Home Entertainment ವೇದಿಕೆಯ ಮೇಲೆ ಹಾಡುತ್ತಿದ್ದ ಗಾಯಕಿ ಮೇಲೆ ಬಕೆಟ್ ನಲ್ಲಿ ಹಣ ಸುರಿದ ಅಭಿಮಾನಿ !! |...

ವೇದಿಕೆಯ ಮೇಲೆ ಹಾಡುತ್ತಿದ್ದ ಗಾಯಕಿ ಮೇಲೆ ಬಕೆಟ್ ನಲ್ಲಿ ಹಣ ಸುರಿದ ಅಭಿಮಾನಿ !! | ವೈರಲ್ ಆಗಿದೆ ಈ ಹುಚ್ಚು ಅಭಿಮಾನಿಯ ವಿಡಿಯೋ

Hindu neighbor gifts plot of land

Hindu neighbour gifts land to Muslim journalist

ಕಲೆ ಎಂಬುದು ಒಂದು ವಿಶಿಷ್ಟವಾದ ಪ್ರತಿಭೆ. ಇದು ಯಾರಿಗೂ ಹೇಳಿ-ಕೇಳಿ ಬರುವುದಿಲ್ಲ.ಅದಕ್ಕೆ ಅದರದೇ ಆದ ಆಸಕ್ತಿ ಮುಖ್ಯ.ಯಾರ ಒತ್ತಾಯದಿಂದಲೂ ಅದು ರೂಪಗೊಳ್ಳುವುದಿಲ್ಲ. ನಮ್ಮ ದೇಶದಲ್ಲಂತೂ ಕಲಾವಿದರಿಗೆ ಕೊರತೆಯಿಲ್ಲ.ಪ್ರತಿಭಾನ್ವಿತರು ಎಷ್ಟು ಮಂದಿ ಇದ್ದಾರೋ, ಅಷ್ಟೇ ಪ್ರೋತ್ಸಾಹಿಸೋ ಕೈ ಗಳಿಗೇನು ಕಮ್ಮಿ ಇಲ್ಲ.ಕೆಲವರು ತಮ್ಮ ಹೊಟ್ಟೆ ಪಾಡಿಗಾಗಿ ಕಲೆಯನ್ನು ಪೂಜಿಸಿದರೆ.ಇನ್ನೂ ಕೆಲವರು ತಮ್ಮ ಪ್ರತಿಭೆ ತೋರ್ಪಡಿಸುವ ಮೂಲಕ ಇತರರ ಹೊಟ್ಟೆಯನ್ನು ತಂಪಾಗಿಸುತ್ತಾರೆ.ಹೌದು. ಅಂತಹುದೆ ಪ್ರತಿಭೆ ಈಕೆ. ಇವಳ ಪ್ರತಿಭೆಗೆ ಮನಸೋತು ಅಭಿಮಾನಿಯಿಂದ ದುಡ್ಡಿನ ಮಳೆ!

ಈಕೆ ಜಾನಪದ ಗಾಯಕಿ ಊರ್ವಶಿ ರಾಡಿಯಾ. ಬಾಲಿವುಡ್ ಗಾಯಕರು ಮಾತ್ರವಲ್ಲ ತಮ್ಮ ಮಧುರ ಕಂಠದಿಂದ ಅಭಿಮಾನಿಗಳ ಮನಗೆದ್ದ ಅದೆಷ್ಟೋ ಜಾನಪದ ಗಾಯಕರು ಕೂಡಾ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಸಾಕ್ಷಿ ರಾಡಿಯಾ. ಅಪಾರ ಅಭಿಮಾನಿಗಳನ್ನು ಹೊಂದಿದ ಇವರು ಶೋನಲ್ಲಿ ಅಭಿಮಾನಿಗಳಿಂದ ಹಣದ ಮೂಲಕ ಪ್ರತಿಕ್ರಿಯೆಗಳಿಸುತ್ತಾರೆ.ಹೀಗೆ ತನ್ನ ಲೈವ್ ಶೋ ವೇಳೆ ಅಭಿಮಾನಿಗಳು ನೀಡುವ ಹಣವನ್ನು ಊರ್ವಶಿ ರಾಡಿಯಾ ಅವರು, ಮದುವೆ ಮತ್ತು ಬಡ ಹೆಣ್ಣು ಮಕ್ಕಳಿಗಾಗಿ ಖರ್ಚು ಮಾಡುತ್ತಾರೆ.

ಹೀಗೆ ರಾಡಿಯಾ,ವೇದಿಕೆಯ ಮೇಲೆ ಹಾಡು ಹಾಡುತ್ತಿದ್ದಾಗ ವೇದಿಕೆಗೆ ಬಂದ ಅವರ ಅಭಿಮಾನಿಯೊಬ್ಬರು ಬಕೆಟ್ ತುಂಬಾ ನೋಟು ತಂದು ಗಾಯಕಿಯ ಮೇಲೆ ಸುರಿಸಿದ್ದು, ವಿಡಿಯೋ ವೈರಲ್ ಆಗಿದೆ.ಈ ವಿಡಿಯೋದಲ್ಲಿ ಗುಜರಾತಿ ಗಾಯಕಿ ಊರ್ವಶಿ ರಾಡಿಯಾ ವೇದಿಕೆಯ ಮೇಲೆ ಕುಳಿತು ಸ್ತೋತ್ರವನ್ನು ಪಠಿಸುತ್ತಿರುವುದನ್ನು ನೋಡಬಹುದು. ಗಾಯಕಿ ಊರ್ವಶಿ, ಭಜನೆಗಳನ್ನು ಹಾಡಲು ಪ್ರಾರಂಭಿಸುತ್ತಾರೆ. ಈ ಸಂದರ್ಭದಲ್ಲಿ ಅವರ ಗಾಯನಕ್ಕೆ ಆಕರ್ಷಿತರಾದ ಅಭಿಮಾನಿಯೊಬ್ಬರು, ಬಕೆಟ್ ತುಂಬಾ ನೋಟುಗಳನ್ನು ಹಿಡಿದು ವೇದಿಕೆಯ ಮೇಲೆ ಬರುತ್ತಾರೆ. ಗಾಯಕಿ ಹಾಡುತ್ತಿದ್ದಂತೆಯೇ ಅವರ ಮೇಲೆ ನೋಟಿನ ಮಳೆಗರೆಯುತ್ತಾರೆ. ಗಾಯಕಿ ಸಂಪೂರ್ಣ ನೋಟಿನಿಂದ ಮುಚ್ಚಲ್ಪಡುವುದನ್ನು ಇಲ್ಲಿ ಕಾಣಬಹುದು.

ಈ ವಿಡಿಯೋವನ್ನು ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದಕ್ಕೂ ಮೊದಲು, ಗಾಯಕಿ ಸ್ವತಃ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತೋರಿದ ಬೆಲೆಕಟ್ಟಲಾಗದ ಪ್ರೀತಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.