Home latest Brahmanda Guruji: ಮಗ ವಿನೋದ್ ರಾಜ್ ಬಗ್ಗೆ ಲೀಲಾವತಿಗೆ ನಂಬಿಕೆಯೇ ಇರಲಿಲ್ವೇ ?! ತಾಯಿ-ಮಗನ ಕುರಿತು...

Brahmanda Guruji: ಮಗ ವಿನೋದ್ ರಾಜ್ ಬಗ್ಗೆ ಲೀಲಾವತಿಗೆ ನಂಬಿಕೆಯೇ ಇರಲಿಲ್ವೇ ?! ತಾಯಿ-ಮಗನ ಕುರಿತು ಮತ್ತೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ

Brahmanda Guruji

Hindu neighbor gifts plot of land

Hindu neighbour gifts land to Muslim journalist

Brahmanda Guruji: ಕನ್ನಡ ಚಿತ್ರರಂಗ ಹಿರಿಯ ನಟ ಲೀಲಾವತಿ ತನ್ನ ಪುತ್ರ ವಿನೋದ್ ರಾಜ್‌ ನಾಯಕ ನಟನಾಗಬೇಕು ಹಿಟ್ ಸಿನಿಮಾ ನೋಡಬೇಕು ಅನ್ನೋದು ತಾಯಿ ಆಸೆ ಅಗಿತ್ತಂತೆ. ಹೀಗಾಗಿ ತಮ್ಮ 72ನೇ ವಯಸ್ಸಿನಲ್ಲೂ ಮಗನಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ವಿಚಾರಗಳನ್ನು ಬ್ರಹ್ಮಾಂಡ ಗುರೂಜಿ (Brahmanda Guruji) ಹಂಚಿಕೊಂಡಿದ್ದಾರೆ.

‘ಲೀಲಾವತಿ ಅಮ್ಮ ಸಿನಿಮಾ ಮಾಡಿಕೊಂಡು ಬ್ಯುಸಿಯಾಗಿರುತ್ತಿದ್ದರು ಆಗ ವಿನೋದ್ ರಾಜ್ ಕಾಡಿಗೆ ಹೋಗುತ್ತಿದ್ದರು. ಅದರಲ್ಲೂ ಲೀಲಾವತಿ ದೊಡ್ಡ ಸ್ಟಾರ್ ಅವರ ಮಗನಾಗಿ ಸಿನಿಮಾ ಕೊಡುತ್ತಿಲ್ಲ ಡೆವಲಪ್‌ ಮೆಂಟ್‌ ಇಲ್ಲ ಅಂದ್ರೆ ಯಾರಿಗೆ ಆದರೂ ಬೇಸರ ಆಗುತ್ತದೆ. ಆಗಿನ ಕಾಲದಲ್ಲಿ ರಾಜಕೀಯ ಹಾಗೆ ಇತ್ತು ..ಇವತ್ತಿಗೂ ರಾಜಕೀಯ ಇದೆ ಪ್ರೋತ್ಸಾಹ ಮಾಡುವುದಿಲ್ಲ. ಡೆವಲಪ್ ಆಗುತ್ತಿದ್ದೀರಾ ನಡೆ ನಡೆ ಎಂದು ಹೇಳುತ್ತಾರೆ. ಆದರೆ ಕೇರಳಾದಲ್ಲಿ ಸಣ್ಣ ಸಣ್ಣ ಕಲಾವಿದರಿಗೂ ಹಣ ಹಾಕುತ್ತಾರೆ ನಿರ್ಮಾಣ ಮಾಡುತ್ತಾರೆ ಅಲ್ಲಿ ಧೈರ್ಯ ಇದೆ ಹುಮ್ಮಸಿದೆ ಆದರೆ ನಮ್ಮಲ್ಲಿ ರಾಜಕೀಯ ಜಾಸ್ತಿ. ತೆಲುಗು ಸಿನಿಮಾದಲ್ಲೂ ರಾಜಕೀಯ ಇದೆ ನಮ್ಮ ಕುಟುಂಬನೇ ಬೆಳೆಯಬೇಕು ನಮ್ಮ ಕುಟುಂಬ ಡಾಮಿನೇಟ್ ಮಾಡಬೇಕು ಎಂದು’ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಬ್ರಹ್ಮಾಂಡ ಗುರೂಜಿ ಮಾತನಾಡಿದ್ದಾರೆ.

