Home Jobs CRPF Recruitment 2024: ಉದ್ಯೋಗಾಂಕ್ಷಿಗಳೇ ಗಮನಿಸಿ, CRPF ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ ವೇತನ...

CRPF Recruitment 2024: ಉದ್ಯೋಗಾಂಕ್ಷಿಗಳೇ ಗಮನಿಸಿ, CRPF ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ; ಮಾಸಿಕ ವೇತನ 69 ಸಾವಿರ!! ಇಂದೇ ಅರ್ಜಿ ಸಲ್ಲಿಸಿ!!

CRPF Recruitment 2024

Hindu neighbor gifts plot of land

Hindu neighbour gifts land to Muslim journalist

CRPF Recruitment 2024: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!ಕೇಂದ್ರ ಮೀಸಲು ಪೊಲೀಸ್‌ ಪಡೆ ಕ್ರೀಡಾ ಕೋಟಾದಡಿ ಖಾಲಿ ಇರುವ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ(CRPF Recruitment 2024) ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು , ಆಸಕ್ತರು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

ಕೇಂದ್ರ ಮೀಸಲು ಪೊಲೀಸ್‌ ಪಡೆ ಕ್ರೀಡಾ ಕೋಟಾದಡಿ ಖಾಲಿ ಇರುವ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, 169 ಜನರಲ್‌ ಡ್ಯೂಟಿ ಕಾನ್ಸ್‌ಟೇಬಲ್‌ ಹುದ್ದೆ ಖಾಲಿಯಿವೆ. ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.

ಇದನ್ನೂ ಓದಿ: Actor Darshan: ರಾಜ್ ಕುಟುಂಬದ ಕುಡಿ ಸೂರಜ್ ಗೆ ಬೆಂಗಾವಲಾಗಿ ನಿಂತ ಕಾಟೇರಾ ; ವೈರಲ್ ಆಯ್ತು ಫೋಟೋಸ್!!

ಕ್ರೀಡಾ ಕೋಟಾದಡಿ ಭರ್ತಿ ಮಾಡಲಿರುವ ಹಿನ್ನೆಲೆ ಜಿಮ್ನಾಸ್ಟಿಕ್, ಜುಡೊ, ಶೂಟಿಂಗ್, ಬಾಕ್ಸಿಂಗ್, ಅಥ್ಲೆಟಿಕ್ಸ್‌, ಆರ್ಚರಿ, ಕುಸ್ತಿ, ಸ್ವಿಮ್ಮಿಂಗ್, ವೈಟ್‌ ಲಿಫ್ಟಿಂಗ್, ಡೈವಿಂಗ್, ಹಾಕಿ, ಸ್ಕೇಟಿಂಗ್‌ ಮುಂತಾದ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಸಾಧನೆ ಮಾಡಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಿಆರ್‌ಪಿಎಫ್‌ ಕಾನ್ಸ್‌ಟೇಬಲ್ ಆಗಿ ನೇಮಕ ಆಗುವವರು ಸೀನಿಯರ್ ಕಾನ್ಸ್‌ಟೇಬಲ್, ಹೆಡ್‌ ಕಾನ್ಸ್‌ಟೇಬಲ್, ಅಸಿಸ್ಟಂಟ್ ಸಬ್‌ ಇನ್ಸ್‌ಪೆಕ್ಟರ್, ಸಬ್‌ ಇನ್ಸ್‌ಪೆಕ್ಟರ್, ಇನ್ಸ್‌ಪೆಕ್ಟರ್ ಮುಂತಾದ ಹುದ್ದೆಗಳಿಗೆ ಮುಂಭಡ್ತಿ ಪಡೆಯುವ ಅವಕಾಶವಿದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

* ಈ ಹುದ್ದೆಗೆ ಮೆಟ್ರಿಕ್ಯುಲೇಷನ್‌, ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿದರವರು ಅರ್ಜಿ ಸಲ್ಲಿಸಬಹುದು.

* ಅರ್ಜಿ ಸಲ್ಲಿಸುವವರ ಕನಿಷ್ಠ ವಯೋಮಿತಿ 18 ವರ್ಷ ಹಾಗೂ ಗರಿಷ್ಠ ವಯೋಮಿತಿ 23 ವರ್ಷವಾಗಿದೆ. ಮೀಸಲಾತಿ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆಯಿರಲಿದೆ. 

* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಸಾಮಾನ್ಯ / ಒಬಿಸಿ/ ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 100 ರೂ. ಪಾವತಿ ಮಾಡಬೇಕಾಗುತ್ತದೆ. ಎಸ್‌ಸಿ / ಎಸ್‌ಟಿ / ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸುವ ಅವಶ್ಯಕತೆಯಿಲ್ಲ. ಮೊದಲು ಅಭ್ಯರ್ಥಿಗಳನ್ನು ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ. ಇದಾದ ನಂತರ ದಾಖಲೆಗಳ ಪರಿಶೀಲನೆ / ಲಿಖಿತ ಪರೀಕ್ಷೆ / ದೈಹಿಕ ಸಾಮರ್ಥ್ಯ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 21,700-69,100 ರೂ. ಮಾಸಿಕ ವೇತನ ಪಾವತಿಸಲಾಗುತ್ತದೆ.

CRPF Recruitment 2024ರ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.