Home latest ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು|...

ಬಿಜೆಪಿ ಕಾರ್ಯಕರ್ತನ ಕೊಲೆ| ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಬರುವಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ ದುಷ್ಕರ್ಮಿಗಳು| ಪೊಲೀಸರಿಂದ ಇಬ್ಬರ ಬಂಧನ

Hindu neighbor gifts plot of land

Hindu neighbour gifts land to Muslim journalist

ಭಾರತೀಯ ಜನತಾ ಪಾರ್ಟಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಹಳೆ ದ್ವೇಷದ ಹಿನ್ನಲೆ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾಡ್ ನಲ್ಲಿ ಈ ಘಟನೆ ನಡೆದಿದೆ.

ಮೃತ ಯುವಕನನ್ನು ಹರಿಪಾದ್ ನ ಕುಮಾರಪುರಂ ಬಳಿಯ ವರ್ಯಂಕೋಡ್ವಿದ ಶರತ್ ಚಂದ್ರನ್ ( 26) ಎಂದು ಗುರುತಿಸಲಾಗಿದೆ.

11.30 ರ ಸುಮಾರಿಗೆ ಅಂದರೆ ಬುಧವಾರ ರಾತ್ರಿ ಚಂದ್ರನ್ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಈ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಹಿಂದೆ ಪುಥನ್ಕರಿಯಲ್ ದೇವಿ ದೇವಸ್ಥಾನದಲ್ಲಿ ಶರತ್ ನೊಂದಿಗೆ ವಾಗ್ವಾದ ನಡೆಸಿದ ದುಷ್ಕರ್ಮಿಗಳು, ನಿನ್ನೆ ಆತನಿಗಾಗಿ ದೇವಸ್ಥಾನದ ಬಳಿ ಕಾಯುತ್ತಿದ್ದರೆನ್ನಲಾಗಿದೆ. ಈ ವೇಳೆ ಮತ್ತೆ ಅವರ ಜೊತೆ ಜಗಳ ನಡೆದಿದೆ. ಈ ಸಂದರ್ಭದಲ್ಲಿ ಚಂದ್ರನ್ ಗೆ ಚೂರಿ ಇರಿದಿದ್ದಾರೆ. ಆ ಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತನಾಗಿದ್ದಾನೆ.

ಸುಮಾರು 7,8 ಮಂದಿ ಈ ಕೃತ್ಯದಲ್ಲಿ ಇದ್ದು, ಕೇವಲ ಇಬ್ಬರನ್ನು ಮಾತ್ರ ಗುರುತಿಸಲು ಸಾಧ್ಯವಾಗಿದೆ. ಅವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.