Home Breaking Entertainment News Kannada Samantha political entry: ಪಾಲಿಟಿಕ್ಸ್ ಗೆ ಕಾಲಿಡಲಿದ್ದಾರಾ ಸ್ಯಾಮ್? ಯಾವ ಪಕ್ಷಕ್ಕೆ ಎಂಟ್ರಿ ಗೊತ್ತಾ?

Samantha political entry: ಪಾಲಿಟಿಕ್ಸ್ ಗೆ ಕಾಲಿಡಲಿದ್ದಾರಾ ಸ್ಯಾಮ್? ಯಾವ ಪಕ್ಷಕ್ಕೆ ಎಂಟ್ರಿ ಗೊತ್ತಾ?

Image source: odisha post.com

Hindu neighbor gifts plot of land

Hindu neighbour gifts land to Muslim journalist

Samantha Ruth Prabhu: ಬಹುಭಾಷಾ ನಟಿ ಸಮಂತಾ (Samantha Ruth Prabhu) ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವುದು ಕಾಮನ್ ಆಗಿಬಿಟ್ಟಿದೆ. ತಮ್ಮ ವೈಯಕ್ತಿಕ ಬದುಕಿನ ಏರಿಳಿತದ ನಡುವೆಯೂ ಬಣ್ಣದ ಲೋಕದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಸಮಂತಾ ಅವರು ಸದ್ಯ ʼಖುಷಿʼ ಸಿನಿಮಾ ಹಿಟ್ ಆದ ಖುಷಿಯಲ್ಲಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ದ ಸಮಂತಾ ಕೆರಿಯರ್ ನಲ್ಲಿ ಮತ್ತೊಂದು ಹಿಟ್ ಪಡೆದುಕೊಂಡಿದ್ದು, ಈ ಸಂತಸವನ್ನು ಅಮೆರಿಕದಲ್ಲಿರುವ ಪ್ರೇಕ್ಷಕರೊಂದಿಗೆ ಹಂಚಿಕೊಂಡು ಖುಷಿ ಪಡಿತ್ತಿರುವ ನಟಿಗೆ ಹೊಸ ಅವಕಾಶದ ಬಾಗಿಲು ತೆರೆದುಕೊಂಡಿದೆಯಂತೆ. ಸೆಲೆಬ್ರಿಟಿ ಸಮಂತಾ ಅವರಿಗೆ ಭಾರೀ ಡಿಮ್ಯಾಂಡ್ ಇರುವುದಲ್ಲದೆ ಭಾರೀ ಫ್ಯಾನ್ಸ್ ಇರುವ ಹಿನ್ನೆಲೆ ಈ ಬಾರಿಯ ಚುನಾವಣೆಯಲ್ಲಿ ಆ ಕ್ರೇಜ್ ಹಿಡಿಯಲು ಪಕ್ಷವೊಂದು ಭಾರೀ ಸ್ಕೆಚ್ ಹಾಕಿದ್ದು, ಇದಕ್ಕೆ ಸಂಬಂಧಿಸಿದ ವಿಷಯಗಳು ವೈರಲ್ ಆಗುತ್ತಿವೆ. ಆದರೆ ಈಗ ನಟಿಯ ಜನಪ್ರಿಯತೆಯನ್ನು ಬಳಸಿಕೊಂಡು ಪಕ್ಷವೊಂದಕ್ಕೆದಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ.

ಸಮಂತಾ ಸೇರಲಿರುವ ಪಕ್ಷ ಯಾವುದು ಗೊತ್ತಾ? ಸಮಂತಾ ನಿಜವಾಗಿಯೂ ಆ ಪಕ್ಷಕ್ಕಾಗಿ ಕೆಲಸ ಮಾಡುತ್ತಾರಾ ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತಿದೆ. ಈ ಕುರಿತಾಗಿ ನಟಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ ಎನ್ನಲಾಗಿದೆ. ತೆಲಂಗಾಣ ಜನತೆಯನ್ನು ಹಲವು ಬಾರಿ ಬೆಂಬಲಿಸಿರುವ ಸಮಂತಾ ಅವರನ್ನು ತಮ್ಮ ಪಕ್ಷದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲು ಬಿಆರ್‌ಎಸ್ ನಾಯಕರು ಇಚ್ಚಿಸುತ್ತಿದ್ದಾರೆ. ತಮ್ಮ ಪಕ್ಷದ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿ ತಮ್ಮ ಪಕ್ಷದ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರಂತೆ.

ಒಂದು ವರ್ಷ ಸಿನಿಮಾಗಳಿಂದ ವಿರಾಮ ಘೋಷಿಸಿರುವ ಸ್ಯಾಮ್ ತಮ್ಮ ಖಾಯಿಲೆಗೆ ಚಿಕಿತ್ಸೆ ಪಡೆಯುವ ಜೊತೆಗೆ ಬಿಆರ್ ಎಸ್ ಪಕ್ಷಕ್ಕಾಗಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.ಈ ಬಗ್ಗೆ ಸಮಂತಾ ಕೂಡ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದು, ಈ ವಿಚಾರ ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ, ನಟಿಯ ಮುಂದಿನ ನಡೆಯೇನು ಎಂಬ ಕುತೂಹಲ ಸಹಜವಾಗಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.