Home International Online Food: ಆನ್ಲೈನ್ ಅಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ್ರೆ ಗ್ಲಾಸಿನಲ್ಲಿ ಬಂದದ್ದು ‘ಮೂತ್ರ’ !!...

Online Food: ಆನ್ಲೈನ್ ಅಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ್ರೆ ಗ್ಲಾಸಿನಲ್ಲಿ ಬಂದದ್ದು ‘ಮೂತ್ರ’ !! ಯಾರದ್ದು ಗೊತ್ತಾ ?!

Online Food

Hindu neighbor gifts plot of land

Hindu neighbour gifts land to Muslim journalist

Online Food: ಅಮೆರಿಕದಲ್ಲಿ ವ್ಯಕ್ತಿಯೊಬ್ಬ ಆನ್‌ಲೈನ್‌ ಮೂಲಕ ಮಿಲ್ಕ್‌ಶೇಕ್‌ ಜೊತೆಗೆ ಇನ್ನಿತರ ಪದಾರ್ಥಗಳನ್ನು ಆರ್ಡರ್‌(Online Food)ಮಾಡಿದ್ದಾನೆ. ಹೀಗೆ ಆರ್ಡರ್ ಮಾಡಿದಾಗ ಮಿಲ್ಕ್ ಶೇಕ್ ಬದಲು ಗ್ಲಾಸ್ ಮೂತ್ರ ಸಿಕ್ಕಿದ್ದು, ಇದರಿಂದ ಗ್ರಾಹಕ ಶಾಕ್ ಆಗಿದ್ದು,ಈ ವಿಷಯವನ್ನು ಆತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕೂಡ ರೆಸ್ಟೋರೆಂಟ್ ವಿರುದ್ದ ಹರಿಹಾಯ್ದಿದ್ದಾರೆ.

ಸಾರಾಟೋಗ ಸ್ಪ್ರಿಂಗ್ಸ್‌ ನಿವಾಸಿಯಾದ ಕ್ಯಾಲೆಬ್‌ ವುಡ್ಸ್‌ ಎಂಬುವರು ಗ್ರಬ್‌ಹಬ್‌ (GrubHub) ಎಂಬ ಆ್ಯಪ್ ಮೂಲಕ ಚಿಕ್‌-ಫಿಲ್‌-ಎ ಎಂಬ ಹೋಟೆಲ್‌ನಿಂದ ಫ್ರೈಸ್‌ (ಫಿಂಗರ್‌ ಚಿಪ್ಸ್‌), ಮಿಲ್ಕ್‌ ಶೇಕ್‌ ಆರ್ಡರ್‌ ಮಾಡಿದ್ದು, ಗ್ರಬ್‌ಹಬ್‌ ಫುಡ್‌ ಡೆಲಿವರಿ ಬಾಯ್‌ ಇವರ ಮನೆಗೆ ಪಾರ್ಸೆಲ್‌ ನೀಡಿದ್ದಾರೆ. ಕ್ಯಾಲೆಬ್‌ ವುಡ್‌ ಫ್ರೈಸ್‌ ತಿಂದಿದ್ದಾರೆ. ಆ ಬಳಿಕ ಮಿಲ್ಕ್‌ ಶೇಕ್‌ ಆರ್ಡರ್‌ ಮಾಡಿದ ಸಂದರ್ಭ ಗ್ಲಾಸ್‌ನಲ್ಲಿರುವುದು ಮಿಲ್ಕ್‌ ಶೇಕ್‌ ಆಗಿರದೆ ಮೂತ್ರ ಎಂಬ ವಿಚಾರ ಬಯಲಾಗಿದೆ.ಕ್ಯಾಲೆಬ್‌ ವುಡ್ಸ್‌ ಅವರು ಗ್ಲಾಸ್‌ನಲ್ಲಿರುವ ಪಾನೀಯವನ್ನು ಕುಡಿದ ಬಳಿಕ ಅದು ಮಿಲ್ಕ್‌ಶೇಕ್‌ ಅಲ್ಲ ಮೂತ್ರ ಎಂಬುದು ತಿಳಿದಿದೆ. ಆ ಬಳಿಕ, ಗ್ರಬ್‌ಹಬ್‌ ಡ್ರೈವರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ ಎಂದು ಕ್ಯಾಲೆಬ್‌ ವುಡ್ಸ್‌ ತಿಳಿಸಿದ್ದಾರೆ. ಸದ್ಯ, ಕೆಲ ನೆಟ್ಟಿಗರು ಆನ್‌ಲೈನ್‌ ಡೆಲಿವರಿ (Online Delivery)ಸಂಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

https://t.co/Au8yLSGrXg

ಇದನ್ನೂ ಓದಿ: Anna Bhagya Scheme: ಬೆಳ್ಳಂಬೆಳಗ್ಗೆಯೇ BPL ಕಾರ್ಡ್ ದಾರರಿಗೆ ಶಾಕ್- ಈ ತಿಂಗಳು ಬೇಗ ರೇಷನ್ ಸಿಗುವುದು ಡೌಟ್ !!