Home Jobs Anganawadi Recruitment: ಮಹಿಳೆಯರಿಗೆ ಗುಡ್‌ನ್ಯೂಸ್‌, 10 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಾವಕಾಶ! ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ...

Anganawadi Recruitment: ಮಹಿಳೆಯರಿಗೆ ಗುಡ್‌ನ್ಯೂಸ್‌, 10 ಸಾವಿರಕ್ಕಿಂತಲೂ ಹೆಚ್ಚು ಉದ್ಯೋಗಾವಕಾಶ! ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ!

Anganawadi Recruitment

Hindu neighbor gifts plot of land

Hindu neighbour gifts land to Muslim journalist

Anganawadi Recruitment: ಮಹಿಳಾ ಮತ್ತು ಮಕ್ಕಳ ಇಲಾಖೆಯು ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ನೇಮಕ(Anganawadi Recruitment) ಮಾಡುವ ಕುರಿತು ಗುಜರಾತ್‌ ಅಂಗನವಾಡಿ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಮಹಿಳಾ ಅಭ್ಯರ್ಥಿಗಳು ಅಂಗನವಾಡಿ ಕೇಂದ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಗುಜರಾತ್‌ ಸರಕಾರದ ಸಾಮಾನ್ಯ ನೇಮಕಾತಿ ಪೋರ್ಟಲ್‌ ಮೂಲಕ e-hrms.gujart.gov.in ನಲ್ಲಿ ಸಲ್ಲಿಸಲು ಅವಕಾಶವಿದೆ.

ಆಸಕ್ತಿಯುಳ್ಳ ಅರ್ಜಿದಾರರು ನವೆಂಬರ್‌ 30, 2023 ರ ಕೊನೆಯ ದಿನಾಂಕದಂದು ಅಥವಾ ಮೊದಲು ಅರ್ಜಿ ಸಲ್ಲಿಸಬಹುದು. ಗುಜರಾತ್‌ ಸರಕಾರ ನಿಗದಿಪಡಿಸಿದ ನಿಯಮಗಳಿಗೆ ಅನುಸಾರವಾಗಿ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ನವಸಾರಿ, ಅಮ್ರೇಲಿ, ಸುಂದರ್‌ನಗರ, ವಡೋದರಾ, ರಾಜಕೋಟ್‌, ಪಟಾನ್‌, ಜುನಾಗಢ್‌, ನರ್ಮದಾ, ಸೂರತ್‌, ಬರೂಚ್‌, ತಾಪಿ, ಮೊರ್ಬಿ, ಜಾಮ್‌ನಗರ, ಅಹಮದಾಬಾದ್‌, ಆನಂದ್‌ ಮತ್ತು ವಡೋದರ ಜಿಲ್ಲೆಗಳಲ್ಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 10,400 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ನೇಮಕಾತಿ ಆಗಲಿದೆ.

ಇದನ್ನೂ ಓದಿ: Udupi Fire Tragedy: ಉಡುಪಿಯಲ್ಲಿ ದೀಪಾವಳಿ ಪೂಜೆ ವೇಳೆ ಅವಘಡ; ಏಳು ಬೋಟ್‌ಗಳಿಗೆ ಹತ್ತಿದ ಬೆಂಕಿ!!