Home latest ಸಾಧು ಕೋಕಿಲ ಸಿನಿಮಾದಲ್ಲಿ ಭಿಕ್ಷೆ ಬೇಡಿದಂತೆ ‘ ಅಮ್ಮಾದೇ ಅಕ್ಕಾದೇ ‘ ಸ್ಟೈಲ್ನಲ್ಲಿ ಬೆಂಗಳೂರಿನಲ್ಲಿ ಅಂಗವಿಕಲನಂತೆ...

ಸಾಧು ಕೋಕಿಲ ಸಿನಿಮಾದಲ್ಲಿ ಭಿಕ್ಷೆ ಬೇಡಿದಂತೆ ‘ ಅಮ್ಮಾದೇ ಅಕ್ಕಾದೇ ‘ ಸ್ಟೈಲ್ನಲ್ಲಿ ಬೆಂಗಳೂರಿನಲ್ಲಿ ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ !   

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ನಗರದಲ್ಲಿ ಅಂಗವಿಕಲನಂತೆ ಸುಳ್ಳು ವೇಷಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಆತನಿಗೆ ಎರಡೂ ಕೈಗಳಿದ್ದರೂ, ಒಂದು ಕೈಯನ್ನು ಬಟ್ಟೆಯೊಳಗೆ ಅಡಗಿಸಿಟ್ಟು, ಆ ಕೈಯನ್ನು ಪ್ಯಾಂಟಿನ ಬೆಲ್ಟಿನೊಳಗೆ ತೂರಿಸಿ, ಕೈಯಿಲ್ಲದಂತೆ ಆತ ನಟಿಸುತ್ತಿದ್ದ. ಹಾಗೂ ಮತ್ತೊಂದು ಕೈಯಲ್ಲಿ ಊರುಗೋಲು ಹಿಡಿದು ಭಿಕ್ಷೆ ಬೇಡುತ್ತಿದ್ದ. ಈಗ ವ್ಯಕ್ತಿ ಸಾರ್ವಜನಿಕರೊಬ್ಬರ ಕೈಗೆ ಸಿಕ್ಕಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಆತ ಥೇಟು ಸಾಧು ಕೋಕಿಲ ಥರಾನೇ ರಸ್ತೆಯಲ್ಲಿ ನಿಂತು ‘ ಅಮ್ಮಾ ದೇ… ಅಕ್ಕಾ ದೇ ‘ ಎಂದು ಸಖತ್ ಆಕ್ಟಿಂಗ್ ಮಾಡುತ್ತಿದ್ದ. ತಟ್ಟೆಗೆ ಬೀಳುವ ದುಡ್ಡಿನ ಸದ್ದು ಟಪ ಟಪ ಅಂತ ನಿಲ್ಲದೆ ಮುಂದುವರೆದಿತ್ತು.

ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿ ಈನಕಲಿ ಅಂಗವಿಕಲ ವಾಹನ ಸವಾರರ ಬಳಿ ಭಿಕ್ಷೆ ಬೇಡುತ್ತಿದ್ದ.  ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಯ ಅಸಲಿ ಮುಖವನ್ನು ವಾಹನಸವಾರರೊಬ್ಬರು ಬಯಲಿಗೆಳೆದಿದ್ದಾರೆ. ‘ಅಮ್ಮಾದೇ ‘ ಗೆ ದಾರಿಹೋಕರು ಅಮ್ಮನ್, ಅಕ್ಕನ್ ಸ್ಟೈಲ್ ನಲ್ಲಿ ಬೈದು ಮುಂದೆ ಹೋಗಿದ್ದಾರೆ.