Home latest ಮೊಬೈಲ್ ನೀಡಿಲ್ಲವೆಂದು ಸೋದರನೊಂದಿಗೆ ಜಗಳವಾಡಿದ ಬಾಲಕಿ ಕೊನೆಗೆ ಸೇರಿದ್ದು ಮಸಣ | ಸಿಟ್ಟಿನಲ್ಲಿ ಸೋದರನ ಎದುರಲ್ಲೇ...

ಮೊಬೈಲ್ ನೀಡಿಲ್ಲವೆಂದು ಸೋದರನೊಂದಿಗೆ ಜಗಳವಾಡಿದ ಬಾಲಕಿ ಕೊನೆಗೆ ಸೇರಿದ್ದು ಮಸಣ | ಸಿಟ್ಟಿನಲ್ಲಿ ಸೋದರನ ಎದುರಲ್ಲೇ ಇಲಿ ಪಾಷಾಣ ಸೇವಿಸಿದ್ದಳಂತೆ ಈಕೆ !

Hindu neighbor gifts plot of land

Hindu neighbour gifts land to Muslim journalist

ಇತ್ತೀಚೆಗಂತೂ ಮಕ್ಕಳು ಫೋನ್ ಇರದೇ ಒಂದು ನಿಮಿಷ ಇರುವುದು ಕಷ್ಟ ಎಂಬಂತಾಗಿದೆ. ಮೊಬೈಲೇ ಜಗತ್ತು ಎಂಬಂತೆ ಮೊಬೈಲ್ ಮೇಲೆಯೇ ಅವಲಂಬಿಸಿರುತ್ತಾರೆ. ಇದೇ ತರಹ 16 ವರ್ಷದ ಬಾಲಕಿಯೊಬ್ಬಳು ಮೊಬೈಲ್ ಫೋನ್ ನಲ್ಲಿ ಆಟ ಆಡಲು ಸಹೋದರ ಬಿಡದ ಕಾರಣ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮುಂಬೈನ ಸಂತಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನುಪಡ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಅವಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಬೆಳಿಗ್ಗೆ ಸಾವನ್ನಪ್ಪಿದ್ದಾಳೆ.

ಪೊಲೀಸರ ಪ್ರಕಾರ, ಬಾಲಕಿ ಶನಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಸಂತಾ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಖರ್ಡೆ ಅವರು, ‘ಶುಕ್ರವಾರ ರಾತ್ರಿ 11.30 ರ ಸುಮಾರಿಗೆ ಈ ಘಟನೆ ನಡೆದಿದೆ. ಮೊಬೈಲ್ ನಲ್ಲಿ ಆಟ ಆಡುವ ಬಗ್ಗೆ 16 ವರ್ಷದ ಸಂತ್ರಸ್ತೆ ಮತ್ತು ಆಕೆಯ ಕಿರಿಯ ಸಹೋದರನ ನಡುವೆ ಸಣ್ಣ ಜಗಳವಾಗಿತ್ತು. ಇದರ ನಂತರ, ಹುಡುಗಿ ಹತ್ತಿರದ ವೈದ್ಯಕೀಯ ಅಂಗಡಿಯಿಂದ ಇಲಿ ವಿಷವನ್ನು ಖರೀದಿಸಿ ತನ್ನ ಕಿರಿಯ ಸಹೋದರನ ಮುಂದೆ ಸೇವಿಸಿದಳು. ಕಿರಿಯ ಸಹೋದರ ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ.

ಮನೆಯವರು ತಕ್ಷಣ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಹೋಗಿ ತನಿಖೆ ನಡೆಸಿದ್ದಾರೆ.