Home latest 7th Pay Commission: ಮಾ.1 ರಿಂದ ಸರಕಾರಿ ಶಾಲಾ ಕಾಲೇಜು ಸೇರಿದಂತೆ ಸರಕಾರಿ ಕಚೇರಿಗಳು ಬಂದ್...

7th Pay Commission: ಮಾ.1 ರಿಂದ ಸರಕಾರಿ ಶಾಲಾ ಕಾಲೇಜು ಸೇರಿದಂತೆ ಸರಕಾರಿ ಕಚೇರಿಗಳು ಬಂದ್ : ಯಾವೆಲ್ಲ ಸೇವೆ ಇರುತ್ತೆ, ಇರಲ್ಲ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌!

7th Pay Commission

Hindu neighbor gifts plot of land

Hindu neighbour gifts land to Muslim journalist

7th Pay Commission: ವೇತನ ಪರಿಷ್ಕರಣೆಗೆ ಆಗ್ರಹಿಸಿ ಹಾಗೂ 7ನೇ ವೇತನ ಆಯೋಗ (7th Pay Commission) ಜಾರಿಗೆ ಒತ್ತಾಯಿಸಿ ಮಾರ್ಚ್ 1 ರಿಂದ ರಾಜ್ಯ ಸರಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿ, ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಸರಕಾರಿ ಸಂಬಂಧಿತ ಬಹುತೇಕ ಸೇವೆಗಳು ವ್ಯತ್ಯಯವಾಗಲಿದ್ದು, ಶಾಲಾ ಕಾಲೇಜುಗಳು ಬಂದ್ ಆಗಲಿವೆ.

ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ ನಲ್ಲಿ ಸರಕಾರಿ ನೌಕರರ ವೇತನ ಪರಿಷ್ಕರಣೆಯ ಕುರಿತಂತೆ ಯಾವುದೇ ಪ್ರಸ್ತಾಪ ಮಾಡಿರಲಿಲ್ಲ. ಅಲ್ಲದೆ ಹೊಸ ಪಿಂಚಣಿ ನೀತಿ ರದ್ದತಿಗೆ ಆಗ್ರಹಿಸಿ ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ. 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ನಾಳೆ ಅಂದರೆ ಮಾರ್ಚ್​ 01ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರಿಂದ ಸರ್ಕಾರಿ ಕರೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.

ಈ ಬಗ್ಗೆ ಇಂದು (ಫೆ.28) ಸುದ್ದಿ ಗೊಷ್ಠಿಯಲ್ಲಿ ಮಾತನಾಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಬಜೆಟ್​ನಲ್ಲಿ 7ನೇ ವೇತನ ಆಯೋಗ ಬಗ್ಗೆ ಪ್ರಸ್ತಾಪ ಮಾಡಿಲ್ಲ. ನಾಳೆಯಿಂದ (ಮಾ.01) ಸಾಮೂಹಿಕವಾಗಿ ಸರ್ಕಾರಿ ನೌಕರರು ಮುಷ್ಕರಕ್ಕೆ ಇಳಿಯಲಿದ್ದೇವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಎಲ್ಲಾ ಸರ್ಕಾರಿ ಸೇವೆಗಳು ಏಕ ಕಾಲದಲ್ಲಿ ಬಂದ್ ಆಗುತ್ತವೆ. ಸರ್ಕಾರ ಯಾವುದೇ ಕ್ರಮ ಕೈಗೊಂಡರೂ ನಾವು ಸ್ವಾಗತಿಸುತ್ತೇವೆ. ಯಾವುದೇ ಸಂಧಾನಕ್ಕೆ ನಾವು ಬಗ್ಗುವುದಿಲ್ಲ. 7ನೇ ವೇತನ ಆಯೋಗ ವರದಿ ಜಾರಿಯಾದ್ರೆ ಮಾತ್ರ ಮುಷ್ಕರ ಹಿಂದಕ್ಕೆ ಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದರು.

ಎಲ್ಲಾ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುತ್ತಿದ್ದು, ರಾಜ್ಯದ ಬಹುತೇಕ ಸೇವೆಗಳಿಗೆ ತೊಂದರೆಯಾಗಲಿದೆ.

