನ್ನು ಬೇರೆಯವರ ಜೊತೆ ಮಾಡಲು ನಿರ್ಧರಿಸಲಾಯಿತು. ಆ ವ್ಯಕ್ತಿಗೆ ವಿಷಯ ತಿಳಿದಾಗ, ಅವನು ತನ್ನ ಪ್ರೀತಿಯನ್ನು ಸಿನಿಮೀಯವಾಗಿ ಎಲ್ಲರೆದುರು ಹೇಳಿಕೊಳ್ಳಲು ಬಯಸಿದ.

https://youtu.be/cWLpNU2LhDQ

ಹೀಗಾಗಿ, ಡಿಸೆಂಬರ್ 1ರಂದು ಮದುವೆ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಆತ ಬಲವಂತವಾಗಿ ಆಕೆಯ ಹಣೆಗೆ ಸಿಂಧೂರವನ್ನಿಟ್ಟಿದ್ದಾನೆ. ಆಕೆಯ ಮಾಜಿ ಪ್ರೇಮಿಯಿಂದ ಮದುವೆ ಮಂಟಪದಲ್ಲಿ ಗಲಾಟೆ ಸೃಷ್ಟಿಯಾದಾಗ ಕೆಲವು ಕುಟುಂಬ ಸದಸ್ಯರು 112ಗೆ ಕರೆ ಮಾಡಿದ್ದು,ಪೊಲೀಸರಿಗೆ ದೂರನ್ನೂ ನೀಡಿದರು.ಆತ ಸಿಂಧೂರ ಇಟ್ಟ ಮಾತ್ರಕ್ಕೆ ಆತನೊಂದಿಗೆ ಆ ವಧುವಿನ ಮದುವೆಯಾಗಲಿಲ್ಲ. ಪೊಲೀಸರು ಆ ಯುವಕನನ್ನು ವಶಕ್ಕೆ ಪಡೆದ ಬಳಿಕ ಮಾರನೇ ದಿನ ಬೆಳಗ್ಗೆ ಆ ಯುವತಿ ತನ್ನ ಮನೆಯವರು ನೋಡಿದ ಹುಡುಗನನ್ನೇ ಮದುವೆಯಾಗಿದ್ದಾಳೆ. ಅದೇ ದಿನ ಆ ಯುವಕನನ್ನು ಕೂಡ ಪೊಲೀಸರು ಮನೆಗೆ ಕಳುಹಿಸಿದರು.ಅಂತೂ ಆತನ ಆಕ್ಟಿಂಗ್ ಆಫ್ ಸ್ಕ್ರೀನ್ ಅಲ್ಲೇ ಉಳಿಯಿತು. ರಿಯಾಲಿಸ್ಟಿಕ್ ಆಗಿ ಮದುವೆ ಆಗುವುದು ಆತನಿಗೆ ಕನಸೇ ಆಯಿತು!!