Home latest Honda : ಹೋಂಡಾ ನೀಡಿದೆ ಕಾರು ಪ್ರಿಯರಿಗೆ ಬಿಗ್‌ ಗುಡ್‌ ನ್ಯೂಸ್‌!

Honda : ಹೋಂಡಾ ನೀಡಿದೆ ಕಾರು ಪ್ರಿಯರಿಗೆ ಬಿಗ್‌ ಗುಡ್‌ ನ್ಯೂಸ್‌!

honda

Hindu neighbor gifts plot of land

Hindu neighbour gifts land to Muslim journalist

Honda : ‘ಹೋಂಡಾ’ ಪ್ರಿಯರೇ ಇಲ್ಲಿದೆ ಹೋಂಡಾ ದಿಂದ ಬಿಗ್ ಗಿಫ್ಟ್. ಜಪಾನ್ ದೇಶದಲ್ಲಿ ಪ್ರಮುಖವಾಗಿ ಹೆಸರು ಮಾಡಿರುವ ಹೋಂಡಾ (Honda) ಕಂಪನಿ ಇದೀಗ ಒಂದು ದೊಡ್ಡ ಮಟ್ಟದ ಅನೌನ್ಸ್ ಮೆಂಟ್ ಅನ್ನು ನೀಡಿದೆ. ಭಾರತದಲ್ಲಿ ಮಾರಟವಾಗುವ ಅಮೇಜ್, ಸಿಟಿ, ಮತ್ತು WR-V ಕಾರಗಳಿಗೆ ಇದೇ ಮಾರ್ಚ್ ತಿಂಗಳಲ್ಲಿ ಒಂದೊಳ್ಳೆ ಮಟ್ಟದ ರಿಯಾಯಿತಿಯನ್ನು ಅನೌನ್ಸ್ ಮೇಂಟ್ ಮಾಡಿದ್ದಾರೆ. ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.

ಹೋಂಡಾ ಅಮೇಜ್ ಕಾರುಗಳ ಕೈಗೆಟುಕುವ ಬೆಲೆಯ ಕಾರುಗಳಗಿವೆ. ಈ ಕಾರುಗಳ ಎಕ್ಸ್ ಶೋ ರೂಂ ಬೆಲೆ ರೂ.6.89 ಲಕ್ಷದಿಂದ ರೂ.9.48 ಲಕ್ಷ ದವರೆಗೆ ಸಿಗಲಿವೆ. ಇದೊಂದು ಉತ್ತಮ ರಿಯಾಯಿತಿ ಪ್ರಯೋಜನವನ್ನು ಕೂಡ ಹೊಂದಿದೆ. ಇದರಲ್ಲಿ ಒಟ್ಟು ರೂ.26,000 ಡಿಸ್ಕೌಂಟ್ ಇವೆ. ಇದರಲ್ಲಿ ರೂ.10,000 ರಿಯಾಯಿತಿಗಾಗಿ, ರೂ.10,000 ಎಕ್ಸ್ಚೇಂಜ್ ಬೋನಸ್‌ಗಾಗಿ ಹಾಗೂ ಕಾರ್ಪೊರೇಟ್ ರಿಯಾಯಿತಿಗಾಗಿ ರೂ.6,000 ದೊರೆಯುತ್ತದೆ.

ಈ ಹೋಂಡಾ ಅಮೇಜ್ ಕಾರು ಪೆಟ್ರೋಲ್ ಗಾಡಿಯಾಗಿದೆ.  ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 90 PS ಗರಿಷ್ಠ ಪವರ್ ಹಾಗೂ 110 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಮತ್ತು ಈ ಗಾಡಿಯು 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅಯ್ಕೆಯಾನ್ನು ಹೊಂದಿದೆ. ಇದು 18.3-18.6 kmpl ಮೈಲೇಜ್ ನೀಡುತ್ತದೆ.

ಈ ಕಾರಿನಲ್ಲಿ ಒಟ್ಟಾರೆ ಐದು ಬಣ್ಣಗಳಿವೆ ಅವು ಸೆಡಾನ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಪರ್ಲ್ ಗಳಾಗಿವೆ. ಆಂಡ್ರಾಯ್ಡ್ ಆಟೋ, 7 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್, ಆಪಲ್ ಕಾರ್ ಪ್ಲೇ ಹಾಗೂ ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್ಸ್ ಹಾಗೂ ರೇರ್ ವ್ಯೂ ಕ್ಯಾಮೆರಾ ವನ್ನು ಹೊಂದಿದೆ.

ದೇಶದ ಮುಂಬರಲಿರುವ ನಿಯಮಗಳಿಗಾಗಿ ಹೋಂಡಾ ಕಂಪನಿ WR- V ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಹಾಗಾಗಿ ಹಳೆಯ ಸ್ಟಾಕ್ ಇರುವ ಗಾಡಿಗಳಿಗೆ ರೂ. 70000 ವರಗೆ ರಿಯಾಯತಿ ನೀಡುತ್ತಿವೆ. ಇದು ಕೇವಲ 2022 ರ ಮಾದರಿಯ ಗಾಡಿಗಳಿಗೆ ಮಾತ್ರ.

ಹೋಂಡಾದ WR-V ಕಾರಿನ ಬಗ್ಗೆ ಹೇಳುವುದಾದರೆ ಇದು ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೊಂಟೆಡ್ ಕಂಟ್ರೋಲ್ ಹಾಗೂ 7 ಇಂಚಿನ ಟಚ್ ಸ್ಕ್ರೀನ್ ಇನ್ಸ್ಫೋಟೈನ್ ಗಳನ್ನು ಹೊಂದಿದೆ. ಹಾಗೂ ಸುರಕ್ಷೆತೆ ದೃಷ್ಟಿಯಿಂದ ಡ್ಯುಯಲ್ ಏರ್ ಬ್ಯಾಗ್ ಹೊಂದಿದೆ. ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಅನ್ನು ಕೂಡ ಹೊಂದಿದೆ.

2022ರ ಮಾದರಿಗಳಿಗೆ ಮಾತ್ರ ರಿಯಾಯಿತಿ ಅನ್ವಯವಾಗಲಿದೆ 5ನೇ ಜನರೇಷನ್ ನ ಹೋಂಡಾ ಸಿಟಿ ಫೇಸ್‌ಲಿಫ್ಟ್ ನಲ್ಲಿ ರೂ.1.3 ಲಕ್ಷಗಳ ರಿಯಾಯಿತಿಯನ್ನು ಹೊಂದಿದೆ. ಹೋಂಡಾ, ಜಾಝ್‌ ಕಾರಿನ ಉತ್ಪಾದನೆಯನ್ನು ನಿಲ್ಲಿಸಿದ್ದಾರೆ. ಹಾಗಾಗಿ ಹಳೆಯ ಸ್ಟಾಕ್ ಕಾರುಗಳಿಗೆ ರಿಯಾಯಿತಿ ನೀಡಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಕುರಿತು ಸ್ಥಳೀಯ ಶೋರೂಂಗೆ ತೆರಳಿ, ಅಲ್ಲಿ ಈ ರಿಯಾಯಿತಿ ಬಗ್ಗೆ ವಿಚಾರಿಸಬಹುದು.