Home latest “‌ ರೈತರೇ, ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಮುಂದೆ ಕುಮಾರಣ್ಣ ಮನ್ನಾ ಮಾಡ್ತಾರೆ!”...

“‌ ರೈತರೇ, ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಮುಂದೆ ಕುಮಾರಣ್ಣ ಮನ್ನಾ ಮಾಡ್ತಾರೆ!” – ಅನಿತಾ ಕುಮಾರಸ್ವಾಮಿ

Hindu neighbor gifts plot of land

Hindu neighbour gifts land to Muslim journalist

ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ (Ramanagar MLA) ಅನಿತಾ ಕುಮಾರಸ್ವಾಮಿ (Anitha Kumaraswamy) ರೈತರು (Farmers) ಈಗ ಎಷ್ಟು ಬೇಕೆ ಅಷ್ಟು ಸಾಲ (loan) ಮಾಡಿಕೊಳ್ಳಿ ಅಂತ ಹೇಳಿದ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ರಾಮನಗರದಲ್ಲಿ ನಡೆದ ಜೆಡಿಎಸ್ (JDS) ಸಮಾರಂಭದಲ್ಲಿ ಕಳೆದ 20ನೇ ತಾರೀಖಿನಂದು ಅನಿತಾ ಕುಮಾರಸ್ವಾಮಿ ಈ ರೀತಿಯ ಹೇಳಿಕೆ ನೀಡಿದ್ದಾರೆ. “ರೈತರು ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ನಿಮ್ಮ ಕುಮಾರಣ್ಣ (HD Kumaraswamy) ಆ ಸಾಲವನ್ನು ಮನ್ನಾ ಮಾಡುತ್ತಾರೆ. ಕುಮಾರಣ್ಣನ ಸರ್ಕಾರ (Government) ಬಂದಾಗ ರೈತರ ಸಾಲ ಮನ್ನಾ (waived) ಆಗಲಿದೆ” ಎಂಬ ಅರ್ಥದ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಈಗ ವೈರಲ್ (Viral) ಆಗಿದೆ.

ಸ್ತ್ರೀ ಶಕ್ತಿ ಸಂಘಗಳು, ರೈತರು ಈಗ ನಿಮಗೆ ಎಷ್ಟು ಬೇಕೋ ಅಷ್ಟು ಸಾಲ ಮಾಡಿಕೊಳ್ಳಿ, ಮುಂದೆ ಜೆಡಿಎಸ್ ಅಧಿಕಾರಕ್ಕೆ ಬಂದಾಗ, ಕುಮಾರಸ್ವಾಮಿ ಸರ್ಕಾರ ಬಂದಾಗ ನಿಮ್ಮ ಸಾಲ ಮನ್ನಾ ಮಾಡಲಿದೆ ಅಂತ ಹೇಳಿದ್ದಾರೆ.
ಶಾಸಕಿ ಅನಿತಾ ಕುಮಾರಸ್ವಾಮಿ ನೀಡಿರುವ ಈ ಹೇಳಿಕೆಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಅನಿತಾ ಕುಮಾರಸ್ವಾಮಿ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

“ಸಾಲ ಎಷ್ಟು ಬೇಕಾದ್ರೂ ತಗೊಳಿ ಕುಮಾರಸ್ವಾಮಿ ಸಾಲಮನ್ನಾ ಮಾಡ್ತಾರೆ ಎನ್ನುವ ಎಚ್‌ಡಿಕೆ ಅವರ ಶ್ರೀಮತಿ ಹೇಳಿಕೆ ನೀಡಿರುವುದೇ ಹಾಸ್ಯಾಸ್ಪದ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದು ಹೀಗೆ ಮಾತನಾಡ್ತಾರಾ? ಇದನ್ನ ಜನರು ನಂಬಬೇಡಿ, ಇವರು ಕೇವಲ ವೋಟ್ ಹಾಕಿಸಿಕೊಳ್ಳಲು ಸುಳ್ಳು ಹೇಳ್ತಾರೆ ಅಂತ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಸಿಪಿ ಯೋಗೇಶ್ವರ್ ಕಿಡಿ ಕಾರಿದ್ದಾರೆ.