ಅಂತಹ ಸಮಯದಲ್ಲಿ ವಿನೋದ್ ರಾಜ್‌ಗೆ ಸಿನಿಮಾ ಇಲ್ಲದ ಕಾರಣ ನಿನಗೋಸ್ಕರ ಸಿನಿಮಾ ಮಾಡ್ತೀನಿ ಅಂತ ಲೀಲಮ್ಮ ಮಾಡಿದರು. ಆದರೆ ಯಾರಿಗೂ ಗೊತ್ತಿಲ್ಲ ಲೀಲಮ್ಮ ಅವರಿಗೆ ಸ್ವಾರ್ಥ ಇತ್ತು. ಏನೆಂದರೆ ನನ್ನ ಮಗ ಒಳ್ಳೆ ನಾಯಕಿ ಜೊತೆ ಸಿನಿಮಾ ಮಾಡಿ ಅಲ್ಲಿ ಹೀರೋಯಿನ್‌ ಜೊತೆ ಜೋಗಿ ಬಿಟ್ಟರೆ? ಅವಳ ಹಿಂದೆ ಹೋಗಿ ನನ್ನನ್ನು ಬಿಟ್ಟು ಬಿಟ್ಟರೆ? ನನ್ನ ಮಗ ನನ್ನ ಜೊತೆ ಇರಬೇಕು. ಲೀಲಾವತಿ ಅವರಿಗೆ ಒಂದೇ ಒಂದು ಆಸೆ ಇತ್ತು. ನನ್ನ ಮಗ ನನ್ನನ್ನು ಬಿಟ್ಟು ಹೋಗಬಾರದು ಎಂದು. ನನ್ನ ಮಗ ನನ್ನ ಜೊತೆಲೇ ಇರಬೇಕು ಅನ್ನೋ ಅಸೆ ಇತ್ತು. ಎಲ್ಲೋ ಒಂದು ಕಡೆ ಹೇಳಿಕೊಂಡಿದ್ದರು ನಾನು ಹೋದ ಮೇಲೆ ನನ್ನ ಮಗನ ಗತಿ ಏನು’ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ.

ಇದನ್ನು ಓದಿ: Murder Case: ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪಿದ 31ರ ಗೃಹಿಣಿ – ಮರಣೋತ್ತರ ಪರೀಕ್ಷೆ ವೇಳೆ ಬಯಲಾಯ್ತು ಅಚ್ಚರಿ ಸತ್ಯ

ಜಗತ್ತಿನ ಬಗ್ಗೆ ಕೇರ್ ಇಲ್ಲ . ತನ್ನ ಸಂಪೂರ್ಣ ಗಮನ ಮಗನೆ ಮೇಲೆ ಇಟ್ಟಿದ್ದರು ಅದು ಡಾಮಿನೇಷನ್‌. ನನಗೆ ಅವನು, ಅವನಿಗೆ ನಾನು ಅಷ್ಟೇ ಇರಬೇಕು ಅಂತ. ಚಿಕ್ಕ ವಯಸ್ಸಿನಿಂದಲೂ ವಿನೋದ್ ರಾಜ್‌ರನ್ನು ಹಾಗೆ ಬೆಳೆಸಿ ಬಿಟ್ಟಿದ್ದಾರೆ. ವಿನೋದ್ ರಾಜ್ ಎಂದೂ ತಾಯಿ ಮಾತು ಮೀರಿ ಏನೂ ಮಾಡುತ್ತಿರಲಿಲ್ಲ. ಇಬ್ಬರು ಹಾಕಿಕೊಂಡಿದ್ದ ಗೆರೆ ಇಬ್ಬರೂ ದಾಟುತ್ತಿರಲಿಲ್ಲ. 72ನೇ ವಯಸ್ಸಿನಲ್ಲಿ ವಿನೋದ್ ರಾಜ್‌ಗೆ ಸಿನಿಮಾ ಮಾಡಿದರು. ಅದು ಅವರ ಕೊನೆಯ ಸಿನಿಮಾ. ಲೀಲಮ್ಮ ಅವರಿಗೋಸ್ಕರ ಎಸ್‌ ನಾರಾಯಣ್ ಎರಡು ಸಿನಿಮಾ ಮಾಡಿದ್ದರು’ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ.