Home latest ಸಿನಿಮಾ,ರಿಯಾಲಿಟಿ ಶೋಗಳ ಬಾಲನಟರಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ!

ಸಿನಿಮಾ,ರಿಯಾಲಿಟಿ ಶೋಗಳ ಬಾಲನಟರಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ!

Hindu neighbor gifts plot of land

Hindu neighbour gifts land to Muslim journalist

ಸಿನಿಮಾ ರಿಯಾಲಿಟಿ ಶೋಗಳಲ್ಲಿ ಬಾಲನಟರ ದುರ್ಬಳಕೆಯನ್ನು ತಡೆಯಲು ಹೊಸ ನಿಯಮ ಜಾರಿಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ ಕರಡು ನಿಯಮವನ್ನು ರೂಪಿಸಿದೆ ಎಂದು ಹೇಳಲಾಗಿದೆ.

ಈ ನಿಯಮದ ಪ್ರಕಾರ ಮಕ್ಕಳು ಮದ್ಯಪಾನ, ಧೂಮಪಾನ ಮಾಡುವ ಅಥವಾ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವಂತೆ ಬಿಂಬಿಸಲು ನಿರ್ಬಂಧವಿರುತ್ತದೆ. ಅಲ್ಲದೆ, ಬಾಲ ನಟರ ಸಂಭಾವನೆಯಲ್ಲಿ ಅವರು ವಯಸ್ಕರಾಗುವವರೆಗೆ ಶೇಕಡ 20ರಷ್ಟನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇಡಬೇಕಾಗುತ್ತದೆ.

ನಿರ್ಮಾಪಕರು ಅದಷ್ಟು ಶಾಲಾ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ, ಶಾಲಾ ಅವಧಿಯಲ್ಲಿ ಶೂಟಿಂಗಿಗೆ ಕರೆದುಕೊಂಡು ಹೋದರೆ ಅಂತಹ ಸಂದರ್ಭದಲ್ಲಿ ಅವರಿಗೆ ಖಾಸಗಿ ಶಿಕ್ಷಕರನ್ನು ನೇಮಿಸಿ ನಿರ್ಮಾಪಕರು ಟ್ಯೂಶನ್ ಕೊಡಿಸಬೇಕು ಎಂಬುದು ಸೇರಿದಂತೆ ಹಲವಾರು ನಿಯಮಗಳನ್ನು ವಿಧಿಸಲಾಗುತ್ತದೆ ಎಂದು ತಿಳಿದುಬಂದಿದೆ.