Home latest ಕೌನ್ಸ್ ಲಿಂಗ್ ನೆಪದಲ್ಲಿ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ!! ಚರ್ಚ್ ಒಂದರ ಧರ್ಮಗುರುಗಳ ಮೇಲೆ ನೇರ...

ಕೌನ್ಸ್ ಲಿಂಗ್ ನೆಪದಲ್ಲಿ ಅಪ್ರಾಪ್ತ ಯುವತಿಗೆ ಲೈಂಗಿಕ ಕಿರುಕುಳ!! ಚರ್ಚ್ ಒಂದರ ಧರ್ಮಗುರುಗಳ ಮೇಲೆ ನೇರ ಆರೋಪ-ಆರೋಪಿಯನ್ನು ಬಂಧಿಸಿದ ಪೊಲೀಸರು

Hindu neighbor gifts plot of land

Hindu neighbour gifts land to Muslim journalist

17 ವರ್ಷದ ಅಪ್ರಾಪ್ತ ಯುವತಿಯನ್ನು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪತ್ತನಂತಿಟ್ಟ ಜಿಲ್ಲೆಯ ಮಲಂಕರ ಆರ್ಥೋಡೋಕ್ಸ್ ಸಿರಿಯನ್ ಚರ್ಚ್ ಒಂದರ ಪಾದ್ರಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೂಡಲ್ ಎಂಬಲ್ಲಿನ ಚರ್ಚ್ ಪಾದ್ರಿ ಪಾಂಡೈನ್ ಜಾನ್(35) ಎಂಬಾತನೇ ಬಂಧಿತ ವ್ಯಕ್ತಿ.

ಕಲಿಯುವುದರಲ್ಲಿ ನಿರಾಸಕ್ತಿ
ತೋರುತ್ತಿದ್ದಾಳೆಂದು ಯುವತಿಯನ್ನು ಆಕೆಯ ಹೆತ್ತವರು ಚರ್ಚ್
ಪಾದ್ರಿಯ ಮನೆಗೆ ಕರೆದುಕೊಂಡು ಬಂದಿದ್ದರು. ಈ
ವೇಳೆ, ಯುವತಿಗೆ ಕೌನ್ಸಿಲಿಂಗ್ ಕೊಡುವ ನೆಪದಲ್ಲಿ ಚರ್ಚ್ ಪಾದ್ರಿ ಯುವತಿಯನ್ನು ಕೋಣೆಗೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.

ಈ ರೀತಿಯಾಗಿ ಆತ ಎರಡು ಬಾರಿ ಅಪ್ರಾಪ್ತ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಮೊದಲ ಬಾರಿಗೆ ಚರ್ಚ್ ನಲ್ಲಿ ಕೊಠಡಿ ಒಂದಕ್ಕೆ ಕರೆದೊಯ್ದು ಅಸಭ್ಯವಾಗಿ ವರ್ತಿಸಿದ್ದ. ಆನಂತರ, ಮರುದಿನವೂ ಕೌನ್ಸಿಲಿಂಗ್ ನೀಡುವ ನೆಪದಲ್ಲಿ ಬರಲು ಹೇಳಿದ್ದಾನೆ. ಆದರೆ ಯುವತಿ ನಿರಾಕರಿಸಿದ್ದಾಳೆ. ಹೀಗಾಗಿ ಚರ್ಚ್ ಗೆ ಬರಲು ನಿರಾಕರಿಸಿದ್ದರಿಂದ ಪಾಂಡೈನ್ ಜಾನ್ ನೇರವಾಗಿ ಯುವತಿ ಮನೆಗೆ ಬಂದಿದ್ದಾನೆ. ಅಲ್ಲಿ ಆಕೆಯನ್ನು ಕೋಣೆಯಲ್ಲಿ ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ಬಗ್ಗೆ ಸಂತ್ರಸ್ತ ಹುಡುಗಿ ಶಾಲೆಯಲ್ಲಿ ತನ್ನ ಗೆಳತಿಯ ಬಳಿ ಹೇಳಿಕೊಂಡಿದ್ದಾಳೆ. ಆಕೆಯ ಗೆಳತಿ ವಿಚಾರವನ್ನು ಶಾಲಾಡಳಿತದ ಗಮನಕ್ಕೆ ತಂದಿದ್ದು, ಅವರು ಚೈಲ್ಡ್ ಲೈನ್ ಸೆಂಟರಿಗೆ ಮಾಹಿತಿ ನೀಡಿದ್ದಾರೆ. ಚೈಲ್ಡ್ ಲೈನ್ ನವರು ನೀಡಿದ ದೂರಿನಂತೆ ಮಹಿಳಾ ಠಾಣೆ ಪೊಲೀಸರು ಆರೋಪಿ ಪಾದ್ರಿಯನ್ನು ಬಂಧಿಸಿದ್ದಾರೆ.