Home latest ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರವೇ ಸಿಗಲಿದೆ ಗುಡ್ ನ್ಯೂಸ್ | ನಿವೃತ್ತಿ ವಯಸ್ಸು ಹೆಚ್ಚಾಗುವುದರ ಜೊತೆಗೆ ಸಿಗಲಿದೆ...

ಸರ್ಕಾರಿ ಉದ್ಯೋಗಿಗಳಿಗೆ ಶೀಘ್ರವೇ ಸಿಗಲಿದೆ ಗುಡ್ ನ್ಯೂಸ್ | ನಿವೃತ್ತಿ ವಯಸ್ಸು ಹೆಚ್ಚಾಗುವುದರ ಜೊತೆಗೆ ಸಿಗಲಿದೆ ಸಾರ್ವತ್ರಿಕ ಪಿಂಚಣಿ

Hindu neighbor gifts plot of land

Hindu neighbour gifts land to Muslim journalist

ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ ಸಲಹೆಯೊಂದರಲ್ಲಿ, ಉದ್ಯೋಗಿಗಳ ಕೆಲಸದ ವಯಸ್ಸಿನ ಮಿತಿಯನ್ನು ಹೆಚ್ಚಿಸುವ ಜೊತೆಗೆ ಸಾರ್ವತ್ರಿಕ ಪಿಂಚಣಿ ವ್ಯವಸ್ಥೆ ಆರಂಭಿಸುವಂತೆ ಹೇಳಲಾಗಿದೆ ಎನ್ನಲಾಗಿದೆ.

ಉದ್ಯೋಗಿಗಳಿಗೆ ಶೀಘ್ರದಲ್ಲಿಯೇ ಖುಷಿ ಸುದ್ದಿ ಸಿಗಲಿದ್ದು, ವರದಿಯ ಪ್ರಕಾರ ನೌಕರರಿಗೆ ಪ್ರತಿ ತಿಂಗಳು ಕನಿಷ್ಠ 2000 ರೂಪಾಯಿ ಪಿಂಚಣಿ ನೀಡಬೇಕೆಂದು ಸಲಹೆ ನೀಡಲಾಗಿದೆ.

ಆರ್ಥಿಕ ಸಲಹಾ ಸಮಿತಿಯು ದೇಶದ ಹಿರಿಯ ನಾಗರಿಕರ ಸುರಕ್ಷತೆಗಾಗಿ ಉತ್ತಮ ವ್ಯವಸ್ಥೆಗಳನ್ನು ಶಿಫಾರಸ್ಸು ಮಾಡಿದ್ದು, ಸಾಮಾಜಿಕ ಭದ್ರತಾ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಕೆಲಸದ ವಯಸ್ಸಿನ ಮಿತಿ ಹೆಚ್ಚಳ ಮಾಡಬೇಕೆಂದು ಸಮಿತಿ ಹೇಳಿದೆ. ವರದಿಯು 50 ವರ್ಷಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳ ಕೌಶಲ್ಯ ಅಭಿವೃದ್ಧಿಯ ಬಗ್ಗೆಯೂ ಹೇಳಿದೆ.

ಗಮನಿಸಬೇಕಾದ ಸಂಗತಿಯೆಂದರೆ, ವಿಶ್ವ ಜನಸಂಖ್ಯಾ ಪ್ರಾಸ್ಪೆಕ್ಟಸ್ 2019 ರ ಪ್ರಕಾರ, 2050 ರ ವೇಳೆಗೆ ಭಾರತದಲ್ಲಿ ಸುಮಾರು 32 ಕೋಟಿ ಹಿರಿಯ ನಾಗರಿಕರು ಇರಲಿದ್ದಾರೆ. ಅಂದರೆ, ದೇಶದ ಜನಸಂಖ್ಯೆಯ ಸುಮಾರು 19.5 ರಷ್ಟು ಜನರು ನಿವೃತ್ತರ ವರ್ಗಕ್ಕೆ ಸೇರಲಿದ್ದಾರೆ. 2019 ರಲ್ಲಿ, ಭಾರತದ ಜನಸಂಖ್ಯೆಯ ಸುಮಾರು ಶೇಕಡಾ 10ರಷ್ಟು ಜನರು ನಿವೃತ್ತ ವರ್ಗದಲ್ಲಿದ್ದರು.