Home Entertainment Actress Bhamaa: “ಶೈಲೂ” ಸಿನಿಮಾ ಹೀರೋಯಿನ್‌ ವೈವಾಹಿಕ ಜೀವನದಲ್ಲಿ ಏರುಪೇರು | ಮಲಿಯಾಳಿ ಬೆಡಗಿಯ ದಾಂಪತ್ಯದಲ್ಲಿ...

Actress Bhamaa: “ಶೈಲೂ” ಸಿನಿಮಾ ಹೀರೋಯಿನ್‌ ವೈವಾಹಿಕ ಜೀವನದಲ್ಲಿ ಏರುಪೇರು | ಮಲಿಯಾಳಿ ಬೆಡಗಿಯ ದಾಂಪತ್ಯದಲ್ಲಿ ಬಿರುಕು

Hindu neighbor gifts plot of land

Hindu neighbour gifts land to Muslim journalist

ಮಗುವಿನಂತಹ ಮುಗ್ಧ ಚೆಲುವಿನ ಸೌಂದರ್ಯವನ್ನು ಹೊಂದಿರುವ ನಟಿ ಮಲಿಯಾಳಿ ಬೆಡಗಿ ಭಾಮಾ. ಈ ನಟಿಯ ವಿಷಯ ಈ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಕಾರಣ ಈ ಚೆಲುವೆ ತನ್ನ ವೈವಾಹಿಕ ಬದುಕಿಗೆ ಕೊನೆಯಾಡುತ್ತಿದ್ದಾರಾ ಎಂದು. ಹೌದು, ಇಂಥದ್ದೊಂದು ಸುದ್ದಿ ಎಲ್ಲಾ ಕಡೆ ವೈರಲ್‌ ಆಗಿದೆ. ಹಲವಾರು ಸಿನಿಮಾಗಳಲ್ಲಿ ಮಿಂಚಿ ಹೆಸರು ಮಾಡಿದ್ದ ನಟಿ ಭಾನಾ ತನ್ನದೇ ಆದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಗಣೇಶ್ ಜೊತೆ ನಟಿಸಿ ಶೈಲೂ ಪಾತ್ರದ ಮೂಲಕ ಹೈಲೈಟ್ ಆಗಿದ್ದ ಇವರು ಮದುವೆ ನಂತರ ಸಿನಿಮಾದಿಂದ ದೂರ ಉಳಿದಿರುವುದು ಎಲ್ಲರಿಗೂ ಗೊತ್ತು. ಪತಿ ಹಾಗೂ ಮಗುವಿನೊಂದಿಗೆ ಬ್ಯುಸಿಯಾಗಿದ್ದ ಭಾಮಾ ವೈವಾಹಿಕ ಲೈಫ್‌ ಎಂಜಾಯ್‌ ಮಾಡುತ್ತಿದ್ದರು. ಈಗ ನಟಿ ತನ್ನ ಪತಿಯಿಂದ ಬೇರೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಇದರಲ್ಲಿ ಎಷ್ಟು ಸತ್ಯಾಂಶವಿದೆ ? ಇದು ನಿಜಕ್ಕೂ ಹೌದಾ ?

2020ರಲ್ಲಿ ಉದ್ಯಮಿ ಅರುಣ್ ಅವರನ್ನು ಭಾಮಾ ಮದುವೆಯಾಗಿದ್ದರು. ಈ ದಂಪತಿಗೆ ಎರಡು ವರ್ಷದ ಮಗಳಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಟಿ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇದ್ದರು. ಆದರೆ ಈಗ ಪತಿಯ ಜೊತೆಗಿನ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದಾರೆ. ಮಗಳ ಫಸ್ಟ್​ ಬರ್ತ್​ಡೇ ಗ್ರ್ಯಾಂಡ್ ಆಗಿತ್ತು. ಎರಡನೇ ವರ್ಷದ ಬರ್ತ್ಡೇ ಫೋಟೋ ಆಗಲಿ ವಿಡಿಯೋ ಆಗಲಿ ಶೇರ್ ಮಾಡಿಲ್ಲ. ಇದರಿಂದ ಅಭಿಮಾನಿಗಳಿಗೆ ಈ ಸಂಶಯ ಕಾಡಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಮಲಯಾಳಿ ಬೆಡಗಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದಾ ಎಂಬ ಸಂಶಯದ ಆಧಾರದ ಮೇಲೆ ಎಲ್ಲಾ ಕಡೆ ಚರ್ಚೆ ಶುರುವಾಗಿದೆ.