Home latest Beauty Tips: ಮುಖದ ಅಂದವನ್ನೇ ಹಾಳು ಮಾಡೋ ‘ಬ್ಲಾಕ್ ಹೆಡ್’ ನಿಂದ ರೋಸಿಹೋಗಿದ್ದೀರಾ ?! ಹೀಗೆ...

Beauty Tips: ಮುಖದ ಅಂದವನ್ನೇ ಹಾಳು ಮಾಡೋ ‘ಬ್ಲಾಕ್ ಹೆಡ್’ ನಿಂದ ರೋಸಿಹೋಗಿದ್ದೀರಾ ?! ಹೀಗೆ ಮಾಡಿ, ಚಂದವಾಗಿ ಕಾಣಿರಿ

Hindu neighbor gifts plot of land

Hindu neighbour gifts land to Muslim journalist

 

 

Beauty Tips: ಸೌಂದರ್ಯ (beauty)ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಹೆಣ್ಣು ಅಂದ ಸೌಂದರ್ಯದ ಕಾಳಜಿ ಮಾಡುವ ವಿಷಯದಲ್ಲಿ ಹೆಚ್ಚು ಲಕ್ಷ್ಯ ವಹಿಸುತ್ತಾರೆ. ಹೆಚ್ಚಿನವರಿಗೆ ಬ್ಲಾಕ್ ಹೆಡ್ (Blackheads)ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಸ್ಟ್ ಹೀಗೆ ಮಾಡಿ!!ಬ್ಲಾಕ್ ಹೆಡ್ ಸಮಸ್ಯೆ ತ್ವಚೆಯ ಬಣ್ಣವನ್ನೇ(Skin Care)ಕುಗ್ಗಿಸುವ ಜೊತೆಗೆ ಮೂಗಿನ ಮೇಲೆ, ಕೆನ್ನೆ ಹಾಗೂ ಕೆಲವೊಮ್ಮೆ ಹಣೆಯ ಮೇಲೆ ಕಾಣಿಸಿಕೊಳ್ಳುತ್ತದೆ. ಇದರಿಂದ ಪರಿಹಾರ ಕಂಡುಕೊಳ್ಳಲು ಒದ್ದಾಡುವವರೆ ಹೆಚ್ಚು!

ಹೆಂಗೆಳೆಯರು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ಚರ್ಮದ ಆರೋಗ್ಯದ(Health) ದೃಷ್ಠಿಯಿಂದ ಇದು ಅವಶ್ಯಕವೆಂದರು ತಪ್ಪಾಗದು. ಅದರಲ್ಲಿಯೂ ಬ್ಲಾಕ್ ಹೆಡ್ ಮೂಗಿನ ತ್ವಚೆಯ ಮೇಲಿರುವ ರಂಧ್ರಗಳಲ್ಲಿ ಸೇರಿಕೊಳ್ಳುವ ಧೂಳು ಕೊಳೆ ಇಲ್ಲವೇ ಸತ್ತ ಜೀವಕೋಶಗಳು ಕಪ್ಪಾಗಿ ಉದ್ದಕ್ಕಿರುತ್ತದೆ. ತ್ವಚೆಯ ಜಿಡ್ಡಿನಾಂಶ ಕೂಡ ಇದರೊಂದಿಗೆ ಬೆರೆತುಕೊಳ್ಳುತ್ತದೆ. ಇದಕ್ಕೆ ಸರಳ ವಿಧಾನಗಳನ್ನು ಅನುಸರಿಸಿ ಪರಿಹಾರ ಕಂಡುಕೊಳ್ಳಿ!

ಮೊಟ್ಟೆಯ ಬಿಳಿ ಭಾಗವನ್ನು ಚೆನ್ನಾಗಿ ಕದಡಿ ನೊರೆ ಬಂದಾಗ ಅದಕ್ಕೆ ಜೇನುತುಪ್ಪ ಮತ್ತು ಲಿಂಬೆ ರಸ ಸೇರಿಸಿ, ಇದನ್ನು ಬ್ಲ್ಯಾಕ್ ಹೆಡ್ ಇರುವ ಜಾಗಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ಅಂದರೆ ಒಣಗಿದ ಬಳಿಕ ತಣ್ಣಗಿನ ನೀರಿನಲ್ಲಿ ಚೆನ್ನಾಗಿ ಮುಖ ತೊಳೆಯಿರಿ. ಯಾವುದೇ ಸೋಪು ಮಾತ್ರ ಬಳಕೆ ಮಾಡಬೇಡಿ. ನಿಮ್ಮ ತ್ವಚೆ ಸೂಕ್ಷ್ಮವಾಗಿದ್ದಲ್ಲಿ ಲಿಂಬೆ ಹಣ್ಣು ಬಳಸುವ ಅವಶ್ಯಕತೆ ಇಲ್ಲ. ಕೇವಲ ಜೇನುತುಪ್ಪ ಹಚ್ಚಿದರೆ ಸಾಕು!!ಮೊಡವೆಯ ಹಾಗೆ ಬ್ಲ್ಯಾಕ್ ಹೆಡ್ ಗಳನ್ನು ಯಾವುದೇ ಕಾರಣಕ್ಕೆ ಚಿವುಟಿ ತೆಗೆಯುವ ಪ್ರಯತ್ನ ಮಾಡಬೇಡಿ!!ಇದರಿಂದ ಹೆಚ್ಚಿನ ಬ್ಲ್ಯಾಕ್ ಹೆಡ್ ಹುಟ್ಟಲು ಕಾರಣವಾಗಬಹುದು.

 

ಇದನ್ನು ಓದಿ: ಈ ವರ್ಗದ ಜನರಿಗೆ ಬೊಂಬಾಟ್ ನ್ಯೂಸ್ – ಈ ಎಲ್ಲಾ ಯೋಜನೆಗಳಿಗೆ ಅರ್ಜಿ ಆಹ್ವಾನಿದೆ ಸರ್ಕಾರ !!