Home latest Dharmasthala Darshan Timings : ಭಕ್ತಾದಿಗಳ ಗಮನಕ್ಕೆ! ಮಂಜುನಾಥ ಸ್ವಾಮಿಯ ದರ್ಶನ ಸಮಯ...

Dharmasthala Darshan Timings : ಭಕ್ತಾದಿಗಳ ಗಮನಕ್ಕೆ! ಮಂಜುನಾಥ ಸ್ವಾಮಿಯ ದರ್ಶನ ಸಮಯ ಬದಲಾವಣೆ!

Dharmasthala Darshan Timings

Hindu neighbor gifts plot of land

Hindu neighbour gifts land to Muslim journalist

Dharmasthala Darshan Timings : ಕರ್ನಾಟಕದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಧಾನ ಧರ್ಮದಿಂದ ಪ್ರಖ್ಯಾತ ಪಡೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ದೇವರ ದರ್ಶನದ ಬಗ್ಗೆ ಮಹತ್ವ ಮಾಹಿತಿ ತಿಳಿಸಲಾಗಿದೆ. ಸದ್ಯ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ (Dharmasthala Darshan Timings) ಬೆಳಗಿನ ದರ್ಶನದ ಸಮಯ ಬದಲಾವಣೆ ಮಾಡಲಾಗಿದ್ದು, ಈ ಕುರಿತು ಧರ್ಮಸ್ಥಳ ದೇಗುಲದ ಕಡೆಯಿಂದ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗಿದೆ.

ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ಧರ್ಮಸ್ಥಳ ದೇಗುಲದ ಆಡಳಿತ ಮಂಡಳಿ ತೆರೆ ಎಳೆದಿದೆ.

ಮುಖ್ಯವಾಗಿ ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಹೀಗಾಗಿ ಇಂದಿನಿಂದ (ಏಪ್ರಿಲ್ 17) ಏಪ್ರಿಲ್ 22ರವರೆಗೆ ಬೆಳಗ್ಗಿನ ದರ್ಶನ 8:30ರಿಂದ ಆರಂಭವಾಗಲಿದೆ. ಭಕ್ತರು ಏಪ್ರಿಲ್ 22 ರವರೆಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುವ ಮುನ್ನ ಈ ಮಾಹಿತಿಯನ್ನು ಅನುಸರಿಸಿ ದರ್ಶನದ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ.

ಆದರೆ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಹಾಗೂ ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಕಾಲಾವಧಿ ವಿಷು ಜಾತ್ರೆಯ ಪ್ರಯುಕ್ತ ಧರ್ಮಸ್ಥಳ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 17-04-2023ರ ಸೋಮವಾರದಿಂದ 22/04/2023ರ ಶನಿವಾರದವರೆಗೆ ಬೆಳಗ್ಗೆ 8:30 ಗಂಟೆಯವರೆಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಪೋಸ್ಟ್ ಒಂದು ವೈರಲ್ ಆಗಿತ್ತು.

ಧರ್ಮಸ್ಥಳ ದೇಗುಲವು ಅಧಿಕೃತವಾಗಿ ದರ್ಶನದ ಸಮಯ ಬದಲಾವಣೆ ಕುರಿತು ಮಾಹಿತಿ ನೀಡುವ ಮುನ್ನವೇ ವೈರಲ್ ಆಗಿದ್ದ ಫೋಟೋದಿಂದ ಭಕ್ತರಲ್ಲಿ ಗೊಂದಲ ಉಂಟಾಗಿತ್ತು.

ಆದರೆ ಇದೀಗ ಧರ್ಮಸ್ಥಳ ದೇಗುಲದ ಕಡೆಯಿಂದ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಭಕ್ತರಲ್ಲಿ ಗೊಂದಲ ನಿವಾರಣೆಯಾಗಿದೆ.