Home Crime Delhi: 14ರ ಹುಡುಗನಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಸ್ನೇಹಿತರಿಂದಲೇ ಹಲ್ಲೆ

Delhi: 14ರ ಹುಡುಗನಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುವಂತೆ ಸ್ನೇಹಿತರಿಂದಲೇ ಹಲ್ಲೆ

Delhi

Hindu neighbor gifts plot of land

Hindu neighbour gifts land to Muslim journalist

Delhi: 14ರ ಬಾಲಕನಿಗೆ ಅವನ ಸ್ನೇಹಿತರೇ ಚಾಕು ಹಿಡಿದು ಬೆದರಿಸಿ ಅವನ ಬೂಟುಗಳನ್ನು ನೆಕ್ಕುವಂತೆ ಮಾಡಿ ನಂತರ ಅಸ್ವಾಭಾವಿಕ ಲೈಂಗಿಕಕ ಮಾಡಲು ಒತ್ತಾಯಿಸಿ ಹಿಸಂಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: Viral News: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹೀಗೊಂದು ರೀತಿ ಚುನಾವಣೆ ಪ್ರಚಾರ;

ಹೌದು, ದಕ್ಷಿಣ ದೆಹಲಿಯ(Delhi) ಹೌಜ್ ಖಾಸ್ ಪ್ರದೇಶದಲ್ಲಿ ಅಪ್ರಾಪ್ತ ಹುಡುಗರಿಂದ ಅಘಾತಕಾರಿ ಘಟನೆಯೊಂದು ನಡೆದಿದ್ದು, 14 ವರ್ಷದ ಬಾಲಕನಿಗೆ ‘ಮಅಸ್ವಾಭಾವಿಕ ಲೈಂಗಿಕತೆ(Unnatural sex) ನಡೆಸುವಂತೆ ಒತ್ತಾಯಿಸಿ, ಬೂಟು ನೆಕ್ಕುವಂತೆ ಹಿಂಹಿಸಿ, ಚಾಕು ತೋರಿಸಿ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲದೆ ಪಾಪಿಗಳು ಈ ಎಲ್ಲಾ ಘಟನೆಗಳನ್ನು ರೆಕಾರ್ಡ್ ಮಾಡಿ ಅದರ ವೀಡಿಯೊವನ್ನು ಇನ್‌ಸ್ಟಾಗ್ರಾಮ್ ಗೂ ಅಪ್ಲೋಡ್ ಮಾಡಿದ್ದಾರೆ.

ಅಂದಹಾಗೆ ಮೂವರು ಹುಡುಗರು ಸೇರಿಕೊಂಡು ಕಮೀ ಕೃತ್ಯ ಎಸಗಿದ್ದು, ಅದರಲ್ಲಿ ಒಬ್ಬನು ಭಾನುವಾರ ರಾತ್ರಿ ವಿಡಿಯೋವನ್ನು ಬಾಲಕನ ತಾಯಿಗೆ ಕಳುಹಿಸಿದ್ದು, ನಂತರ ಆಕೆ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.

ವಿಡಿಯೋ ವೈರಲ್!!

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ(Instagram) ಪೋಸ್ಟ್ ಮಾಡಲಾದ ವೀಡಿಯೊದಲ್ಲಿ, ಹುಡುಗನಿಗೆ ಚಾಕು ಹಿಡಿದು ಬೆದರಿಸಿದ ಅವನ ಸ್ನೇಹಿತರು ಮೊದಲು ಅವರ ಬೂಟುಗಳನ್ನು ನೆಕ್ಕುವಂತೆ ಮಾಡಿದರು ಮತ್ತು ನಂತರ ಲೈಂಗಿಕ ಕ್ರಿಯೆಗೆ ಒತ್ತಾಯಿಸಿರುವುದನ್ನು ಕಾಣಬಹುದು.

ಪೋಲೀಸರು ಸಂತ್ರಸ್ತ ಬಾಲಕನ ಮನೆಗೆ ಬಂದಾಗ ಆತನ ತಾಯಿ ಎಲ್ಲಾ ವಿಚಾರ ತಿಳಿಸಿದ್ದು, ಬಳಿಕ ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೌನ್ಸೆಲಿಂಗ್ ನಡೆಸಲಾಯಿತು. ಸದ್ಯ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಏನಾಯಿತು?

ಶನಿವಾರ ಸಂಜೆ 6.30 ರ ಸುಮಾರಿಗೆ ಹೌಜ್ ಖಾಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ 14 ವರ್ಷೋ ಬಾಲಕ ಆಟವಾಡುತ್ತಾ ಮನೆಗೆ ಹೋಗುತ್ತಿದ್ದಾಗ 12 ರಿಂದ 14 ವರ್ಷ ವಯಸ್ಸಿನ ಅವನ ಮೂವರು ಸ್ನೇಹಿತರು ಅವನನ್ನು ತಮ್ಮೊಂದಿಗೆ ಯಾರೂ ಇಲ್ಲದ ಸ್ಥಳಕ್ಕೆ ಬರುವಂತೆ ಒತ್ತಾಯಿಸಿದ್ದಾರೆ. ಬಳಿಕ ಹಿಂಸೆ ಮಾಡಿ ಆರೋಪಿಗಳಲ್ಲಿ ಒಬ್ಬನು ತರಕಾರಿ ಹೆಚ್ಚುವ ಚಾಕು ತೋರಿಸಿ ತನ್ನ ಖಾಸಗಿ ಅಂಗವನ್ನು ಬಾಲಕನ ಬಾಯಿಗೆ ಹಾಕಿದನು. ಮೂವರು ಆ ಕೃತ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದಾರೆ.