Home Education Teachers Recruitment: ಶೀಘ್ರವೇ ನಡೆಯಲಿದೆ 7,500 ಶಿಕ್ಷಕರ ನೇಮಕಾತಿ- ರಾಜ್ಯ ಶಿಕ್ಷಣ ಇಲಾಖೆಯಿಂದ ಹೊಸ ಘೋಷಣೆ

Teachers Recruitment: ಶೀಘ್ರವೇ ನಡೆಯಲಿದೆ 7,500 ಶಿಕ್ಷಕರ ನೇಮಕಾತಿ- ರಾಜ್ಯ ಶಿಕ್ಷಣ ಇಲಾಖೆಯಿಂದ ಹೊಸ ಘೋಷಣೆ

Teachers Recruitment

Hindu neighbor gifts plot of land

Hindu neighbour gifts land to Muslim journalist

Teachers appointment: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಶಿಕ್ಷಣ ಇಲಾಖೆ (Education Department) ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುತ್ತಿರುವ 5000 ಶಿಕ್ಷಕರಿಗೆ ಪರ್ಯಾಯವಾಗಿ 7,500 ಶಿಕ್ಷಕರ ನೇಮಕಾತಿಗೆ (Teachers Appointment) ಸಿದ್ಧತೆ ನಡೆಸಿದೆ.

2023ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ 4985 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಶಿಕ್ಷಣ ಇಲಾಖೆ ಕೋರಿರುವ ಪ್ರಸ್ತಾವನೆಯು ಆರ್ಥಿಕ ಇಲಾಖೆ (Finance Department) ಪರಿಶೀಲನೆ ನಡೆಸಿದೆ. ಇದಲ್ಲದೇ, ಹಿಂದಿನ ವರ್ಷದಲ್ಲಿ ಭರ್ತಿಯಾಗದೆ ಉಳಿದ 2,500 ಹುದ್ದೆಗಳ ಭರ್ತಿಗೆ ಇಲಾಖೆ ಸಿದ್ದತೆ ನಡೆಸಿದೆ. 2022-23ರ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ (Higher primary Schools) ಆರರಿಂದ ಎಂಟನೇ ತರಗತಿಗಾಗಿ ಖಾಲಿಯಿದ್ದ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಪ್ರಕ್ರಿಯೆ ನಡೆಸಲಾಗಿತ್ತು. ಈ ಪೈಕಿ 13352 ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ನ್ಯಾಯಾಲಯದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 12415 ಶಿಕ್ಷಕರನ್ನು ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ 2,500 ಹುದ್ದೆಗಳನ್ನು ಈಗ ತುಂಬಲು ಇಲಾಖೆ ನಿರ್ಧರಿಸಿದೆ.

ರಾಜ್ಯದಲ್ಲಿ 41,913 ಪ್ರಾಥಮಿಕ ಶಾಲೆಗಳಿದ್ದು,4844 ಪ್ರೌಢಶಾಲೆಗಳಿವೆ. ಪ್ರಾಥಮಿಕ ಶಾಲೆಗಳಲ್ಲಿ 188531 ಮಂಜೂರಾದ ಹುದ್ದೆಗಳಿವೆ. ಆದರೆ, ಕೇವಲ 148501 ಹುದ್ದೆಗಳು ತುಂಬಿದೆ. 40,030 ಖಾಲಿ ಹುದ್ದೆಗಳಿದ್ದು,ಪ್ರೌಢ ಶಾಲೆಗಳಲ್ಲಿ 44341 ಹುದ್ದೆಗಳಿದ್ದು, ಈಗ 34,186 ಹುದ್ದೆಗಳು ಭರ್ತಿಯಾಗಿದೆ. ಈಗ ಇರುವ ಖಾಲಿ ಹುದ್ದೆಯಲ್ಲಿ 50000ಯಾಗಿದ್ದು, ಇವುಗಳ ಪೈಕಿ 7,500 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಇದನ್ನು ಓದಿ: Healthy Food: ಈ ಒಂದು ತರಕಾರಿ ತಿಂದರೆ ಸಾಕು, ನಿಮ್ಮ ಆಯಸ್ಸು ಹೆಚ್ಚಾಗೋದು ಪಕ್ಕಾ!