Home latest Crime News: ಕುಡಿದು ಬಂದು ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ತಂದೆ; ಪ್ರಶ್ನಿಸಿದ ಹೆಂಡತಿಯ...

Crime News: ಕುಡಿದು ಬಂದು ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ತಂದೆ; ಪ್ರಶ್ನಿಸಿದ ಹೆಂಡತಿಯ ತಲೆ ಗೋಡೆಗೆ ಬಡಿದ!!!

Hindu neighbor gifts plot of land

Hindu neighbour gifts land to Muslim journalist

ಮಕ್ಕಳ ಮೇಲೆ ತಂದೆ ತಾಯಿಯಂದಿರಿಗೆ ಎಲ್ಲಿಲ್ಲದ ಪ್ರೀತಿ. ಆದರೆ ಇದೇ ಪ್ರೀತಿ ಬೇರೆ ರೂಪ ಪಡೆದುಕೊಂಡರೆ ಏನಾಗುತ್ತೆ? ಅಂತಹ ಒಂದು ವಿಕೃತ ಘಟನೆ ನಡೆದಿದ್ದು, ಇಲ್ಲಿ ಹೆಂಡತಿಯಾದವಳು ಮೃತ ಹೊಂದಿದ್ದಾಳೆ.

ಆದರೆ ಇಲ್ಲೊಬ್ಬ ದುರುಳ ತಂದೆ ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ಹೀನಾಯ ಘಟನೆಯೊಂದು ನಡೆದಿದೆ.

ಇಷ್ಟು ಮಾತ್ರವಲ್ಲದೆ ಈ ಬಗ್ಗೆ ಪ್ರಶ್ನೆ ಮಾಡಿದ ಪತ್ನಿಯ ಮೇಲೆ ಗಂಡನಾದವನು ಅಮಾನುಷವಾಗಿ ಹಲ್ಲೆ ಮಾಡಿದ್ದು, ಗಾಯಗೊಂಡ ಆಕೆ ಮೃತಪಟ್ಟಿರುವ ಘಟನೆ ನಡೆದಿದೆ.

Barefoot Workout: ಪ್ರತೀ ದಿನವೂ ಬೆತ್ತಲಾಗಿ ಜೀಮ್ ಮಾಡುತ್ತಾರೆ ಈ ದಂಪತಿ – ಸುಖ ದಾಂಪತ್ಯಕ್ಕೆ ಇದೇ ರೀಸನ್…

ಮಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿರುವುದು ಪುಣೆಯ ಲೋಣಿಕಂಡ್‌ನ ಅವ್ಹಲವಾಡಿಯಲ್ಲಿ ನಡೆದಿದೆ.

41 ವರ್ಷದ ಆರೋಪಿ ಪತಿ ಮಹಾಶಯನೊಬ್ಬನನ್ನು ಪ್ರಶ್ನಿಸಿದ 38 ವರ್ಷದ ಹೆಂಡತಿ ತಲೆಯನ್ನು ಗೋಡೆಗೆ ಹೊಡೆದಿದ್ದಾನೆ.

ಅಷ್ಟು ಮಾತ್ರವಲ್ಲದೇ ಆಕೆಗೆ ದೊಣ್ಣೆಯಿಂದ ಥಳಿಸಿದ್ದು, ನಂತರ ಆಕೆಯ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ.

ಆಕೆ ಸತ್ತಿದ್ದಾಳೆ ಎಂದು ತಿಳಿದು ಆತ ಥಳಿಸುವುದನ್ನು ನಿಲ್ಲಿಸಿದ್ದಾನೆ ಎಂದು ಪೊಲೀಸ್‌ ಉಪ ಆಯುಕ್ತ (ವಲಯ IV) ಶಶಿಕಾಂತ್‌ ಬೊರಾಟೆ ತಿಳಿಸಿದ್ದಾರೆ.

ತಾಯಿಗೆ ಹೊಡೆಯುವುದನ್ನು ನಿಲ್ಲಿಸಲು ವ್ಯಕ್ತಿಯ ಮಕ್ಕಳಾದ ಓರ್ವ ಮಗಳು, ಓರ್ವ ಮಗ ತಡೆಯಲು ಬಂದಿದ್ದು, ಆರೋಪಿ ಅವರನ್ನು ಪಕ್ಕದ ಕೋಣೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾನೆ. ನಂತರ ಅವರನ್ನು ಕೊಠಡಿಯಿಂದ ಹೊರಗೆ ಕರೆತಂದು ಯಾರಿಗೂ ಈ ವಿಷಯ ತಿಳಿಸಬೇಡಿ ಎಂದು ಬೆದರಿಕೆ ಹಾಕಿದ್ದಾನೆ ಎಂದು ಹೇಳಲಾಗಿದೆ.

ಆದರೆ ಮಗಳು ತುಂಬಾ ಧೈರ್ಯ ಮಾಡಿಕೊಂಡು ತಾಯಿ ಕಡೆಯವರನ್ನು ಸಂಪರ್ಕಿಸಿ ಘಟನೆ ವಿವರಿಸಿದ್ದಾಳೆ.

Chillies: ಯಾವ ಮೆಣಸಿನಕಾಯಿ

ನಂತರ ಪೊಲೀಸರು ದೂರು ನೀಡಿದ್ದಾರೆ. ಆಗಸ್ಟ್‌ 28ರ ಮಧ್ಯಾಹ್ನ ತಂದೆ ಕುಡಿದು ಮನೆಗೆ ಬಂದಿರುವುದಾಗಿಯೂ ಆವಾಗ ಕಿರುಕುಳ ನೀಡಿದ್ದು, ನಂತರ ಬುಧವಾರ ರಾತ್ರಿ ಮಲಗಿದ್ದ ವೇಳೆ ಮತ್ತೆ ಕಿರುಕುಳ ನೀಡಿದ್ದು, ಇದನ್ನು ಗಮನಿಸಿದ ತಾಯಿ ತಂದೆಯೊಂದಿಗೆ ಜಗಳ ಮಾಡಿದ್ದಾರೆ. ಇದರಿಂದಾಗಿ ಹಲ್ಲೆ ನಡೆಸಲಾಗಿದೆ ಎಂದು ಮಗಳು ಹೇಳಿಕೆ ನೀಡಲಾಗಿದೆ.

ವ್ಯಕ್ತಿಯನ್ನು ಗುರುವಾರ ಆತನ ಮನೆಯಿಂದ ಬಂಧಿಸಲಾಗಿದ್ದು, ಕೊಲೆ, ಸಾಕ್ಷ್ಯ ನಾಶ, ಅಕ್ರಮ ತಡೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.