Home Entertainment ವಿಮಾನದಲ್ಲಿ ಕಿಟಕಿ ಪಕ್ಕ ಸೀಟ್ ಬೇಕೆಂದು ಹೆಚ್ಚುವರಿ ಹಣ ಪಾವತಿಸಿ, ಪೇಚಿಗೆ ಸಿಲುಕಿದ ವ್ಯಕ್ತಿ!!! ಅಂಥದ್ದೇನಾಯಿತು?

ವಿಮಾನದಲ್ಲಿ ಕಿಟಕಿ ಪಕ್ಕ ಸೀಟ್ ಬೇಕೆಂದು ಹೆಚ್ಚುವರಿ ಹಣ ಪಾವತಿಸಿ, ಪೇಚಿಗೆ ಸಿಲುಕಿದ ವ್ಯಕ್ತಿ!!! ಅಂಥದ್ದೇನಾಯಿತು?

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ವಾಹನಗಳಲ್ಲಿ ಪ್ರಯಾಣಿಸುವಾಗ ಕಿಟಕಿ ಬದಿಯ ಸೀಟನ್ನು ಬಯಸದೇ ಇರುವವರೇ ವಿರಳ. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಯಣವೇ ಸುಂದರ. ಬಸ್ಸು, ಕಾರಿನಲ್ಲಿ ಪ್ರಯಾಣಿಸುವಾಗ ಕಿಟಿಕಿಯ ಬದಿಯ ಆಸನವೇ ಬೇಕೆಂದು ಹೆಚ್ಚಿನವರು ಬಯಸುತ್ತಾರೆ. ವಾಹನ ಬಿಡಿ!!! ಆಕಾಶದಲ್ಲಿ ತೇಲಾಡುವ ಅನುಭವದ ಬಗ್ಗೆ ವರ್ಣನೆ ಮಾಡುವ ಅವಶ್ಯಕತೆ ಇಲ್ಲ. ಹೀಗೆ, ವಿಮಾನದಲ್ಲಿ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಕಿಟಕಿ ಬದಿಯ ಸೀಟನ್ನು ಕಾಯ್ದಿರಿಸಿ ಹೆಚ್ಚುವರಿ ಹಣ ನೀಡಿ ಕಿಟಕಿ ಇರದ ಸೀಟ್ ದೊರೆತರೆ ಹೇಗಿರಬಹುದು???

ಕೋಪ ಬರೋದು ಫಿಕ್ಸ್!! ಇದೇ ರೀತಿ, ಹೆಚ್ಚುವರಿ ಹಣ ಪಾವತಿಸಿ, ವಿಂಡೋ ಸೀಟ್ ಬೇಕೆಂಬ ಹಂಬಲ ನೀರ ಮೇಲಿನ ಗುಳ್ಳೆಯಂತೆ ಖುಲಾಸೆಯಾದ ಘಟನೆ ನಡೆದಿದೆ. ಇದೀಗ, ಬ್ರಿಟಿಷ್ ಏರ್​ವೇಸ್​ ಮೂಲಕ ಲಂಡನ್​ನ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಪ್ರಕೃತಿಯ ಸೊಬಗನ್ನು ಸವಿಯಲು ಬಯಸಿದ ಅನಿರುದ್ಧ ಮಿತ್ತಲ್ ಬಲಭಾಗದ ಕಿಟಿಕಿಗಾಗಿ ಹೆಚ್ಚುವರಿ ಹಣ ಕೂಡ ಪಾವತಿ ಮಾಡಿದ್ದಾರೆ. . ಆದರೆ ವಿಮಾನವೇರಿ ಆಸನದ ಬಳಿ ಬಂದಾಗ ಪಕ್ಕದಲ್ಲಿ ಕಿಟಕಿಯೇ ಕಂಡುಬಂದಿಲ್ಲ ಎನ್ನಲಾಗಿದೆ. ಆಗ ಅನಿರುದ್ಧ ಅವರಿಗೆ ತೀವ್ರ ನಿರಾಶೆಯಾಗಿದ್ದು, ಹೀಗಾಗಿ, ಈ ಫೋಟೋ ಟ್ವೀಟ್ ಮಾಡುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಈ ಟ್ವೀಟ್​ ಅನ್ನು 4.6 ಲಕ್ಷ ಜನರು ವೀಕ್ಷಿಸಿದ್ದು 6,000ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

ಈ ಪೋಸ್ಟ್​ ನೋಡಿದ ಹೆಚ್ಚಿನವರು ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿದ್ದು, ತಾವು ಕೂಡ ಈ ರೀತಿಯ ಪ್ರಸಂಗಗಳನ್ನ ಎದುರಿಸಿದ್ದನ್ನು ಹೇಳಿಕೊಂಡಿದ್ದಾರೆ. ಕಿಟಕಿರಹಿತ ವಿಮಾನಪ್ರಯಾಣದ ಫೋಟೋ ಕೂಡ ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ಸುಂದರ ಕಿಟಕಿಯುಳ್ಳ ವಿಮಾನದ ಫೋಟೋ ಫೋಟೋಶಾಪ್​ ಮಾಡಿ ಟ್ವೀಟ್ ಮಾಡಿ ನೊಂದ ಪ್ರಯಾಣಿಕರ ಕಾಲೆಳೆಯುವ ಪ್ರಯತ್ನ ನಡೆಸಿದ್ದಾರೆ.