Home International ಸತತ ಹೊಟ್ಟೆನೋವೆಂದು ಒದ್ದಾಡಿದ ಮಹಿಳೆ ಆಸ್ಪತ್ರೆಗೆ ದಾಖಲು | ಪರೀಕ್ಷೆ ಮಾಡಿದ ಡಾಕ್ಟರ್ ಗೇ ಶಾಕ್...

ಸತತ ಹೊಟ್ಟೆನೋವೆಂದು ಒದ್ದಾಡಿದ ಮಹಿಳೆ ಆಸ್ಪತ್ರೆಗೆ ದಾಖಲು | ಪರೀಕ್ಷೆ ಮಾಡಿದ ಡಾಕ್ಟರ್ ಗೇ ಶಾಕ್ ಕೊಟ್ಟಳು| ಅಷ್ಟಕ್ಕೂ ಹೊಟ್ಟೆಯೊಳಗೇನಿತ್ತು?

Hindu neighbor gifts plot of land

Hindu neighbour gifts land to Muslim journalist

ಜನ ಹೊಟ್ಟೆಗೆ ಅನ್ನ ತಿಂದರೆ ಚಂದ. ಆದರೆ, ಕೆಲವರು, ಏನೇನೋ ತಿಂದು ಸಂಕಷ್ಟಕ್ಕೆ ಒಳಗಾಗುವುದನ್ನು ನಾವು ನೋಡ್ತೀವಿ. ಅಂಥದ್ದೇ ಒಂದು ಆಶ್ಚರ್ಯಕರ ಘಟನೆಯೊಂದು ನಡೆದಿದೆ. ಐರ್ಲೆಂಡ್ ನ ಮಹಿಳೆಯೊಬ್ಬಳು ಕೂಡಾ ಈ ರೀತಿಯ ಎಡವಟ್ಟು ಮಾಡಿ, ಹೊಟ್ಟೆ ನೋವೆಂದು ಒದ್ದಾಡಿ, ಕೊನೆಗೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾದಾಗ, ಗಾಬರಿಗೊಂಡ ಘಟನೆ ಬೆಳಕಿಗೆ ಬಂದಿದೆ.

ಹೌದು, ಈ ಐರ್ಲೆಂಡ್ ನ ಮಹಿಳೆಯೊಬ್ಬಳ ಹೊಟ್ಟೆಯಿಂದ ಬರೋಬ್ಬರಿ 55 ಬ್ಯಾಟರಿ ಸೆಲ್‌ಗಳನ್ನು ವೈದ್ಯರು ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ನಿಜಕ್ಕೂ ಈ ಬ್ಯಾಟರಿಗಳೆಲ್ಲ ಹೊಟ್ಟೆಯೊಳಗೆ ಹೋಗಿದ್ದೇ ವಿಚಿತ್ರ.

66 ವರ್ಷದ ಐರಿಷ್ ಮಹಿಳೆಯ ಹೊಟ್ಟೆ ಮತ್ತು ಕರುಳಿನಲ್ಲಿ ಈ ಬ್ಯಾಟರಿ ಸಿಕ್ಕಿಕೊಂಡು ನೋವು ಕಾಣಿಸಿಕೊಂಡಾಗ, ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ನೈಸರ್ಗಿಕವಾಗಿ ಅವುಗಳನ್ನು ಹೊರತರಲು ವೈದ್ಯರು ಚಿಕಿತ್ಸೆ ನೀಡಲು ಪ್ರಯತ್ನ ಪಟ್ಟಿದ್ದರು.

ಆದರೆ, ವಾರ ಕಳೆದರೂ ಮಹಿಳೆ ತನ್ನ ಹೊಟ್ಟೆಯಿಂದ ನೈಸರ್ಗಿಕ ಕ್ರಿಯೆಯಲ್ಲಿ 5 ಬ್ಯಾಟರಿ ಸೆಲ್‌ಗಳನ್ನು ಮಾತ್ರ ಹೊರಹಾಕಿದ್ದಳು. ಬಳಿಕ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಬ್ಯಾಟರಿ ಸೆಲ್‌ಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿದೆ. ಇದರಿಂದ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಮುಂದಾಗಿದ್ದಾರೆ.

ಆಕೆಯ ಹೊಟ್ಟೆಗೆ ಸೇರಿದ ಬ್ಯಾಟರಿಗಳ ತೂಕದಿಂದಾಗಿ ಹೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಊದಿಕೊಂಡಿತ್ತು. ಇದರಿಂದ ಶಸ್ತ್ರಚಿಕಿತ್ಸಕರು ಆಕೆಯ ಹೊಟ್ಟೆಯ ಮೇಲ್ಭಾಗದಲ್ಲಿ ಕತ್ತರಿ ಒಳಗಿದ್ದ 46 ಬ್ಯಾಟರಿ ಸೆಲ್‌ಗಳನ್ನು ಹೊರ ತೆಗೆದಿದ್ದಾರೆ. ಒಟ್ಟಾರೆ ಆ ಮಹಿಳೆಯ ದೇಹದಿಂದ 55 ಬ್ಯಾಟರಿ ಸೆಲ್‌ಗಳನ್ನು ತೆಗೆಯಲಾಗಿದೆ.

ಅಷ್ಟಕ್ಕೂ ನಮಗೆ ಕಾಡುವ ಕಟ್ಟ ಕಡೆಯ ಪ್ರಶ್ನೆ ಈ ಬ್ಯಾಟರಿ ಹೊಟ್ಟೆಯೊಳಗೆ ಹೋಗಿದ್ದಾದರೂ ಹೇಗೆ ? ಯಾಕೆ? ಈ ಬ್ಯಾಟರಿ ತಿನ್ನುವ ಕೆಟ್ಟ ಹವ್ಯಾಸ ಇದ್ದರೂ ಗಂಟಲಲ್ಲಿ ಇಳಿದಿದ್ದಾದರೂ ಹೇಗೆ?