Home latest ಪಿಂಚಣಿಯನ್ನು ಹೆಚ್ಚು ಪಡೆಯಲು ಯಾರು ಅರ್ಹರು ? ಇಪಿಎಫ್‌ ಒ ಮಾರ್ಗಸೂಚಿ ಇಲ್ಲಿದೆ

ಪಿಂಚಣಿಯನ್ನು ಹೆಚ್ಚು ಪಡೆಯಲು ಯಾರು ಅರ್ಹರು ? ಇಪಿಎಫ್‌ ಒ ಮಾರ್ಗಸೂಚಿ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಅಧಿಕ ಪಿಂಚಣಿ ನೀಡುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮುಂದಾಗಿದೆ. ಪಿಂಚಣಿದಾರರು ಹೆಚ್ಚು ಪಿಂಚಣಿ ಪಡೆಯೋದಕ್ಕೆ ಸಂಬಂಧಿಸಿದ ನಿಯಮಗಳು ಹಾಗೂ ನಿಬಂಧನೆಗಳನ್ನು ಇಪಿಎಫ್‌ಒ ಬಿಡುಗಡೆಗೊಳಿಸಿದೆ.

ಪ್ರತಿ ತಿಂಗಳು ನೌಕರರ ಮೂಲ ವೇತನದಿಂದ (Basic Salary) ಶೇ. 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಕಂಪನಿಯ ಶೇ. 12%ರಷ್ಟು ಕೊಡುಗೆಯಲ್ಲಿ 3.67% EPF ಮತ್ತು 8.33% EPS ಅನ್ನು ಒಳಗೊಂಡಿವೆ.ಕಂಪನಿಯು ನೀಡಿದ ಒಟ್ಟು ಕೊಡುಗೆಯನ್ನು ನೌಕರರ ಪಿಂಚಣಿ ಯೋಜನೆಗೆ 8.33% ಮತ್ತು ನೌಕರರ ಭವಿಷ್ಯ ನಿಧಿಗೆ 3.67% ರಂತೆ ವಿತರಣೆ ಮಾಡಲಾಗಿದೆ.

ಹೆಚ್ಚು ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸುವಾಗ ಆಯುಕ್ತರು ಸೂಚಿಸಿದ ವಿಧಾನದಲ್ಲೇ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಇಪಿಎಫ್‌ಒ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಇನ್ನು ಭವಿಷ್ಯ ನಿಧಿಯಿಂದ ಪಿಂಚಣಿ ನಿಧಿಗೆ ಮರು ಹೊಂದಾಣಿಕೆ ಮಾಡಲು ಪಿಂಚಣಿದಾರರು ಅರ್ಜಿಯಲ್ಲಿ ಆತ/ಆಕೆಯ ಒಪ್ಪಿಗೆ ನೀಡುವುದು ಅವಶ್ಯಕವಾಗಿದೆ. ಇನ್ನು ನಿಧಿ ಠೇವಣಿಗೆ ಸಂಬಂಧಿಸಿ ಸಂಬಂಧಪಟ್ಟ ಸುತ್ತೋಲೆಗಳಲ್ಲಿ ಸೂಚಿಸಿರುವ ವಿಧಾನವನ್ನು ಅನುಸರಿಸಲಾಗುತ್ತದೆ.

