Home International ಅಮೆರಿಕಾ- ಚೀನಾ ಮಧ್ಯೆ ಬಲೂನ್ ಬ್ಯಾಟಲ್ । ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ...

ಅಮೆರಿಕಾ- ಚೀನಾ ಮಧ್ಯೆ ಬಲೂನ್ ಬ್ಯಾಟಲ್ । ಚೀನಾ ಕೆಂಡಾಮಂಡಲ; ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ !

Hindu neighbor gifts plot of land

Hindu neighbour gifts land to Muslim journalist

ಚೀನಾ ಗುಪ್ತಚರ ಬಲೂನ್ ನ್ನು ಅಮೆರಿಕಾ ಹೊಡೆದುರುಳಿಸಿದ್ದು, ಇದಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡಿದೆ ಚೀನಾ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಬೆದರಿಕೆ ಹಾಕಿದೆ. ಅಮೆರಿಕದ ಭದ್ರತಾ ಸೂಕ್ಷ್ಮ ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ಹಾರಾಡುತ್ತಿದ್ದ ಚೀನಾದ ಸ್ಪೈ ಬಲೂನ್‌ ಬಗ್ಗೆ ಕ್ರಮ ಕೈಗೊಳ್ಳಲು ಜೋ ಬೈಡೆನ್‌ ಮಿಲಿಟರಿ ಅಧಿಕಾರಿಗಳ ಜೊತೆ ಚರ್ಚಿಸಿ ಅಧಿಕಾರಿಗಳಿಗೆ ಸೂಚಿಸಿದ್ದರು.

ಅಧ್ಯಕ್ಷ ಜೋ ಬಿಡೆನ್ ಅವರ ಸೂಚನೆ ಮೇರೆಗೆ, ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಬಲೂನ್‌ ಹೊಡೆದುರುಳಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ, ಹೊಡೆದುರುಳಿಸುವುದರಿಂದ ಕೆಳಗಿರುವ ಹಲವಾರು ಜನರಿಗೆ ಅಪಾಯವಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದರು.

ಅದರಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಅಮೆರಿಕಾದ ಫೈಟರ್‌ ಜೆಟ್‌ ಚೀನಾದ ಗುಪ್ತಚರ ಬಲೂನ್‌ನನ್ನು ಹೊಡದುರುಳಿಸಿದೆ. ಕೆರೊಲಿನಾ ಕರಾವಳಿಯಲ್ಲಿ ಪತ್ತೆಯಾದ ಸ್ಫೈ ಬಲೂನನ್ನು ಅಮೆರಿಕಾ ಹೊಡದುರುಳಿಸಿದೆ.

ವರದಿಗಳ ಪ್ರಕಾರ, ಹೊಡೆದುರುಳಿಸಲಾದ ಬಲೂನು ಜನವರಿ 28ರಂದು ಅಮೆರಿಕದ ವಾಯು ಪ್ರದೇಶವನ್ನು ಮೊದಲು ಪ್ರವೇಶಿಸಿತು. ಬಳಿಕ ಜನವರಿ 30ರಂದು ಕೆನಡಾ ಭಾಗಕ್ಕೆತಿರುಗಿತ್ತು. ನಂತರ ಮರುದಿನ ಮತ್ತೆ ಅಮೆರಿಕದ ಕಡೆ ಬಂದಿತ್ತು. ಆದರೆ, ಇದು ಸಾಗರ ಪ್ರದೇಶಕ್ಕೆ ಬರದೇ ಇದ್ದರಿಂದ ಶೂಟ್ ಮಾಡಲು ಕಷ್ಟವಾಗಿತ್ತು. ಕೊನೆಗೆ ನಿನ್ನೆ ಶನಿವಾರ ಈ ಬಲೂನನ್ನು ಕ್ಷಿಪಣಿ ಮೂಲಕ ಹೊಡೆದು ಹಾಕಲಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯವು ಈ ಬಲೂನ್ ಚೀನಾಕ್ಕೆ ಸೇರಿದ್ದು ಎಂದು ಶುಕ್ರವಾರ ದೃಢಪಡಿಸಿತ್ತು. ಇದು ಹವಾಮಾನ ಸಂಶೋಧನೆ ನಡೆಸುತ್ತಿರುವ ನಾಗರಿಕ ವಾಯುನೌಕೆಯಾಗಿದ್ದು, ಆಕಸ್ಮಿಕವಾಗಿ ಹಾರಿ ಹೋಗಿದೆ ಎಂದು ಹೇಳಿತ್ತು. ಅಮೆರಿಕಾ ಬಲೂನ್’ನ್ನು ಹೊರೆದುರುಳಿಸಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದಿಂದ ಅಂತಾರಾಷ್ಟ್ರೀಯ ಪ್ರಮಾಣಿತ ನಡಾವಳಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ. ಈ ಬಲೂನು ತಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ತರುವಂತಿತ್ತು ಎಂದು ಅಮೆರಿಕಾ ಹೇಳಿದ್ದು, ಬಲೂನು ಹೊಡೆಯುತ್ತಿರುವ ಬಗ್ಗೆ ಚೀನಾಗೆ ಮಾಹಿತಿಯನ್ನೂ ನೀಡಿತ್ತು ಎಂದು ಅಮೆರಿಕದ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಅಮೆರಿಕಾ ಮತ್ತು ಈಗ ಚೀನಾ ನಡುವೆ ಬಲೂನ್ ವಾರ್ ಶುರುವಾಗಿದ್ದು, ಅಮೆರಿಕಾದ ರಕ್ಷಣಾ ಬಲತಿಳಿಯಲು ಕಮ್ಯುನಿಸ್ಟ್ ಹಾರಿಸಿರೋ ಬಲೂನ್ ಇದಾಗಿದೆಯಂತೆ.
ಹೊಡೆದುರುಳಿಸಿದ ಬಲೂನು ಯಾವುದೇ ಬೇಹುಗಾರಿಕೆ ಕಾರ್ಯಕ್ಕೆ ಬಳಕೆಯಾಗುತ್ತಿರಲಿಲ್ಲ. ನಾಗರಿಕ ಸೇವೆ ಉದ್ದೇಶದಿಂದ ಆ ಪ್ರದೇಶದ ಬಳಿ ಹೋಗಿತ್ತು. ಆದರೆ, ಆಕಸ್ಮಿಕವಾಗಿ ಅದು ಅಮೆರಿಕ ಪ್ರದೇಶಕ್ಕೆ ಹಾದು ಹೋಗಿದೆ. ಅಷ್ಟಕ್ಕೆ ಅಮೆರಿಕ ಅತಿರೇಕವಾಗಿ ವರ್ತಿಸಿದೆ. ಅಮೆರಿಕದ ಈ ಕ್ರಮಕ್ಕೆ ತಾನು ಅಷ್ಟೇ ತೀವ್ರವಾಗಿ ಸ್ಪಂದಿಸುವ ಅಧಿಕಾರ ತನಗಿದೆ ಎಂದು ಚೀನಾ ಬೆದರಿಕೆ ಹಾಕಿದೆ.