Home Karnataka State Politics Updates “ನೀನು ಹಿಂದೂ ಆಗಿರುವವರೆಗೂ ನೀನು ವೇಶ್ಯೆಯ ಮಗ……” ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

“ನೀನು ಹಿಂದೂ ಆಗಿರುವವರೆಗೂ ನೀನು ವೇಶ್ಯೆಯ ಮಗ……” ವಿವಾದಾತ್ಮಕ ಹೇಳಿಕೆ ನೀಡಿದ ಡಿಎಂಕೆ ನಾಯಕ

Hindu neighbor gifts plot of land

Hindu neighbour gifts land to Muslim journalist

ಡಿಎಂಕೆ ಪ್ರಧಾನ ಕಾರ್ಯದರ್ಶಿ ಎ.ರಾಜಾ ಅವರು ಹಿಂದೂಗಳ ಬಗ್ಗೆ ಮಾತನಾಡಿದ್ದು, ಈ ಮೂಲಕ ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಹೇಳಲಾಗಿದೆ. ಅವರು ಹೇಳಿರುವ ಪ್ರಕಾರ, “ನೀನು ಹಿಂದೂ ಆಗಿರುವವರೆಗೆ ನೀನು ವೇಶ್ಯೆಯ ಮಗ” ಎನ್ನುವ ಹೀನ ಮಾತೊಂದನ್ನು ಡಿಎಂಕೆ ಎ ರಾಜಾ ಹೇಳಿದ್ದಾರೆ.

” ನೀನು ಹಿಂದೂ ಆಗಿರುವವರೆಗೂ ನೀನು ಶೂದ್ರ. ಶೂದ್ರನಾಗಿರುವವರೆಗೂ ನೀನು ವೇಶ್ಯೆಯ ಮಗ. ನೀನು ಹಿಂದೂ ಆಗಿರುವವರೆಗೂ ದಲಿತ ಮತ್ತು ನೀನು ಹಿಂದೂ ಆಗಿರುವವರೆಗೆ ಅಸ್ಪೃಶ್ಯ ” ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದು, ನಿಜಕ್ಕೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.

“ನಿಮ್ಮಲ್ಲಿ ಎಷ್ಟು ಮಂದಿ ವೇಶ್ಯೆಯರ ಮಕ್ಕಳಾಗಿ ಉಳಿಯಲು ಬಯಸುತ್ತೀರಿ? ನಿಮ್ಮಲ್ಲಿ ಎಷ್ಟು ಮಂದಿ ಅಸ್ಪೃಶ್ಯರಾಗಿ ಉಳಿಯಲು ಬಯಸುತ್ತೀರಿ? ಈ ಪ್ರಶ್ನೆಗಳ ಬಗ್ಗೆ ನಾವು ಧ್ವನಿ ಎತ್ತಿದರೆ ಮಾತ್ರ ಅದು ಸನಾತನ ಧರ್ಮ ಒಡೆಯುವಲ್ಲಿ ಪ್ರಮುಖ ವಿಷಯವಾಗುತ್ತದೆ ಎಂದಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ನಾಮಕ್ಕಲ್‍ನಲ್ಲಿ ಕಳೆದ ವಾರ
ನಡೆದ ಕಾರ್ಯಕ್ರಮವೊಂದರಲ್ಲಿ ಎ ರಾಜಾ ಅವರು, ಹಿಂದೂಗಳ ನಂಬಿಕೆ ಹಾಗೂ ಜಾತಿ ಪದ್ಧತಿಯ ವಿಚಾರವಾಗಿ ಮಾತನಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದ್ದಾರೆ. ಈ ವೇಳೆ ವರ್ಣ ವ್ಯವಸ್ಥೆಯಲ್ಲಿ ಅತ್ಯಂತ ಕೆಳವರ್ಗದ ಶೂದ್ರರು, ವೇಶ್ಯೆಯರ ಮಕ್ಕಳು, ಹಿಂದೂ ಧರ್ಮದ ಆಚರಣೆಗಳನ್ನು ಮಾಡುವುದರಿಂದ ಅವರು ಹಿಂದೂಗಳಾಗಿಯೇ ಉಳಿಯುತ್ತಾರೆ ಎಂದಿದ್ದರು.

ನೀವು ಕ್ರಿಶ್ಚಿಯನ್, ಮುಸ್ಲಿಂ ಅಥವಾ ಪರ್ಷಿಯನ್ ಆಗಿಲ್ಲದಿದ್ದರೆ, ಹಿಂದೂ ಆಗಿರುತ್ತೀರಾ ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಂತಹ ಮಾತನ್ನು ನೀವು ಬೇರೆ ಯಾವ ದೇಶದಲ್ಲಿ ನೋಡಿದ್ದೀರಾ ಎಂದು ಕಟುವಾಗಿ ಟೀಕಿಸಿದ್ದಾರೆ.

ಈ ಕುರಿತಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಟ್ವೀಟ್ ಮಾಡಿದ್ದು, ಇವರು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಹೀಗಿರುವುದಕ್ಕೆ ಕ್ಷಮಿಸಿ. ಸಂಸದರು ಇತರರನ್ನು ಓಲೈಸುವ ಉದ್ದೇಶದಿಂದ ಮತ್ತೊಂದು ಸಮುದಾಯದ ದ್ವೇಷವನ್ನು ಬಿತ್ತರಿಸುತ್ತಿದ್ದಾರೆ. ತಮಿಳುನಾಡು ತಮ್ಮದೇ ಎಂದು ಭಾವಿಸುವ ಈ ರಾಜಕೀಯ ನಾಯಕರ ಮನಸ್ಥಿತಿ ಅತ್ಯಂತ ದುರದೃಷ್ಟಕರ ಎಂದು ಅಣ್ಣಾಮಲೈ ಅವರು ಕಿಡಿಕಾರಿದ್ದಾರೆ.