Home latest Bihar: 2 ಮಕ್ಕಳನ್ನು ಹೆತ್ತು, 10 ವರ್ಷ ಸಂಸಾರ ನಡೆಸಿದ ಈ ಪುಣ್ಯಾತ್ಗಿತ್ತಿ, ಗಂಡನ ತಂಗಿಯನ್ನೇ...

Bihar: 2 ಮಕ್ಕಳನ್ನು ಹೆತ್ತು, 10 ವರ್ಷ ಸಂಸಾರ ನಡೆಸಿದ ಈ ಪುಣ್ಯಾತ್ಗಿತ್ತಿ, ಗಂಡನ ತಂಗಿಯನ್ನೇ ಮದುವೆಯಾದ್ಲು!

Hindu neighbor gifts plot of land

Hindu neighbour gifts land to Muslim journalist

Bihar: ವಿವಾಹಿತ ದಂಪತಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಬಂದು ಅವರು ದೂರವಾಗುವುದು ಸಾಮಾನ್ಯ. ಬಳಿಕ ಅವರು ಹೊಸ ಹುಡುಗನನ್ನೋ ಅಥವಾ ಹೊಸ ಹುಡುಗಿಯನ್ನೋ ಹುಡುಕಿ ಮತ್ತೆ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಡುತ್ತಾರೆ. ಆದ್ರೆ ಇಲ್ವೊಬ್ಬಳು ಮಹಿಳೆ 10 ವರ್ಷ ತನ್ನ ಗಂಡನ ಜೊತೆ ಸಂಸಾರ ನಡೆಸಿ ಎರಡು ಮಕ್ಕಳಿಗೆ ಜನ್ಮ ನೀಡಿದ ನಂತರ ತನ್ನ ಪತಿಯ ತಂಗಿಯನ್ನೇ ವಿವಾಹವಾದ ವಿಚಿತ್ರ ಘಟನೆ ಬಿಹಾರ(Bihar)ದಲ್ಲಿ ನಡೆದಿದೆ.

ಹೌದು, 32 ವರ್ಷದ ಶುಕ್ಲಾ ದೇವಿ(Shukla devi) ಎಂಬಾಕೆ ಬಿಹಾರದ ಸಮಷ್ಟಿಪುರ(Samashtipura) ಜಿಲ್ಲೆಯ ನಿವಾಸಿಯಾಗಿರುವ ಪ್ರಮೋದ್ ದಾಸ್‌(Pramod Daas)ನನ್ನು ಮದುವೆಯಾಗಿದ್ದರು. ಬಳಿಕ ದಂಪತಿಯ ಮಧ್ಯೆ ಬಿರುಕು ಮೂಡಿದ ಪರಿಣಾಮ ಪರಸ್ಪರ ಬೇರೆಯಯಾಗಿದ್ದಾರೆ. ಆದರೀಗ ಶುಕ್ಲಾ ದೇವಿ ಎಲ್ಲರಿಗೂ ಅಚ್ಚರಿಯಾಗುವಂತಹ ವಿಚಾರವನ್ನು ಬಹಿರಂಗಪಡಿಸಿದ್ದು, ತನ್ನ ಗಂಡನ ತಂಗಿಯಾಗಿರುವ 18 ವರ್ಷದ ಸೋನು ದೇವಿ(Sonu Devi)ಯನ್ನು ಮದುವೆಯಾಗಿದ್ದಾಗಿ ಹೇಳಿಕೊಂಡಿದ್ದಾಳೆ.

