Home latest Mangaluru: ತಾಯಿಯನ್ನು ಕೊಂದ ಪಾಪಿ ಮಗ! ಕಾರಣ ಬಹಿರಂಗ!!!

Mangaluru: ತಾಯಿಯನ್ನು ಕೊಂದ ಪಾಪಿ ಮಗ! ಕಾರಣ ಬಹಿರಂಗ!!!

Hindu neighbor gifts plot of land

Hindu neighbour gifts land to Muslim journalist

Dakshina Kannada Crime News; ಹೆತ್ತ ತಾಯಿಯನ್ನೇ ಅತ್ಯಾಚಾರ ಮಾಡಲು ಮಗನೇ ಮುಂದಾಗಿದ್ದು, ವಿರೋಧಿಸಿದ್ದಕ್ಕೆ ಕೊಲೆ ಮಾಡಿದಂತಹ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಇಡೀ ಮನುಷ್ಯ ಸಮಾಜವೇ ತಲೆತಗ್ಗಿಸುವಂತಹ ಕೃತ್ಯ ಇದು. ಅತ್ಯಾಚಾರ ವಿರೋಧಿಸಿದ್ದಕ್ಕೆ ತಾಯಿಯನ್ನೇ ಪಾಪಿ ಪುತ್ರ ಕೊಂದು ಹಾಕಿದ್ದಾನೆ.

ತಾಯಿಯನ್ನೇ ಕೊಲೆ ಮಾಡಿದ ಘಟನೆಯೊಂದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮುಲ್ಕಿ ತಾಲೂಕಿನ ಕೊಂಡೇಲಾ ಗ್ರಾಮದಲ್ಲಿ ನಡೆದಿತ್ತು. ತಾಯಿಯನ್ನೇ ಅತ್ಯಾಚಾರ ಮಾಡಲು ಯತ್ನಿಸಿದ ಮಗನೊಬ್ಬ, ಅದನ್ನು ವಿರೋಧಿಸಿದ ತಾಯಿಯನ್ನೇ ಹತ್ಯೆಗೈದ ಹೇಯ ಘಟನೆ ನಿಜಕ್ಕೂ ಭೀಭತ್ಸ್ಯ.

ತಾಯಿಯನ್ನು ಕೊಂದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದ ಆರೋಪಿ ಮಗನನ್ನು ಬಜಪೆ ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿತ್ತು. ಇದೀಗ ಆರೋಪಿ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.

ತಾಯಿ ರತ್ನ ಶೆಟ್ಟಿ (62) ಮೃತ ಮಹಿಳೆ. ಅ.26 ರ ರಾತ್ರಿ ಈ ಘಟನೆ ನಡೆದಿದ್ದು, ಮೂರು ದಿನಗಳ ನಂತರ ಬೆಳಕಿಗೆ ಬಂದಿತ್ತು. ಇನ್ನು ಪರಾರಿಯಾಗಿದ್ದ ಮಗ ರವಿರಾಜ್‌ ಶೆಟ್ಟಿಯನ್ನು, ನಿನ್ನೆ (ಅ.30) ರ ಸಂಜೆ ಆರೋಪಿಯನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರಕ್ಕೆ ಒಪ್ಪದ ಕಾರಣಕ್ಕೆ ಕೊಂದಿರುವುದಾಗಿ ಮಗ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.