Home Interesting 600 ರೂಪಾಯಿಯ ಕೋಳಿಗೆ 463 ರೂ.ಟಿಕೆಟ್ ತೆತ್ತು ಬಸ್ಸಿನಲ್ಲಿ ಪ್ರಯಾಣಿಸಿದ ಕೋಳಿ!

600 ರೂಪಾಯಿಯ ಕೋಳಿಗೆ 463 ರೂ.ಟಿಕೆಟ್ ತೆತ್ತು ಬಸ್ಸಿನಲ್ಲಿ ಪ್ರಯಾಣಿಸಿದ ಕೋಳಿ!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಟಿಕೆಟ್ ತೆಗೆದುಕೊಳ್ಳುವುದನ್ನು ನಾವೇ ಮರೆತಿರುತ್ತೇವೆ. ಆದರೆ, ಇಲ್ಲೊಂದು ಕೋಳಿ ಹಣ ಪಾವತಿಸಿ ಟಿಕೆಟ್ ಪಡೆದು ಪ್ರಯಾಣಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದೆ..!

ಹೌದು, ಪ್ರಯಾಣಿಕರೊಬ್ಬರು ಸೋಮವಾರ ಹೈದರಾಬಾದ್‌ನಿಂದ ಗಂಗಾವತಿಗೆ ಬರುವಾಗ ತಮ್ಮೊಡನೆ ಕೋಳಿಯೊಂದನ್ನು ತಂದಿದ್ದಾರೆ. ಸಾರಿಗೆ ನಿಯಮ ಪ್ರಕಾರ ಪಕ್ಷಿಗಳನ್ನು ಸಾಗಿಸಲು ಅರ್ಧ ಟಿಕೆಟ್ ಪಡೆದುಕೊಳ್ಳಬೇಕು.

ಆದರೆ, ಬಹುಪಾಲು ಜನರು ಬಚ್ಚಿಟ್ಟು ತರುವುದುಂಟು. ಇನ್ನು ಕೆಲವರು ಪಕ್ಷಿಗಳಿಗೆ ಟಿಕೆಟ್ ಯಾಕೆಂದು ತಗಾದೆ ತೆಗೆಯುವುದು ಸಾಮಾನ್ಯ. ಹೀಗಾಗಿ ಟಿಕೆಟ್ ದರಕ್ಕೆ ಗಂಗಾವತಿಯಲ್ಲೇ ಒಂದು ಕೋಳಿಯನ್ನು ಕೊಳ್ಳಬಹುದೆಂದು ನಿರ್ವಾಹಕರು ಕೋಳಿ ಮಾಲೀಕರಿಗೆ ತಿಳಿಸಿದ್ದಾರೆ.

ಆದರೆ, ಕೋಳಿ ಮೇಲಿನ ಪ್ರೀತಿಗೆ ಮಾಲೀಕರು ಟಿಕೆಟ್ ಪಡೆದು ತಮ್ಮೊಡನೆಯೇ ಕೋಳಿ ತರುವುದಲ್ಲದೆ, ಸಾರಿಗೆ ನಿಯಮವನ್ನೂ ಪಾಲಿಸಿದ್ದಾರೆ.