Home latest ‘ಬೇಬಿ ಬಂಪ್ ಫ್ಲೌಂಟಿಂಗ್ ‘ ಎಂಬ ಸಕತ್ ವ್ಯವಸಾಯ, ಹೊಕ್ಕುಳ ತೋರಿಸಿ ನಡೆದಿದೆ ಭರ್ಜರಿ ವ್ಯಾಪಾರ...

‘ಬೇಬಿ ಬಂಪ್ ಫ್ಲೌಂಟಿಂಗ್ ‘ ಎಂಬ ಸಕತ್ ವ್ಯವಸಾಯ, ಹೊಕ್ಕುಳ ತೋರಿಸಿ ನಡೆದಿದೆ ಭರ್ಜರಿ ವ್ಯಾಪಾರ !

Hindu neighbor gifts plot of land

Hindu neighbour gifts land to Muslim journalist

“ಜನನಿ ಜನ್ಮಭೂಮ್ಯಶ್ಚ ಸ್ವರ್ಗಾದಪಿ ಗರಿಯಸಿ ” ಅಂದರೆ ಹೆತ್ತ ತಾಯಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿನಂತೆ ಹೆಣ್ಣಿಗೆ ನಮ್ಮ ಭಾರತೀಯ ಪರಂಪರೆಯಲ್ಲಿ ಪಾವಿತ್ರ್ಯ ಹಾಗೂ ಅತ್ಯುನ್ನತವಾದ ಸ್ಥಾನಮಾನವಿದೆ. ಹೆಣ್ಣನ್ನು ದೈವಿ ಸ್ವರೂಪದಲ್ಲಿ ಕಾಣುವ ಸಂಸ್ಕೃತಿಯೂ ನಮ್ಮಲ್ಲಿದೆ.
ಪ್ರತಿ ಹೆಣ್ಣಿನ ಜೀವನದಲ್ಲಿ ತಾಯಿಯಾಗುವುದು ಮುಖ್ಯ ಘಟ್ಟವಾಗಿದ್ದು, ಗರ್ಭಾವಸ್ಥೆ ಎಂಬುದು ಮಾತೃತ್ವದ ಕಡೆಗೆ ಪ್ರಯಾಣಿಸುವ ಮತ್ತು ಅತ್ಯಂತ ಸೂಕ್ಷ್ಮ ಮತ್ತು ಹೆಚ್ಚು ವೈಯಕ್ತಿಕ ಕಾಲವಾಗಿದೆ.

ಆದರೆ ಬದಲಾಗುತ್ತಿರುವ ವರ್ತಮಾನದಲ್ಲಿ ಬಾಲಿವುಡ್ ಗರ್ಭಿಣಿ ನಟಿ ಮಣಿಯರ ” ಬೇಬಿ ಬಂಪ್ ಫ್ಲೌಂಟಿಂಗ್ ” ಎಂಬ ಹೆಸರಿನಲ್ಲಿ ಅರೆನಗ್ನ ಮತ್ತು ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸರಣ ಮಾಡುತ್ತಿದ್ದಾರೆ. ನಟಿಮಣಿಯರ ಈ ನಡೆಯಿಂದ ಹೆಣ್ಣಿಗಿರುವ ಗೌರವಕ್ಕೆ ದಕ್ಕೆಯಾಗುತ್ತಿರುವುದಲ್ಲದೆ ಸಾಮಾನ್ಯ ಕುಟುಂಬದ ಗರ್ಭಿಣಿ ಸ್ತ್ರೀಯರ ಮನಸ್ಸಿಗೂ ಲಜ್ಜೆ ಉಂಟಾಗಿ, ಸಮಾಜದಲ್ಲಿ ಸಹಜವಾಗಿ ವಿಹರಿಸಲು ಕೂಡ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ.

“ಬೇಬಿ ಬಂಪ್ ಫ್ಲೌಂಟಿಂಗ್ “ಹೆಸರಿನಲ್ಲಿ ಅರೆಬೆತ್ತಲೆ ಮತ್ತು ಅಶ್ಲೀಲ ಛಾಯಾಚಿತ್ರಗಳನ್ನು ಜಾಲತಾಣ ಅಲ್ಲದೆ ಪ್ರಸಾರ ಮಾಧ್ಯಮದಲ್ಲಿ ಪ್ರಸಾರ ಮಾಡುವುದು ಈಗಿನ ಗರ್ಭಿಣಿ ನಟಿಯರಿಗೆ ಟ್ರೆಂಡ್ ಆಗಿದ್ದು ಯುವಕರನ್ನು ಪ್ರಚೋದಿಸುವ ಮತ್ತು ತಪ್ಪು ಹಾದಿಗೆ ಎಳೆದೊಯ್ಯುವತ್ತ ಉದ್ರೇಕಿಸುವ ಕಾರ್ಯವು ಈ ನಟಿಯರಿಂದ ನಡೆಯುತ್ತಿರುವುದು ವಿಪರ್ಯಾಸ.
ಪಾಪ್ಯುಲಾರಿಟಿ ಗಳಿಸುವ ಧಾವಂತದಲ್ಲಿ ತಮ್ಮನ್ನೇ ಮಾರಿಕೊಳ್ಳುವ ವ್ಯಭಿಚಾರಿಕ ಪ್ರವೃತ್ತಿ ಹೆಚ್ಚುತ್ತಿದ್ದು ,ಹೆಣ್ಣನ್ನು ಆರಾಧಿಸುವ ಮನಸ್ಥಿತಿಯವರು ಕೂಡ ಹೆಣ್ಣಿನ ಬಗ್ಗೆ ಅಸಹ್ಯ ಭಾವನೆ ಮೂಡುವಂತಾಗಿದೆ.

