Home latest ಜ.12 ರಂದು ಈ ನಗರದ ಶಾಲಾ ಕಾಲೇಜಿಗೆ ರಜೆ ಘೋಷಣೆ

ಜ.12 ರಂದು ಈ ನಗರದ ಶಾಲಾ ಕಾಲೇಜಿಗೆ ರಜೆ ಘೋಷಣೆ

Hindu neighbor gifts plot of land

Hindu neighbour gifts land to Muslim journalist

ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಜ.12ರಂದು ಅವಳಿನಗರ ಹುಬ್ಬಳ್ಳಿ-ಧಾರವಾಡದದಲ್ಲಿ (Hubli-Dharwad) ನಡೆಯುವ 26ನೇ ರಾಷ್ಟ್ರೀಯ ಯುಜನೋತ್ಸವನ್ನು (National Youth Fest) ಉದ್ಘಾಟಿಸಲು ನಾಳೆ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಏರಪೋರ್ಟ್​ನಿಂದ ರೈಲ್ವೆ ಮೈದಾನದವರೆಗೆ 8 ಕಿಲೋ ಮೀಟರ್ ಮಾರ್ಗವನ್ನು ವಾಹನದಲ್ಲಿ ತೆರಳಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ (Mahesh Tenginkai) ಹೇಳಿದ್ದಾರೆ.

ರಾಷ್ಟ್ರೀಯ ಯುವಜನೋತ್ಸಕ್ಕೆ ಚಾಲನೆ ಹಿನ್ನೆಲೆ ನಾಳೆ‌ ಒಂದು ದಿನ ಹುಬ್ಬಳ್ಳಿ ನಗರದ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ಪ್ರಧಾನಮಂತ್ರಿಗಳು ಆಗಮನದ ಹಿನ್ನೆಲೆ, ಸಾರಿಗೆ ಬಸ್​ಗಳ ಓಡಾಟಕ್ಕೆ ಅನಾನುಕೂಲವಾಗುತ್ತದೆ. ಇದರಿಂದ ಗ್ರಾಮೀಣ ಭಾಗದಿಂದ ಬದುವ ಶಾಲಾ‌ ಕಾಲೇಜು ವಿದ್ಯಾರ್ಥಿಗಳಿಗೆ ಅಡಚಣೆಯಾಗಲಿದೆ. ಈ ಕಾರಣಕ್ಕಾಗಿ ಒಂದು ದಿನದ ರಜೆ ಘೋಷಿಸಲಾಗಿದೆ.