ಕೆಲವರು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಉದ್ಯೋಗ ಬದಲಾಯಿಸುವಾಗ ಇಲ್ಲವೇ ಬೇರೆ ಕೆಲವು ಕಾರಣದಿಂದ ಎರಡು ಇಪಿಎಫ್ ಖಾತೆಗಳನ್ನು ಹೊಂದಿರುತ್ತಾರೆ. ಈ ರೀತಿ ನಿಮ್ಮ ಬಳಿ ಒಂದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳಿದ್ದರೆ ಅವುಗಳನ್ನು ವಿಲೀನ ಮಾಡುವುದು ಒಳಿತು. ನಿಮ್ಮ ಇಪಿಎಫ್ ಖಾತೆಯಲ್ಲಿ ಒಟ್ಟು ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲನೆ ನಡೆಸಬೇಕು. ಎರಡೆರಡು ಖಾತೆಗಳಿಗೆ ಲಾಗಿನ್ ಆಗುವುದು ತಪ್ಪುತ್ತದೆ. ಈಗ ಎರಡು ಇಪಿಎಫ್ ಖಾತೆಗಳನ್ನು ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲೇ ವಿಲೀನಗೊಳಿಸಬಹುದಾಗಿದೆ. ಖಾತೆಗಳ ವಿಲೀನದಿಂದ (Merge) ಇಪಿಎಫ್ ನಲ್ಲಿ ನೀವು ಒಟ್ಟು ಎಷ್ಟು ಹೂಡಿಕೆ (Invest) ಮಾಡಿದ್ದಿರಿ ಎಂಬುದನ್ನು ಸರಳವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಉದ್ಯೋಗಿ ನೀಡಿದ ಕೊಡುಗೆ ಸಂಪೂರ್ಣವಾಗಿ ಕಾರ್ಮಿಕರ ಭವಿಷ್ಯ ನಿಧಿಗೆ ತಲುಪುತ್ತದೆ. ಈ ಕೊಡುಗೆಯ ಜೊತೆಗೆ, EDLI ಗಾಗಿ ಹೆಚ್ಚುವರಿ 0.5% ಅನ್ನು ಕಂಪನಿಯು ಪಾವತಿಸಬೇಕಾಗುತ್ತದೆ. EDLI ಮತ್ತು EPF ನ ಕೆಲವು ಆಡಳಿತಾತ್ಮಕ ವೆಚ್ಚಗಳನ್ನು ಕಂಪನಿಯು ಕ್ರಮವಾಗಿ 1.1% ಮತ್ತು 0.01% ದರದಲ್ಲಿ ಭರಿಸಲಾಗುತ್ತದೆ. ಅಂದರೆ, ಕಂಪನಿಯು ಈ ಯೋಜನೆಗೆ ಒಟ್ಟು 13.61% ಸಂಬಳವನ್ನು ನೀಡಬೇಕಾಗಿದ್ದು, ಉದ್ಯೋಗಿಗೆ ಕೊಡುಗೆ ದರವನ್ನು ಸಾಮಾನ್ಯವಾಗಿ 12%ಕ್ಕೆ ನಿಗದಿ ಮಾಡಲಾಗುತ್ತದೆ.

ಇನ್ನು ಇಪಿಎಸ್ -95 ತಿದ್ದುಪಡಿಗೂ ಮೊದಲೇ ಸದಸ್ಯರಾಗಿದ್ದವರು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ (ಇಪಿಎಸ್) ಜಂಟಿ ಆಯ್ಕೆ ಹೊಂದಿದ್ದರೆ ಇಪಿಎಫ್‌ಒ ಚಂದಾದಾರಾಗಲು ಅರ್ಹತೆ ಪಡೆಯಲಿದ್ದಾರೆ. ಅರ್ಹ ಸದಸ್ಯರು ಸಂಬಂಧಪಟ್ಟ ಪ್ರಾದೇಶಿಕ ಇಪಿಎಫ್ ಒ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬೇಕಾಗಿದ್ದು ಇದರ ಜೊತೆಗೆ ಅಗತ್ಯ ದಾಖಲೆಗಳನ್ನು ಕೂಡ ಒದಗಿಸಬೇಕಿದೆ.

2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನುಸಾರ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ ಎಂದು ಇಪಿಎಫ್‌ಒ ಹೇಳಿದ್ದು, ಇವರು ತಮ್ಮ ವೇತನದ ಶೇ.8.33ರಷ್ಟನ್ನು ಪಿಂಚಣಿಗೆ ಕೊಡುಗೆಯಾಗಿ ನೀಡಬಹುದು ಎಂದು ಹೇಳಲಾಗಿದೆ. ಇಪಿಎಫ್‌ಒ ಹಿಂದಿನ ವೇತನ ಮಿತಿ 5,000 ರೂ. ಇಲ್ಲವೇ 6,500ರೂ.ಗಿಂತ ಹೆಚ್ಚಿನ ಕೊಡುಗೆ ನೀಡಿರುವ ಇಪಿಎಸ್ ಸದಸ್ಯರು ಹೆಚ್ಚಿನ ಪಿಂಚಣಿ ಪಡೆಯಲು ಅರ್ಹತೆ ಪಡೆಯಲಿದ್ದಾರೆ.