ಮಾರ್ಚ್‌ 1 ರಿಂದ ಬಂದ್‌ ಆಗಲಿರುವ ಇಲಾಖೆಗಳು ಈ ಕೆಳಗಿನವು:

ಬಿಬಿಎಂಪಿ, ಸಚಿವಾಲಯದ ಎಲ್ಲಾ ಕಚೇರಿಗಳು, ವಿಧಾನಸೌಧದ ಕಚೇರಿಗಳು, ಗ್ರಾಮ ಪಂಚಾಯಿತಿ, ಸರಕಾರಿ ಆಸ್ಪತ್ರೆ, ಸರಕಾರಿ ಶಾಲೆಗಳು. ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರಕಾರಿ ಹಾಸ್ಟೆಲ್‌ಗಳು, ಪುರಸಭೆ, ತಾಲೂಕು ಕಚೇರಿ, ಜಿಲ್ಲಾ ಕಚೇರಿ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ,

ಸಿಗುವ ಸೌಲಭ್ಯಗಳು :

ಆಸ್ಪತ್ರೆ ತುರ್ತು ಚಿಕಿತೆ, ಕಾವೇರಿ ನೀರು ಸರಬರಾಜು, ಕೆಎಸ್‌ಆರ್‌ಟಿಸಿ, ವಿದ್ಯುತ್‌, ಬಿಎಂಟಿಸಿ ಬಸ್‌ ಸೌಲಭ್ಯ
ಬಸವರಾಜ ಬೊಮ್ಮಾಯಿಯವರು ಬಜೆಟ್ಟಿನಲ್ಲಿ ಏನು ಕೂಡ ಘೋಷಣೆ ಮಾಡಲಿಲ್ಲ. 2022 ರಲ್ಲಿ ವೇತನ ಆಯೋಗ ರಚನೆ ಮಾಡ್ಬೇಕು ಅಂತ ಹೇಳುತ್ತಾರೆ, ಆದರೆ ವೇತನ ಆಯೋಗ ರಚನೆಯಾಗಲಿಲ್ಲ. ಈಗ 9 ತಿಂಗಳ ಬಳಿಕ ಆಯೋಗ ರಚನೆಯಾಗಿದೆ. ಆದರೆ ಮಧ್ಯಂತರ ವರದಿ ತೆಗೆದುಕೊಂಡು ನಮಗೆ ವೇತನ ಇಂಪ್ಲಿಮೆಂಟ್ ಮಾಡಿ ಅಂತ ವಿನಂತಿ ಮಾಡಿದ್ದೆವು. ಆಗಲೂ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಎಲ್ಲವೂ ಬರೀ ಚರ್ಚೆಯಲ್ಲಿದೆ, ಬದಲಿಗೆ ಏನು ಸಹ ನಿರ್ಣಯಕ್ಕೆ ಬಂದಿಲ್ಲ. ಇಡೀ ದೇಶದಲ್ಲಿ ಕಡಿಮೆ ಕನಿಷ್ಟ ವೇತನ ಪಡೆಯುವವರು ನಮ್ಮ ಕರ್ನಾಟಕ ರಾಜ್ಯದವರು. ಬೇರೆ ರಾಜ್ಯಗಳಲ್ಲಿ ಈಗಾಗಲೇ ವೇತನ ಹೆಚ್ಚಾಗಿದೆ. ಇಂದು ಸಹ ನಮ್ಮಲ್ಲಿ 39% ಹುದ್ದೆ ಖಾಲಿ ಇದೆ. ಇಷ್ಟೆಲ್ಲ ಕೆಲಸ ಮಾಡಿ ಅಭಿವೃದ್ಧಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ ಎಂದು ಹೇಳಿದರು.

ಇಂದಿನ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಉಪಾಧ್ಯಕ್ಷ ರುದ್ರಪ್ಪ, ರಾಜ್ಯ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ, ರಾಜ್ಯ ಸರ್ಕಾರಿ ಶಾಲಾ ಕಾಲೇಜುಗಳು ಸಂಘದ ಅಧ್ಯಕ್ಷ ಶಂಭುಲಿಂಗ ಗೌಡ ಭಾಗಿಯಾಗಿದ್ದರು.