ಗಂಡನಿಂದ ಬೇರ್ಪಟ್ಟ ನಂತರ ಕಳೆದ ಆರು ತಿಂಗಳ ಹಿಂದೆ ಸ್ವಂತ ನಾದಿನಿಯನ್ನೇ ಶುಕ್ಲಾ ದೇವಿ ವಿವಾಹವಾಗಿ ಪರಸ್ಪರ ಒಟ್ಟಿಗೆ ಬದಕಲು ಆರಂಭಿಸಿದ್ದಾರೆ. ಜೊತೆಹೆ ಎಲ್ಲಾ ರೀತಿಯ ಶಾಸ್ತ್ರ, ಸಂಪ್ರದಾಯಗಳಿಗೆ ಸೆಡ್ಡು ಹೊಡೆದು ನಮ್ಮ ಬದುಕು ನಮ್ಮ ಇಷ್ಟ ಎಂಬಂತೆ ಬದುಕುತ್ತಿದ್ದಾರಂತೆ. ಈಕೆ 10 ವರ್ಷಗಳ ಹಿಂದೆ ಮದುವೆಯಾಗಿರುವ ಪ್ರಮೋದ್ ದಾಸ್‌ ಮತ್ತು ಶುಕ್ಲಾ ದೇವಿ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶುಕ್ಲಾ ದೇವಿ, ‘ನಾವಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತೇವೆ. ಹೀಗಾಗಿ ನಾವು ಮದುವೆಯಾಗಿದ್ದೇವೆ. ಆತ ನನ್ನ ಗಂಡ ಆಗಿದ್ದರೆ ಏನಂತೆ? ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ವಾಸಿಸುತ್ತೇನೆ. ನಾವಿಬ್ಬರೂ ಮದುವೆಯಾದ ನಂತರ ಬಹಳ ಖುಷಿಯಾಗಿದ್ದೇವೆ. ಸೋನಿ ಬಹಳ ಒಳ್ಳೆಯ ಗೆಳತಿ’ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ದೇವಿ ಪತಿ ಪ್ರಮೋದ್ ದಾಸ್ ಮಾತನಾಡಿ, ‘ನನ್ನ ಪತ್ನಿ ಮತ್ತು ತಂಗಿಯ ಈ ಸಂಸಾರಕ್ಕೆ ತನ್ನ ಆಕ್ಷೇಪವಿಲ್ಲ. ಅವಳು ಖುಷಿಯಾಗಿದ್ದರೆ ನಾನೂ ಸಂತಸದಿಂದ ಇರುತ್ತೇನೆ. ಅವರಿಬ್ಬರೂ ಜತೆಯಾಗಿ ವಾಸಿಸಲು ಆರಂಭಿಸಿದ್ದಾರೆ’ ಎಂದು ಹೇಳಿದ್ದಾರೆ.

ಶುಕ್ಲಾ ದೇವಿ ತನ್ನ ನಾದಿನಿ ಜೊತೆ ವಿವಾಹವಾದ ನಂತರ ಹೆಸರನ್ನು ಸೂರಜ್ ಕುಮಾರ್ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೇ ಸೋನುಗೆ ತಾನು ಗಂಡನೆಂಬ ಭಾವನೆ ಬರಲು ತಲೆ ಕೂದಲನ್ನು ಕೂಡ ಕತ್ತರಿಸಿಕೊಂಡಿದ್ದಾರೆ. ಜೊತೆಗೆ ಗಂಡಸರಂತೆ ಉಡುಪುಗಳನ್ನು ಧರಿಸಲು ಆರಂಭಿಸಿದ್ದಾರೆ. ಶುಕ್ಲಾ ದೇವಿ ಮತ್ತು ಸೋನು ಪ್ರತ್ಯೇಕವಾಗಿ ಮನೆ ಮಾಡಿ ಸುಖ ಸಂಸಾರದಲ್ಲಿದ್ದಾಗ ಸೋನುವಿನ ತಂದೆ ತಾಯಿ ಬಂದು ಆಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿದ್ದಾರೆ ಎಂದು ಶುಕ್ಲಾ ದೇವಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾದ ನಂತರವೇ ಈ ಘಟನೆ ಬೆಳಕಿಗೆ ಬಂದಿದೆ. ಅಲ್ಲದೆ ಮುಂದೇನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.