ನಟಿಯರಾದ ಅನುಷ್ಕಾ ಶರ್ಮಾ, ಕರೀನಾ ಕಪೂರ್ ರಿಂದ ಹಿಡಿದು ಬಿಪಾಶಾ ಬಸುವರೆಗೆ ಈ ನಟಿಯರೆಲ್ಲರು ತಮ್ಮ ಗರ್ಭಿಣಿ ಹೊಟ್ಟೆಯನ್ನು ತೋರಿಸುತ್ತಿದ್ದಾರೆ.
‘ಬೇಬಿ ಬಂಪ್ ಫ್ಲೌಂಟಿಂಗ್ ಎಂದು ನಾಮಕರಣ ಮಾಡುತ್ತಾ ಗರ್ಭಾವಸ್ಥೆಯಲ್ಲಿ ದೊಡ್ಡದಾದ ಹೊಟ್ಟೆಯನ್ನು ಜಗತ್ತಿಗೆ ತೋರಿಸಲು ನವೀನ ಮಾರ್ಗಗಳನ್ನು ಬಳಸಿ ಛಾಯಾಚಿತ್ರವನ್ನು ತೆಗೆದು ಅಂಗಪ್ರದರ್ಶನ ಮಾಡುವುದು ಈ ನಟಿಯರಿಗೆ ಬಲವಾದ ಚಟದಂತಾಗಿದೆ. ಗರ್ಭಾವಸ್ಥೆ ಎಂಬುದು ಮಾತೃತ್ವದ ಅನುಭವವನ್ನು ಸವಿಯುವ ಸುಮಧುರ ಅನುಭವವಾಗಿದ್ದು , ಇದನ್ನು ತಮ್ಮ ಅಂಗಪ್ರದರ್ಶನ ಮಾಡುತ್ತಾ, ವ್ಯಕ್ತಿ ಸ್ವಾತಂತ್ಯದ ನೆಪದಲ್ಲಿ ಜಾಲತಾಣವನ್ನು ತಮ್ಮ ಖಾಸಗಿ ಫೋಟೋಗಳನ್ನೂ ಬಿತ್ತರಿಸುವ ಪ್ರಸರಣ ಮಾಧ್ಯಮವಾಗಿ ಬಳಸಿಕೊಳ್ಳುತ್ತಿರುವುದು ವಿಷಾದನೀಯ. ಇವರ ಈ ನಡೆಯಿಂದ ಸಾಮಾನ್ಯ ಮನೆತನದ ಗರ್ಭಿಣಿ ಸ್ತ್ರೀಯರ ಮನಸ್ಸಿಗೂ ಇರುಸು- ಮುರಿಸಿನ ಸ್ಥಿತಿ ಎದುರಾಗಿ ಹೊರ ಪ್ರಪಂಚಕ್ಕೆ ಕಾಲಿಡಲು ಕೂಡ ಮುಜುಗರ ಪಡುವಂತಾಗಿದೆ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 292 ಮತ್ತು 293 ರ ಅಡಿಯಲ್ಲಿ ‘ಅಶ್ಲೀಲತೆಯ ಪ್ರಸಾರ’ ಶಿಕ್ಷಾರ್ಹ ಅಪರಾಧವಾಗಿದೆ.
‘ರಣರಾಗಿಣಿ’ಯ ವತಿಯಿಂದ ಸೌ. ಸಂದೀಪ ಮುಂಜಾಲರವರು ಬಾಲಿವುಡ್ ನಟಿಯರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿ ಸ್ವಾತಂತ್ರ್ಯ ದ ನೆಪದಲ್ಲಿ ಬಾಲಿವುಡ್ ಗರ್ಭಿಣಿ ನಟಿಯರು ಅಂಗಪ್ರದರ್ಶನ ಮಾಡುವುದು ಸಂಸ್ಕೃತಿಗೆ ದಕ್ಕೆ ತರುತ್ತಿದೆ ಎಂದು ಆರೋಪಿಸಿ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರಮೋದಿ, ಕೇಂದ್ರ ಗೃಹ ಸಚಿವಾಲಯದ ಜೊತೆಗೆ ಬಿಜೆಪಿಯ ಹಿರಿಯ ನಾಯಕರಿಗೂ ಕೂಡ ದೂರು ಸಲ್ಲಿಸಿ, “ಬೇಬಿ ಬಂಪ್ ಫ್ಲೌಂಟಿಂಗ್ ” ಹೆಸರಿನಲ್ಲಿ ಅರೆಬೆತ್ತಲೆ ಛಾಯಾ ಚಿತ್ರ ಪ್ರಸಾರ ಮಾಡುತ್ತಿರುವ ನಟಿಯರ ಜೊತೆಗೆ ಬಿತ್ತರಿಸುವ ಮಾಧ್ಯಮದ ವಿರುದ್ಧವೂ ಅಪರಾಧ ದಾಖಲಿಸುವಂತೆ ಮನವಿ ಮಾಡಿದ್ದಾರೆ.